Headlines

ಅನುದಾನ ಕೊರತೆ: ಗೃಹ ಸಚಿವರ ತವರು ಕ್ಷೇತ್ರದಲ್ಲಿಯೇ ವಿಧಾನ ಪರಿಷತ್ ಚುನಾವಣೆ ಬಹಿಷ್ಕಾರ

ತೀರ್ಥಹಳ್ಳಿ : ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರದ ಗ್ರಾಮ ಪಂಚಾಯತಿ ಸದಸ್ಯರು ವಿಧಾನ ಪರಿಷತ್ ಚುನಾವಣೆ ಬಹಿಷ್ಕರಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ನಾಲೂರು ಕೊಳಿಗೆ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಏಳು ಜನರು ಈ ಬಾರಿ ಮತದಾನ ಮಾಡದೆ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನಾಲೂರು ಕೊಳಿಗೆ ಗ್ರಾಮ ಪಂಚಾಯತಿಗೆ ಈವರೆಗೆ 1.68 ಕೋಟಿ ರೂಪಾಯಿ ಸರ್ಕಾರದ ಅನುದಾನ ಬಂದಿಲ್ಲ. ನಾಲೂರು ಕೊಳಿಗೆ ವ್ಯಾಪ್ತಿಯ ಮೂರು ಮರಳು ಕ್ವಾರಿಗಳು ಸರ್ಕಾರಕ್ಕೆ ಕೋಟಿಗಟ್ಟಲೆ ಆದಾಯ…

Read More

ತೀರ್ಥಹಳ್ಳಿ ದನಗಳ್ಳರ ಹಿಟ್ & ರನ್ ನಿಂದ ಇಬ್ಬರು ಯುವಕರಿಗೆ ಗಂಭೀರ ಗಾಯ!! ಆಸ್ಪತ್ರೆಗೆ ಆಗಮಿಸಿದ ಗೃಹಸಚಿವ ಆರಗ ಜ್ಞಾನೇಂದ್ರ:

ತೀರ್ಥಹಳ್ಳಿ: ಮಲೆನಾಡ ಭಾಗದಲ್ಲಿ ದನಗಳ್ಳರ ಹಾವಳಿ ಮಿತಿ ಮೀರಿದ್ದು ಅದರಲ್ಲೂ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜೆಲ್ಲೆಯಲ್ಲಿ ದನ ಕಳ್ಳರ ಕೇಸ್ ದಾಖಲಾಗುತ್ತಲೇ ಇರುತ್ತಿದೆ.  ತೀರ್ಥಹಳ್ಳಿಯ ಮೇಳಿಗೆಯಿಂದ ಅಕ್ರಮವಾಗಿ ದನಗಳನ್ನು ಸಾಗಣೆ ಮಾಡುತ್ತಿರುವ ಕಳ್ಳರನ್ನು ತಡೆಯಲು ಯತ್ನಿಸಿದ ಇಬ್ಬರು ಯುವಕರ ಮೇಲೆ ಪಿಕ್ ಅಪ್ ವಾಹನವನ್ನು ಹತ್ತಿಸಿದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ತಾಲೂಕಿನ ಮೇಳಿಗೆಯಿಂದ  ಅಪ್ ವಾಹನವನ್ನು ಫಾಲೋ ಮಾಡಿದ ಯುವಕರ ಮೇಲೆ ಬೆಜ್ಜವಳ್ಳಿಯಲ್ಲಿ ಪಿಕ್…

Read More

ಶಿವಮೊಗ್ಗ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಪುತ್ಥಳಿ ನಿರ್ಮಿಸಿ ಅಭಿಮಾನ ಸಲ್ಲಿಸಿದ ಆನಂದಪುರ ಸಮೀಪದ ಹೊಸಕೊಪ್ಪ ಗ್ರಾಮಸ್ಥರು

ಕನ್ನಡದ ಕುವರ ಕರ್ನಾಟಕದ ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಸಾವು ಇದೀಗ ಕರುನಾಡನ್ನು ಕಣ್ಣೀರಲ್ಲಿ ಕೈ ತೊಳಿಸಿತ್ತು.ಅಪಾರ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ದಾನ ಧರ್ಮದ ಕಾರ್ಯಗಳು ಎಂದಿಗೂ ಕೂಡ ಅಜರಾಮರ. ಅತಿ ಕಿರಿಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಕನ್ನಡದ ಕುವರನಿಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಹೊಸಕೊಪ್ಪ ಗ್ರಾಮದಲ್ಲಿ ಅಭಿಮಾನಿಗಳು ವಿಶಿಷ್ಟ ರೀತಿಯ ಗೌರವವನ್ನು ಸಮರ್ಪಿಸಿದ್ದಾರೆ..ಸುಮಾರು 6ಅಡಿ ಎತ್ತರದಷ್ಟು ಪುನೀತ್ ರಾಜ್…

