ಶಿವಮೊಗ್ಗ : ಹಬ್ಬದ ದಿನದಂದು ಮದ್ಯರಾತ್ರಿಯಿಂದ ಬೆಳಗ್ಗೆ ವರೆಗೆ ಶಿವಮೊಗ್ಗ ಮತ್ತು ಭದ್ರಾವತಿ ನಗರದಲ್ಲಿ ಜನರನ್ನ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಕೋಟೆ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.
02-11-2021 ರಂದು 03 ಜನ ಆರೋಪಿಗಳು ದಾವಣಗೆರೆ ಜಿಲ್ಲೆಯ ಸವಳಂಗದಲ್ಲಿ ಬಜಾಜ್ ಪಲ್ಸರ್ ಬೈಕ್ ಅನ್ನು ಕಳ್ಳತನ ಮಾಡಿ, ಸದರಿ ಬೈಕ್ ಅನ್ನು ಉಪಯೋಗಿಸಿ 04-11-2021 ರಂದು ಬೆಳಗಿನ ಜಾವ ಶಿವಮೊಗ್ಗ ನಗರದ 04 ಕಡೆಗಳಲ್ಲಿ ಹಾಗೂ ಭದ್ರಾವತಿ ನಗರದ 03 ಕಡೆಗಳಲ್ಲಿ ವಿಳಾಸ ಕೇಳುವ ಹಾಗೂ ಬೆಂಕಿ ಪೊಟ್ಟಣ ಕೇಳುವ ನೆಪದಲ್ಲಿ ಚಾಕುವನ್ನು ತೋರಿಸಿ ಬೆದರಿಕೆ ಹಾಕಿ ನಗದು ಹಣ, ಮೊಬೈಲ್ ಫೋನ್ ಹಾಗೂ ಬಂಗಾರದ ಸರವನ್ನು ಸುಲಿಗೆ ಮಾಡಿಕೊಂಡು ಹೋದ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ 02 ಪ್ರಕರಣಗಳು, ತುಂಗಾನಗರ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ ಹಾಗೂ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ 03 ಪ್ರಕರಣಗಳು ಸೇರಿದಂತೆ ಒಟ್ಟು 07 ಪ್ರಕರಣಗಳು ದಾಖಲಾಗಿತ್ತು.
ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಬೈಕ್ ನಲ್ಲಿ ಬಂದ ಪರಶುರಾಮ್, ಉಮಾವತಿ ಹಾಗೂ ಕೊರಿಯರ್ ಸಿಬ್ಬಂದಿಗೆ ಚಾಕು ತೋರಿಸಿ ಹಣ ಮತ್ತು ಮೊಬೈಲ್ ನ್ನ ಕಿತ್ತುಕೊಂಡು ಹೋಗಿದ್ದರು.
ಅದೇ ರೀತಿ ಕೋಟೆ ಪೊಲೀಸ್ ಠಾಣೆಯಲ್ಲಿ ಜಿ.ಆರ್ ವೆಂಕಟೇಶ್ ಕುಮಾರ್ ಮತ್ತು ಮೋಹನ್ ರಾಜ್ ರ ಮೊಬೈಲ್ ಮತ್ತು ಹಣವನ್ನ ಕಿತ್ತುಕೊಂಡು ಹೋಗಿದ್ದರು. ಮತ್ತು ತುಂಗ ನಗರ ಪೊಲೀಸ್ ಠಾಣೆಯಲ್ಲಿ ಶಾಹೀನಾ ಬಾನು ಅವರ ವ್ಯಾನಿಟಿ ಬ್ಯಾಗ್ ಕಿತ್ತುಕೊಂಡು ಹೋಗಿದ್ದರು. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿಯೂ ಸಹ ಇದೇ ಮೂರು ಗ್ಯಾಂಗ್ ದರೋಡೆ ನಡೆಸಿತ್ತು.
ರಾತ್ರಿ ಇಡೀ ದರೋಡೆಯಲ್ಲಿ ಮುಳುಗಿದ್ದ ಮೂವರನ್ನ ಕೋಟೆ ಪೊಲೀಸರು ಬಂದಿಸಿದ್ದಾರೆ. ಆಯನೂರು ಗೇಟ್ ಬಳಿ ನಿವಾಸಿಯ ಗಗನ್ ಯಾನೆ ಬ್ರೋ, ಬೊಮ್ಮನ್ ಕಟ್ಟೆ ಎಫ್ ಬ್ಲಾಕ್ ನ ನಿವಾಸಿ ವಿಶಾಲ್ ಯಾನೆ ಕುಟ್ಟ, ಪ್ರೀತಮ್ ಯಾನೆ ಸ್ಮಾಟಿ ಎಂಬವರನ್ನ ಕೋಟೆ ಪೊಲೀಸರು ಬಂಧಿಸಿದ್ದಾರೆ.
ಈ ಮೂವರೂ 19 ವರ್ಷದ ಯುವಕರಾಗಿದ್ದಾರೆ. ವಿಶಾಲ್ ಮತ್ತು ಗಗನ್ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ಬೇಕಾದವನಾಗಿದ್ದಾನೆ. ಗಗನ್ ಮತ್ತು ವಿಶಾಲ್ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದವರು. ಪ್ರೀತಮ್ ಪೈಂಟಿಂಗ್ ಕೆಲಸ ಮಾಡುವವನಾಗಿದ್ದಾನೆ.
ಆರೋಪಿತರಿಂದ ಬಜಾಜ್ ಪಲ್ಸರ್ ಬೈಕ್, 10 ಮೊಬೈಲ್ ಫೋನ್ ಗಳು, 01 ವ್ಯಾನಿಟಿ ಬ್ಯಾಗ್ ಮತ್ತು ವ್ಯಾನಿಟಿ ಬ್ಯಾಗ್ ನಲ್ಲಿದ್ದ ಬೆಳ್ಳಿಯ ಸರವನ್ನು ವಶಪಡಿಸಿಕೊಳ್ಳಲಾಗಿದೆ.