Headlines

ರಿಪ್ಪನ್ ಪೇಟೆ ಯಲ್ಲಿ ಸಡಗರ-ಸಂಭ್ರಮದಿಂದ ರಂಜಾನ್ ಆಚರಣೆ – ಪರಸ್ಪರ ಸಾಮರಸ್ಯದಿಂದ ಸಮಾಜದಲ್ಲಿ‌ ನೆಮ್ಮದಿ ಸಾಧ್ಯ : ಮುನೀರ್ ಸಖಾಫ಼ಿ|Ramadan

ರಿಪ್ಪನ್ ಪೇಟೆ : ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಮೆಕ್ಕಾ ಮಸ್ಜಿದ್ ನ ಮುಸ್ಲಿಂ ಬಾಂಧವರುಗಳು ಧರ್ಮಗುರುಗಳಾದ  ಮುನೀರ್ ಸಖಾಫಿ ಮತ್ತು ಮುಪ್ತಿ ಇಜ್ ಹಾರ್ ಅಹಮದ್ ರವರ ನೇತೃತ್ವದಲ್ಲಿ ರಂಜಾನ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.


ಹೊಸನಗರ ರಸ್ತೆಯಿಂದ ಮೆರವಣಿಗೆ ಹೊರಟು ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕಳೆದ ಒಂದು ತಿಂಗಳಿನಿಂದ ಉಪವಾಸ ಹಾಗೂ ಧಾರ್ಮಿಕ ಆಚರಣೆಗಳ ವಿಧಿವಿಧಾನಗಳನ್ನು ಪಾಲಿಸಿದ ಅವರುಗಳು ಶುಕ್ರವಾರ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ  ಇಂದು ಸಡಗರ ಹಾಗೂ ಸಂಭ್ರಮದಿಂದ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ಯಾದಿಯಾಗಿ ಭಕ್ತಿಪೂರ್ವಕವಾಗಿ ಈದ್ಗಾ ಮೈದಾನದಲ್ಲಿ ನಮಾಜ್ ಮಾಡಿ ಪರಸ್ಪರ ಶುಭಕೋರಿ ರಂಜಾನ್ ಹಬ್ಬವನ್ನು ಆಚರಣೆ ಮಾಡಿದರು.


ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ನಂತರದಲ್ಲಿ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫಿ ಮಾತನಾಡಿ, ಪೈಗಂಬರ್ ಜೀವನ ಸಂದೇಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನ ಸಾರ್ಥಕವಾಗುವುದು ಎಲ್ಲ ಧರ್ಮದ ಸಾರವುದು ಒಂದೇ ಅಗಿದೆ ಭಾರತ ದೇಶ ವಿವಿಧತೆಯಲ್ಲಿ ಏಕತೆಯ ದೇಶವಾಗಿದೆ ಯಾವುದೇ ಜಾತಿ ಭಾವನೆ ತೋರದೆ ಸರ್ವ ಧರ್ಮದ ಭಾವೈಕ್ಯತೆಯ ದೇಶವಾಗಿದೆ .

ಭಾರತ ದೇಶದಲ್ಲಿ ಹಲವಾರು ಧರ್ಮ ಜಾತಿ ಪಂಗಡಗಳಿವೆ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ ಇದನ್ನು ಸಂವಿಧಾನದ ಅಡಿಯಲ್ಲಿ ಉಪಯೋಗಿಸಿಕೊಂಡು ಪರಸ್ಪರ ಸಾಮರಸ್ಯವನ್ನು, ಸಹಿಷ್ಣುತೆಯನ್ನು ಅಳವಡಿಸಿಕೊಂಡು ಪ್ರೀತಿ ಗೌರವದೊಂದಿಗೆ ಬಾಳಬೇಕಾಗಿದೆ. ಯಾವುದೇ ಧರ್ಮಗಳನ್ನಾಗಲಿ ಪಂಗಡಗಳನ್ನಾಗಲಿ ಜಾತಿಯವರನ್ನಾಗಲಿ ಹೀಯಾಳಿಸುವ ಅಧಿಕಾರ ಇಸ್ಲಾಂ ಧರ್ಮ ಕೊಡಲಿಲ್ಲ.ಯಾವುದೇ ಧರ್ಮದ ಅಥವಾ ಪಂಗಡದ ಒಬ್ಬ ವ್ಯಕ್ತಿಯನ್ನು ಅನ್ಯಾಯವಾಗಿ ಕೊಂದರೆ ಇಡೀ ಜನ ಸಮೂಹವನ್ನೇ ಕೊಲೆ ಮಾಡಿದ ಶಿಕ್ಷೆಯನ್ನು ಆತನಿಗೆ ಅಲ್ಲಾಹು ನೀಡುತ್ತಾನೆ ಎಂದು ಬೋಧಿಸುವ ಧರ್ಮವಾಗಿದೆ ಇಸ್ಲಾಂ ಎಂದು ಹೇಳಿದರು.