Read More

ಕಾಲೇಜು ವೇಳಾಪಟ್ಟಿ ಬದಲಾವಣೆಗೆ ವಿರೋದಿಸಿ ಸಾಗರ ಪದವಿ ವಿದ್ಯಾರ್ಥಿಗಳಿಂದ ದಿಡೀರ್ ಪ್ರತಿಭಟನೆ : ಕೂಡಲೇ ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿ ಒಕ್ಕೂಟದ ಸಿ ಎಂ ಚಿನ್ಮಯ್ ಆಗ್ರಹ

ಸಾಗರ : ನಗರದ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಇಂದು ದಿಢೀರ್ ಪ್ರತಿಭಟನೆ ನಡೆಸಿದರು. ಕಾಲೇಜು ವೇಳಾಪಟ್ಟಿ ಬದಲಾವಣೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳ ಜೊತೆ ಚರ್ಚಿಸದೆ ಏಕಾಏಕಿ ತಿರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕಾಲೇಜಿನ ಎದುರು ಭಾಗದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಸ್ಥಳಕ್ಕೆ ಶಾಸಕ ಹಾಲಪ್ಪ ಭೇಟಿ ನೀಡುವಂತೆ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಲೇಜು ವೇಳಾಪಟ್ಟಿ ಬದಲಾವಣೆ ಯನ್ನು ವಿದ್ಯಾರ್ಥಿಗಳ ಜೊತೆಗೆ ಸಮಾಲೋಚನೆ…

Read More

ಬಹುಮುಖ ಪ್ರತಿಭೆ ಯುವ ಸಾಹಿತಿ ರಫಿ ರಿಪ್ಪನಪೇಟೆಯವರಿಗೆ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಅದ್ದೂರಿ ಸನ್ಮಾನ!! ಬಲು ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಯ್ತು ರಿಪ್ಪನ್ ಪೇಟೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ!!

ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆ ಅನೇಕ ಕವಿ ಸಾಹಿತಿಗಳನ್ನು ನೀಡಿ ಕರ್ನಾಟಕ ರಾಜ್ಯದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದೆ. ಅದರಂತೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಯುವಸಾಹಿತಿ ಪತ್ರಕರ್ತ ರಫಿ ರಿಪ್ಪನಪೇಟೆ ಇದೀಗ ಎಲ್ಲರಿಗೂ ಕೂಡ ಚಿರಪರಿಚಿತ ಇವರ ಸಾಧನೆಗೆ,ಬರಹಕ್ಕೆ, ಸಾಹಿತ್ಯಕ್ಕೆ ಮೆಚ್ಚುಗೆ ಪಡೆದೆ ಇರುವವರು ಯಾರು ಕೂಡ ಇಲ್ಲ. ಮೊನ್ನೆ ಮೊನ್ನೆಯಷ್ಟೇ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಯುವ ಸಾಹಿತಿಯಾದ ರಫಿ ರಿಪ್ಪನ್ ಪೇಟೆ ಯವರನ್ನು  ಸನ್ಮಾನಿಸಿ ಗೌರವಿಸಲಾಗಿತ್ತು. ಇದೀಗ ರಿಪ್ಪನ್ ಪೇಟೆಯ ಕಸ್ತೂರಿ ಕನ್ನಡ ಸಂಘ…

Read More

ಕರ್ನಾಟಕ ಕಾನೂನು ವಿವಿ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸುವಂತೆ ಸಿಬಿಆರ್ ರಾಷ್ಟ್ರೀಯ ಕಾನೂನು ವಿದ್ಯಾರ್ಥಿಗಳಿಂದ ಆಗ್ರಹ :

