Headlines

ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಮನೆ ಮೇಲೆ ದಾಳಿ – ಮಾಲು ಸಮೇತ ಓರ್ವನ ಬಂಧನ|excise

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮದ ವಾಸಿಯಾದ  ಪ್ರದೀಪ ಬಿನ್ ಸುಬ್ಬಪ್ಪ ಈತನು  ಅಕ್ರಮವಾಗಿ ಮದ್ಯ ಹೊಂದಿ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಹೊಸನಗರ ಅಬಕಾರಿ ಇಲಾಖೆಯವರು ದಾಳಿ ನಡೆಸಿ ಸುಮಾರು 09 ಲೀಟರ್ ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.




ಈ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಪ್ರದೀಪ್ ವಿರುದ್ದ ಕೇಸ್ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಬಕಾರಿ ಆಯುಕ್ತರು ಬೆಂಗಳೂರು ಹಾಗೂ ನಾಗರಾಜಪ್ಪ ಟಿ ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗರವರ ಮಾರ್ಗದರ್ಶನದಲ್ಲಿ ಕ್ಯಾಪ್ಟನ್ ಅಜಿತ್ ಕುಮಾರ್ ಅಬಕಾರಿ ಉಪ ಆಯುಕ್ತರು ಶಿವಮೊಗ್ಗ ಜಿಲ್ಲೆ ರವರ ನಿರ್ದೇಶನದಂತೆ ಹಾಗೂ ಶಿವ ಪ್ರಸಾದ್ ಅಬಕಾರಿ ಉಪ ಅಧೀಕ್ಷಕರು ತೀರ್ಥಹಳ್ಳಿ ರವರ ಆದೇಶದಂತೆ ಹೊಸನಗರದ ಅಬಕಾರಿ ನಿರೀಕ್ಷಕ ನಾಗರಾಜ್‌ರವರ ನೇತೃತ್ವದಲ್ಲಿ ದಾಳಿ ನಡೆದಿದೆ.




ಈ ದಾಳಿಯ ಸಂದರ್ಭದಲ್ಲಿ ಶಿವಪ್ರಸಾದ್ ಅಬಕಾರಿ ಉಪ ಅಧಿಕ್ಷಕರು, ತೀರ್ಥಹಳ್ಳಿ ಉಪ ವಿಭಾಗ, ನಾಗರಾಜ ಅಬಕಾರಿ ನಿರೀಕ್ಷಕರು, ವಾಸವಿ. ಟಿ. ಎನ್ ಅಬಕಾರಿ ಉಪ ನಿರೀಕ್ಷಕರು ಸಿಬ್ಬಂದಿಗಳಾದ ಪ್ರಕಾಶ್ ಕೆ, ರಾಘವೇಂದ್ರ ಟಿ, ಪಾಂಡು ಅಂಬವ್ವಗೊಳ್ ಹಾಗೂ ವಾಹನ ಚಾಲಕರಾದ ಬಸವರಾಜ್ ಮತ್ತು ಪ್ರಸನ್ನ ರವರು ಉಪಸ್ಥಿತರಿದ್ದರು.



Leave a Reply

Your email address will not be published. Required fields are marked *