ಧರ್ಮ ಧರ್ಮಗಳ ನಡುವಿನ ಸಂಘರ್ಷಗಳನ್ನು ಬದಿಗೊತ್ತಿ ಭಾವೆಕ್ಯತೆ, ಸಹೋದರತ್ವ, ಭ್ರಾತೃತ್ವದಿಂದ ಬದುಕೋಣ ಎಂದು ಈ ಸಂದರ್ಭದಲ್ಲಿ ಕರೆ ನೀಡಿದರು.

ಈ ಸಂಧರ್ಭದಲ್ಲಿ ಜುಮ್ಮಾ ಮಸೀದಿ ಅಧ್ಯಕ್ಷರಾದ ಮಹಮ್ಮದ್ ರಫ಼ಿ,ಕಾರ್ಯದರ್ಶಿಗಳಾದ ಮಹಮ್ಮದ್ ಶಫ಼ಿ ,ಮೆಕ್ಕಾ ಮಸ್ಜಿದ್ ಅಧ್ಯಕ್ಷರಾದ ಮಹಮ್ಮದ್ ಫ಼ಾಜಿಲ್ ,ಕಾರ್ಯದರ್ಶಿ ನದೀಮ್ ಮುಖಂಡರಾದ ಅರ್ ಎ ಚಾಬುಸಾಬ್,ಅಮೀರ್ ಹಂಜಾ ಗ್ರಾಪಂ ಸದಸ್ಯ ಆಸೀಫ಼್ ಭಾಷಾಸಾಬ್, ಆರ್ ಎಸ್ ಶಂಶುದ್ದೀನ್, ಭಾಪುಖಾನ್ ,ಹಸನಬ್ಬ,ನಾಸೀರ್ ,ರೆಹಮಾನ್ ಚಾಲಿ ಮಾಜಿ ಗ್ರಾಪಂ ಸದಸ್ಯ ವಾಹಿದ್ ಹಾಗೂ ಇನ್ನಿತರರಿದ್ದರು. 


ಬದುಕಿನ ಪಾಠವನ್ನು ಕಲಿಸುವ ಪವಿತ್ರ ರಂಜಾನ್ – ಹೊಸನಗರದ ಕಳೂರು ಜಾಮೀಯಾ ಮಸೀದಿಯಲ್ಲಿ ರಂಜಾನ್ ಆಚರಣೆ


ಮುಸ್ಲೀಮರಿಗೆ ಪವಿತ್ರ ರಂಜಾನ್ ಬದುಕಿನ ಅನೇಕ ಪಾಠಗಳನ್ನು ಕಲಿಸುತ್ತದೆ, ದಾನವನ್ನು ಹಸಿವಿಗೆ ಒಳಪಡಿಸಿ ಗೆಲ್ಲುವುದು,ಇದರೊಂದಿಗೆ ಹಸಿವಿಗೆ ಒಳಪಡುವ ಬಡವರ ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳುವುದು,ಉಪವಾಸ ಕೈಗೊಳ್ಳುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು,ಇದರೊಂದಿಗೆ ಅನಾವಶ್ಯಕ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು, ಕೆಟ್ಟವಿಚಾರ ಮತ್ತು ಕೆಟ್ಟ ಕೆಲಸಗಳಿಂದ ದೂರ ಇರುವುದು, ನಮ್ಮ ಸುತ್ತಮುತ್ತಲಿನವರೊಂದಿಗೆ ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರತ್ವದೊಂದಿಗೆ ಬಾಳುವುದು, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಂತಾದ ಅನೇಕ ಅಂಶಗಳನ್ನು ಕಲಿಸುತ್ತದೆ ಎಂದು ಹೊಸನಗರ ಟೌನ್ ನಲ್ಲಿರುವ ಕಳೂರು ಜುಮ್ಮಾ ಮಸೀದಿಯ ಖತೀಬರಾದ ಮೌಲಾನ ಜನಾಬ್ ಅಬ್ದುಲ್ ಹಾಸಿಬ್ ಅಭಿಪ್ರಾಯಪಟ್ಟರು,

ಈದ್ ಉಲ್ ಫಿತರ್ ಹಬ್ಬದ ಪ್ರಯುಕ್ತ ಹಳೆ ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ವಿಶೇಷ ನಮಾಜ್ ನಿರ್ವಹಿಸಲಾಯಿತು. ಮತ್ತೊಬ್ಬ ಖತೀಬರಾದ ಮುಫ್ತಿ ಮಾಸೂಂ ಅಲಿಯವರು ಖುತ್ಬಾ ನಿರ್ವಹಿಸಿದರು, 

