ತರೀಕೆರೆಯಲ್ಲಿ ಚುನಾವಣಾ ಸಿಬ್ಬಂದಿ ಭರ್ಜರಿ ಬೇಟೆಯಾಡಿದ್ದಾರೆ. ಬರೋಬ್ಬರಿ 23 ಕೋಟಿ ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ. ಸೀಜ್ ಆದ ಬಂಗಾರದ ತೂಕ 40 ಕೆ.ಜಿ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಎಂ.ಸಿ ಹಳ್ಳಿ ಪೋಲಿಸ್ ಚೆಕ್ ಪೋಸ್ಟ್ ನಲ್ಲಿ ಚೆಕ್ ಪೋಸ್ಟ್ ನಲ್ಲಿ ಬರೋಬ್ಬರಿ 40 ಕೆ.ಜಿ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಚಿನ್ನವನ್ನು ಕಂಟೇನರ್‌ನಲ್ಲಿ ಸಾಗಿಸಲಾಗುತ್ತಿತ್ತು.ಚೆಕ್‌ಪೋಸ್ಟ್‌ನಲ್ಲಿ ಕಂಟೇನರ್ ತಡೆದು ತಪಾಸಣೆ ನಡೆಸಿದಾಗ ಆಭರಣಗಳು ಸಾಗಿಸುತ್ತಿರುವುದು ಕಂಡುಬಂದಿದೆ.
ಆಭರಣಗಳಿಗೆ ಪೂರಕವಾಗಿ ಯಾವುದೇ ದಾಖಲೆಗಳು ನೀಡದೇ ಹಿನ್ನೆಲೆಯಲ್ಲಿ ಅದನ್ನು ಸೀಜ್ ಮಾಡಲಾಗಿದೆ. ಆಭರಣಗಳನ್ನು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಟ್ಯಾಕ್ಸ್ ಕಟ್ಟಬೇಕಾಗುತ್ತದೆ ಎಂಬ ಕಾರಣಕ್ಕೆ ಬಿಲ್ ಇಲ್ಲದೇ ಕೋಟ್ಯಾಂತರ ಮೌಲ್ಯದ ಚಿನ್ನ ಹಾಗೂ ಗುಟ್ಕಾ ಹಾಗೂ ಬಟ್ಟೆ ಮತ್ತು ದಿನಸಿ ವಸ್ತುಗಳನ್ನು ಶಿವಮೊಗ್ಗಕ್ಕೆ ಸಾಗಿಸಲಾಗುತ್ತದೆ.
ಸದ್ಯ ಚೆಕ್ಪೋಸ್ಟ್ಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆ ನಡೆಯುತ್ತಿರುವುದರಿಂದ ಇಷ್ಟೊಂದು ದೊಡ್ಡ ಮೊತ್ತದ ಚಿನ್ನ ಸೀಜ್ ಆಗಿದೆ.