ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ (Hosanagara) ತಾಲೂಕಿನ ರಿಪ್ಪನ್‌ಪೇಟೆಯ ಸಿದ್ದಪ್ಪನಗುಡಿ ಬಳಿ ಅಬಕಾರಿ ಅಧಿಕಾರಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ಅಕ್ರಮ ಮದ್ಯವನ್ನು(liquor) ವಶಕ್ಕೆ ತೆಗೆದುಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ರಿಪ್ಪನ್‌ಪೇಟೆ ಸಮೀಪದ ಸಿದ್ದಪ್ಪನಗುಡಿ ಸರ್ಕಲ್ ನಲ್ಲಿ ಅಬಕಾರಿ ಅಧಿಕಾರಿಗಳು ರಸ್ತೆಗಾವಲು ನಡೆಸುತ್ತಿರುವಾಗ ಅಕ್ರಮವಾಗಿ ಬೈಕ್ ನಲ್ಲಿ ಸುಮಾರು 25.92 ಲೀಟರ್ ಮದ್ಯವನ್ನು ಸಾಗಾಟ ನಡೆಸುತ್ತಿದ್ದು ಅಕ್ರಮ ಮದ್ಯ,ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಯನ್ನು ಬಂಧಿಸಿದ್ದಾರೆ.
ಆಯುಕ್ತರು ಮಂಗಳೂರು ವಿಭಾಗ ರವರ ನಿರ್ದೇಶನದಲ್ಲಿ ಹಾಗೂ ಮಾನ್ಯ ಅಬಕಾರಿ ಉಪ ಆಯುಕ್ತರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಹಾಗೂ ಅಬಕಾರಿ ಉಪ ಅಧೀಕ್ಷಕರು ಹೊಸನಗರ ಉಪವಿಭಾಗ ಹೊಸನಗರ ರವರ ಹಾಗು ಅಬಕಾರಿ ನಿರೀಕ್ಷಕರು ಹೊಸನಗರ ವಲಯ ಹೊಸನಗರ ರವರ ಮಾರ್ಗದರ್ಶನದಲ್ಲಿ ರಿಪ್ಪನಪೇಟೆ -ಶಿವಮೊಗ್ಗ ಮುಖ್ಯ ರಸ್ತೆಯ ಸಿದ್ದಪ್ಪನಗುಡಿ ಗುಡಿ ಕ್ರಾಸ್ ನಲ್ಲಿ ರಸ್ತೆಗಾವಲು ನಡೆಸಿ ವಾಹನ ತಪಾಸಣೆ ಮಾಡುತ್ತಿರುವಾಗ ಹೀರೋ ಹೋಂಡಾ ಗ್ಲಾಮರ್ ದ್ವಿಚಕ್ರ ವಾಹನ(K A 15 L 4425)ದಲ್ಲಿ ಒಬ್ಬ ವ್ಯಕ್ತಿಯು ಅಕ್ರಮವಾಗಿ 25.92 ಲೀಟರ್ ಮಧ್ಯವನ್ನು ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ದ್ವಿಚಕ್ರವಾಹನ ಸಮೇತ ಮುದ್ದೆಮಾಲನ್ನು ಜಪ್ತುಪಡಿಸಿ ಘೋರ ಪ್ರಕರಣ ದಾಖಲಿಸಲಾಗಿದೆ ಆರೋಪಿಯನ್ನು ನ್ಯಾಯಾಲಯ ಬಂಧನಕ್ಕೆ ಒಪ್ಪಿಸಲಾಗಿದೆ
ವಶಪಡಿಸಿಕೊಂಡಿರುವ ಮದ್ಯ ಮತ್ತು ವಾಹನ ಒಟ್ಟು ಮೌಲ್ಯ 71000 ರೂ. ಆಗಿದ್ದು ದಾಳಿಯಲ್ಲಿ ಅಬಕಾರಿ ಕಾನ್ಸ್‌ಟೇಬಲ್ ಮಲ್ಲಿಕ್ ಕೆ.ಜಿ, ರಾಕೇಶ್ ಎಂ.ಕೆ, ಶಕೀಲ್ ಅಹಮದ್, ವಾಹನ ಚಾಲಕ ಅಮಿತ್ ಬಿ.ಕೆ ಮತ್ತು ಪ್ರಸನ್ನರವರು ಪಾಲ್ಗೊಂಡಿದ್ದರು.