Headlines

PU RESULT | ಕಲಾ ವಿಭಾಗದಲ್ಲಿ ಶೇ 95% ಅಂಕ ಪಡೆದ ಮಿಸ್ಬಾ – ಆನಂದಪುರ ಪಿಯು ಕಾಲೇಜಿಗೆ ಶೇ 77% ರಷ್ಟು ಫಲಿತಾಂಶ

PUC RESULT | ಆನಂದಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 77% ರಷ್ಟು ಫಲಿತಾಂಶ

ಆನಂದಪುರ : ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆನಂದಪುರದ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಶೇಕಡಾ 77 ರಷ್ಟು ಫಲಿತಾಂಶ ಬಂದಿದೆ.

ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಮಿಸ್ಬಾ ಶೇಕಡಾ 95% ಅಂಕ ಗಳಿಸುವ ಮೂಲಕ ಅತ್ಯುನ್ನತ ಸಾಧನೆ ಮಾಡಿದ್ದಾರೆ.




ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ 143 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 110 ವಿದ್ಯಾರ್ಥಿಗಳು ಉತ್ತೀರ್ಣಾರಾಗಿದ್ದಾರೆ.

ಕಲಾ ವಿಭಾಗದಲ್ಲಿ 80 ವಿದ್ಯಾರ್ಥಿಗಳಲ್ಲಿ 59 ವಿದ್ಯಾರ್ಥಿಗಳು ಉತ್ತೀರ್ಣಾರಾಗುವ ಮೂಲಕ ಶೇಕಡಾ 73% ಫಲಿತಾಂಶ ಬಂದಿದೆ.ವಾಣಿಜ್ಯ ವಿಭಾಗದಲ್ಲಿ 32 ವಿದ್ಯಾರ್ಥಿಗಳಲ್ಲಿ 24 ವಿದ್ಯಾರ್ಥಿಗಳು ಉತ್ತೀರ್ಣಾರಾಗುವ ಮೂಲಕ ಶೇಕಡಾ 75% ರಷ್ಟು ಫಲಿತಾಂಶ.ವಿಜ್ಞಾನ ವಿಭಾಗದಲ್ಲಿ 31 ವಿದ್ಯಾರ್ಥಿಗಳಲ್ಲಿ 27 ವಿದ್ಯಾರ್ಥಿಗಳು ಉತ್ತೀರ್ಣಾರಾಗುವ ಮೂಲಕ ಶೇಕಡಾ 87% ರಷ್ಟು ಫಲಿತಾಂಶ ಬಂದಿದೆ.




11 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ.47 ಪ್ರಥಮದರ್ಜೆಯಲ್ಲಿ,30 ವಿದ್ಯಾಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 24 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣಾರಾಗುವ ಮೂಲಕ ಆನಂದಪುರದ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಕೀರ್ತಿ ತಂದಿದ್ದಾರೆಂದು ಹೇಳಿ ವಿದ್ಯಾರ್ಥಿಗಳ ಈ ಸಾಧನೆಗೆ  ಪ್ರಾಚಾರ್ಯರು ಮತ್ತು ಉಪನ್ಯಾಸಕ ವೃಂದ ಮತ್ತು ಸಿಡಿಸಿ ಯವರು ಆಭಿನಂದಿಸಿದ್ದಾರೆ.

ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು :

                                ಕಲಾ ವಿಭಾಗ –

ಮಿಸ್ಬಾ – 570/600

ಪ್ರಣತಿ ಎಂ – 522/600

ಕೀರ್ತನ – 515/600

ರಾಜೇಶ್ವರಿ ಆರ್ ಕೆ – 513/600

                              ವಾಣಿಜ್ಯ ವಿಭಾಗ –

ನಮನ ಕೆ ಜೆ – 542/600

ಸುಬ್ರಹ್ಮಣ್ಯ ಶೆಟ್ಟಿ – 539/600

ನೊರೈನ್ ತಾಜ್ – 519/600

ಸರಸ್ವತಿ   – 514/600

                            ವಿಜ್ಞಾನ ವಿಭಾಗ

ಪಿ ಬಿ ದರ್ಶನ್ ಪ್ರಸಾದ್ – 526/600

ಆದರ್ಶ್ ಎಸ್ ಹೆಚ್ -524/600

ಹರ್ಷಿತ ಎಲ್ ಎಂ – 511/600


ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಆನಂದಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ವತಿಯಿಂದ ಅಭಿನಂದನೆಗಳು…





Leave a Reply

Your email address will not be published. Required fields are marked *