ಶಿವಮೊಗ್ಗ: ಕರ್ನಾಟಕ ಕಾನೂನು ವಿವಿ ನಿಗಧಿತ ವೇಳಾಪಟ್ಟಿಯಂತೆ ಪರೀಕ್ಷೆಗಳನ್ನು ನಡೆಸದೇ ಇರುವುದರಿಂದಾಗಿ ಮೂರು ಮತ್ತು ಐದು ವರ್ಷದ ಕಾನೂನು ವಿದ್ಯಾರ್ಥಿಗಳು ಕೋರ್ಸ್ ಮುಗಿಸಲು ಒಂದು ವರ್ಷ ಹೆಚ್ಚುವರಿಯಾಗಿ ಓದಬೇಕಾಗುತ್ತದೆ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಇಂದು ಸಿ.ಬಿ.ಆರ್. ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಮತ್ತು ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಿದರು. 2020ನೇ ಸಾಲಿನ ಡಿಸೆಂಬರ್ ನಲ್ಲಿ ನಿಗಧಿಯಾಗಿದ್ದ ಸೆಮಿಸ್ಟರ್ ಪರೀಕ್ಷೆಗಳನ್ನು ಕೋವಿಡ್ ಕಾರಣದಿಂದಾಗಿ 2021ರ ಮಾರ್ಚ್ನನಲ್ಲಿ…

Read More

ಕೈಬಿಟ್ಟು ಕಮಲ ಹಿಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿರುದ್ಧ ಕಾಂಗ್ರೆಸ್ಸಿಗರ ಆಕ್ರೋಶ :

ರಿಪ್ಪನ್ ಪೇಟೆ : ಅಪರೇಶನ್ ಕಮಲಕ್ಕೆ  ತುತ್ತಾಗಿರುವ ಮಹಾಲಕ್ಷ್ಮಿ ಅಣ್ಣಪ್ಪ ರವರು ನೈತಿಕ ಹೊಣೆ ಹೊತ್ತು ರಿಪ್ಪನ್ ಪೇಟೆ ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಗ್ರಾಪಂ ಸದಸ್ಯರಾದ ಎನ್ ಚಂದ್ರೇಶ್ ಹಾಗೂ ರಿಪ್ಪನ್ ಪೇಟೆ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾದ ಆಸೀಫ಼್ ಭಾಷಾಸಾಬ್ ಜಂಟಿ ಪತ್ರೀಕಾ ಗೋಷ್ಟಿಯಲ್ಲಿ ಆಗ್ರಹಿಸಿದರು. ಪಟ್ಟಣದ ಕುವೆಂಪು ಸಭಾಂಗಣದಲ್ಲಿ ನಡೆದ ಪತ್ರೀಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಯಾವುದೇ ಪಕ್ಷಕ್ಕೂ ನಿಷ್ಟೆ ತೋರದ ಮಹಾಲಕ್ಷ್ಮಿ ಅಣ್ಣಪ್ಪರವರು ನಿನ್ನೆ ದಿನ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ.ಕಾಂಗ್ರೆಸ್ ಗ್ರಾಪಂ…

Read More

ಸರಕಾರಿ ಪದವಿ ಪೂರ್ವ ಕಾಲೇಜು ಅಮೃತದಲ್ಲಿ ಭಾವಾಂಜಲಿ ನುಡಿನಮನ ಕಾರ್ಯಕ್ರಮ :

ರಿಪ್ಪನ್ ಪೇಟೆ: ಶೈಕ್ಷಣಿಕ ಸೇವೆ ಎನ್ನುವುದು ಸಮಾಜದಲ್ಲಿ ಅತ್ಯುತ್ತಮ ಕಾರ್ಯವಾಗಿದ್ದು ಇದು ಜನಮಾನಸದಲ್ಲಿ ಉಳಿಯುತ್ತದೆ ಎಂದು  ವೈದ್ಯ ರತ್ನ ಪ್ರಶಸ್ತಿ ವಿಜೇತ ಹಾಗೂ ಮಾಜಿ ಶಾಸಕ ಡಾ.ಜಿ. ಡಿ. ನಾರಾಯಣಪ್ಪ ಹೇಳಿದರು. ಸರಕಾರಿ ಪದವಿ ಪೂರ್ವ ಕಾಲೇಜು ಅಮೃತ ಮತ್ತು ಅಮೃತ ಗ್ರಾಮಸ್ಥರು ಶನಿವಾರ ದಿವಂಗತ  ಜಿ. ಎಸ್.ಗಣೇಶ್ ಮೂರ್ತಿ ಪ್ರಾಚಾರ್ಯರು ಮತ್ತು ಶಿಕ್ಷಣತಜ್ಞರು ಮತ್ತು ಎಂ.ಹೆಚ್.ಪ್ರಕಾಶ್ ಪ್ರಾಚಾರ್ಯರು ರ ವರಿಗೆ  ಆಯೋಜಿಸಲಾಗಿದ್ದ  ಭಾವಾಂಜಲಿ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ತೀರ್ಥಳ್ಳಿ ಹಾಗೂ…

Read More

ಶಿಥಿಲಗೊಂಡ ಆನಂದಪುರದ ಪುರಾತನ ಕೋಟೆ ಆಂಜನೇಯ ದೇವಾಲಯವನ್ನು ಕೇವಲ 3 ತಿಂಗಳಿನಲ್ಲಿ ನಿಬ್ಬೆರಗಾಗುವಂತೆ ಜೀರ್ಣೋದ್ಧಾರಗೊಳಿಸಿದ ಭಕ್ತಾದಿಗಳು !!!!