ಹಾಫಿಝ್ ಅಬ್ದುಲ್ಲಾ, ಕಮೀಟಿಯ ಅಧ್ಯಕ್ಷರಾದ ಬಾಷಾ ಸಾಬ್, ಕಾರ್ಯದರ್ಶಿಗಳಾದ ಹೆಚ್ ಆರ್ ಅಬ್ದುಲ್ ರಜಾಕ್, ಖಜಾಂಚಿಗಳಾದ ಅಬ್ದುಲ್ ನಿಸಾರ್, ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷರಾದ ಕೆ.ಇಲಿಯಾಸ್, ಪಟ್ಟಣ.ಪಂಚಾಯತಿ.ಮಾಜಿ ಸದಸ್ಯರಾದ ಎಸ್.ಎಂ.ಸಲೀಂ, ಪ್ರಮುಖರಾದ ಎಂ.ಡಿ.ಉಸ್ಮಾನ್,ಬಾಷಾ ಸಾಬ್, ಮಹಮ್ಮದ್ ಶರೀಫ್, ಸೈಯದ್ ಜಾಫರ್, ಮಹಮ್ಮದ್ ಅಲಿ, ಮಹಮ್ಮದ್ ಗೌಸ್, ಜಿ.ಕೆ.ಅನ್ವರ್,ಸಲೀಂ ರಜಾಕ್, ಕಮಿಟಿಯ ಪದಾಧಿಕಾರಿಗಳು ಮತ್ತಿತರರು ಹಾಜರಿದ್ದರು.

ಹೊಸನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಭ್ರಮದ ರಂಜಾನ್ ಆಚರಣೆ


ಹೊಸನಗರ : ಹೊಸನಗರ ಪಟ್ಟಣ ಹಾಗೂ ಜಯನಗರ ಗೊರಗೋಡು, ನಗರ, ಕಚ್ಚಿಗೆಬೈಲ್, ಮಾರುತಿಪುರ ,ಬಟ್ಟೆಮಲ್ಲಪ್ಪ  ಮೊದಲಾದಡೆಗಳಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಬಹಳ ಗೌರವ ಶ್ರದ್ಧಾ ಭಕ್ತಿಯಿಂದ ಬೆಳಗ್ಗೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಹಬ್ಬಕ್ಕೆ ಮೆರಗು ನೀಡಿದರು.


ಮುಸ್ಲಿಂ ಬಾಂಧವರು ಮನೆಯಲ್ಲಿ ಸಡಗರ ಸಂಭ್ರಮದಿಂದ ಹೊಸ ಬಟ್ಟೆ ಧರಿಸಿ ವಿಶೇಷ ಖಾದ್ಯ ಭೋಜನ ಮಾಡುವ ಮೂಲಕ ಬಂಧು ಬಾಂಧವರು ಸ್ನೇಹಿತರಿಗೆ ಉಣಬಡಿಸುವ ಮೂಲಕ ಹಾಗೂ ದಾನ ಕಾರ್ಯ ಕೈಗೊಳ್ಳುವ ಮೂಲಕ ಪವಿತ್ರ ರಂಜಾನ್ ಹಬ್ಬವನ್ನು ಸಂಭ್ರಮಿಸಿದರು.

ಕೆಂಚನಾಲ ಮತ್ತು ಗಾಳಿಬೈಲ್ ನಲ್ಲಿ ರಂಜಾನ್ ಆಚರಣೆ


ರಿಪ್ಪನ್‌ಪೇಟೆ ಸಮೀಪದ ಗಾಳಿಬೈಲು ಗ್ರಾಮದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಗಾಳಿಬೈಲ್ ಜುಮ್ಮಾ ಮಸೀದಿ ಧರ್ಮಗುರುಗಳಾದ ಅಖಿಲ್ ಅಹಮದ್ ರಝಾ ರವರ ನೇತೃತ್ವದಲ್ಲಿ ಗಾಳಿಬೈಲ್ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಗಾಳಿಬೈಲ್ ಜುಮ್ಮಾ ಮಸೀದಿ ಅಧ್ಯಕ್ಷರಾದ ಜಿ‌ಕೆ ಜಾವೀದ್ ,ಮುಖಂಡರಾದ ಷರೀಫ್ ಸಾಬ್,ಘನಿಸಾಬ್,ವಜೀರ್ ಸಾಬ್,ಉಬೇದುಲ್ಲಾ ಷರೀಫ್, ಸೈಫ಼ುಲ್ಲಾ ,ಹಿದಾಯತ್,ಶಬ್ಬೀರ್ ಸಾಬ್ ,ಖಲೀಲ್ ಷರೀಫ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕೆಂಚನಾಲದಲ್ಲಿ ಮುಸ್ಲಿಂ ಭಾಂಧವರು ಸಡಗರದಿಂದ ರಂಜಾನ್ ಹಬ್ಬವನ್ನು ಆಚರಿಸಿದರು.

Leave a Reply

Your email address will not be published. Required fields are marked *