ರಿಪ್ಪನ್‌ಪೇಟೆ;- ಸಮೀಪದ ಮೂಗುಡ್ತಿ ಗ್ರಾಮದ ಕೋಮಲಾಪುರ ನಿವಾಸಿ ಮಂಜನಾಯ್ಕ್ (85) ಸಾಲದ ಬಾಧೆಯಿಂದ ಕಳೆನಾಶಕ ಸೇವಿಸಿ ಸಾವನ್ನಪ್ಪಿರುವ ಘಟನೆ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಜುನಾಯ್ಕ್ ಬಿನ್ ಕೊಲ್ಲನಾಯ್ಕ ಸುಮಾರು (85) ವರ್ಷಎಂಬುವರಿಗೆ ತಕ್ಷಣ ಅವರನ್ನು ರಿಪ್ಪನ್‌ಪೇಟೆಯ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸಗಾಗಿ ಕರೆತರಲಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗಿತು ಚಿಕಿತ್ಸೆ ಫಲಕಾರಿಯಾಗಿದೆ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ.
3
ಇವರು ತಳಲೆ ವಿ.ಎಸ್.ಎಸ್.ಎನ್.ಬಿ.ಯಲ್ಲಿ 1.15.000 ಬೆಳೆ ಸಾಲ ಮತ್ತು 50.000.00 ಸಾವಿರ ವೈಯಕ್ತಿಕ ಸಾಲ ಹಾಗೂ ಕೈಗಡ ಸಾಲ ಸಹ 3.50.000.00 (ಮೂರುವರೆ) ಲಕ್ಷ ರೂ ಸಾಲ ಮಾಡಿದ್ದುಬೆಳೆಯ ಸರಿಯಾಗಿ ಬಾರದೇ ಇರುವುದು ಮತ್ತು ಬೇಸಿಗೆ ಬಿಸಿಲಿನಿಂದಾಗಿ ತೋಟ ಒಣಗುತ್ತಿದ್ದು ಪಡೆದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ತಳಲೆ ಸಹಕಾರ ಬ್ಯಾಂಕ್ ನೋಟಿಸಿನಿಂದಾಗಿ ಬೇಸತ್ತು ವಿಷ ಸೇವಿಸಿದ್ದಾರೆಂದು ಮಗ ಪುಟ್ಟಸ್ವಾಮಿ ನೀಡಿದ ದೂರಿನನ್ವಯ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.