ಸುಮಾರು 17 ನೇ  ಶತಮಾನದಲ್ಲಿ ಕೆಳದಿ ಶಿವಪ್ಪ ನಾಯಕ ಅರಸು  ಕಾಲದಲ್ಲಿ ನಿರ್ಮಾಣವಾಗಿದ್ದಂತಹ ಇತಿಹಾಸ ಪ್ರಸಿದ್ಧ ಪುರಾತನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನವು ಇಂದು ಭಕ್ತಾದಿಗಳನ್ನು ಆಕರ್ಷಣೆ ಒಮ್ಮೆ ತಿರುಗಿ ನೋಡುವಂತೆ ಭಕ್ತಿಪೂರ್ವಕವಾಗಿ ಭಕ್ತಾದಿಗಳನ್ನು ಆಕರ್ಷಿಸುವ ತೊಡಗಿತ್ತು. ಆನಂದಪುರದ ಇತಿಹಾಸದಲ್ಲಿ 500 ವರ್ಷ ಇತಿಹಾಸವಿರುವ ಹಳೆಯ ಶಿಥಿಲಗೊಂಡ ದೇವಸ್ಥಾನವು ಕೇವಲ 3 ತಿಂಗಳಿನಲ್ಲಿ ನಿಬ್ಬೆರಗಾಗುವಂತೆ ಜೀರ್ಣೋದ್ಧಾರ ಮಾಡಿದಂತ ಹೆಮ್ಮೆ ಆನಂದಪುರದ ಭಕ್ತಾದಿಗಳಿಗೆ ಸಲ್ಲುತ್ತದೆ. 3 ತಿಂಗಳ ಹಿಂದೆ ಈ ದೇವಸ್ಥಾನವು ಸಂಪೂರ್ಣವಾಗಿ ಶಿಥಿಲಗೊಂಡು ಕಳೆಯನ್ನು ಕಳೆದುಕೊಂಡಿತ್ತು ಆದರೆ…

Read More

ರಿಪ್ಪನ್ ಪೇಟೆ ಕಸ್ತೂರಿ ಕನ್ನಡ ಸಂಘದ ವತಿಯಿಂದ ಪುನೀತ್ ರಾಜಕುಮಾರ್ ಅವರಿಗೆ ನುಡಿನಮನ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ.

ರಿಪ್ಪನ್‌ಪೇಟೆ: ಪಟ್ಟಣದ ಕಸ್ತೂರಿ ಕನ್ನಡ ಸಂಘ, ಪುನೀತ್‌ರಾಜ್ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆಸಲಾಯಿತು. ಪ್ರಥಮ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್‌ರಾಜ್ ನುಡಿ ನಮನ ಕಾರ್ಯಕ್ರಮವು ಅಂಗವಾಗಿ  ಏರ್ಪಡಿಸಿದ್ದ  ಕನ್ನಡ ರಾಜ್ಯೋತ್ಸವ ಮೆರವಣಿಗೆಯಲ್ಲಿ ಪುಟಾಣಿ ಮಕ್ಕಳ ವಿವಿಧ ವೇಷ ಭೂಷಣಗಳೊಂದಿಗೆ ಚಂಡೆ ನೃತ್ಯವು ಮೆರವಣಿಗೆಗೆ ಜನ ಆಕರ್ಷಣೆಗೊಂಡಿತ್ತು. ಬೆಳಿಗ್ಗೆ ತಾಯಿ ಭುವನೇಶ್ವರಿ ಭಾವಚಿತ್ರದ ರಾಜಬೀದಿ ಉತ್ಸವಕ್ಕೆ  ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಚಾಲನೆ ನೀಡಿದರು. ಕನ್ನಡ ಧ್ವಜಾರೋಹಣವನ್ನು ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್‌ರಾಜ್ ಅಭಿಮಾನಿ ಬಳಗದ…

Read More