ರಿಪ್ಪನ್ ಪೇಟೆ : ಅಪರೇಶನ್ ಕಮಲಕ್ಕೆ ತುತ್ತಾಗಿರುವ ಮಹಾಲಕ್ಷ್ಮಿ ಅಣ್ಣಪ್ಪ ರವರು ನೈತಿಕ ಹೊಣೆ ಹೊತ್ತು ರಿಪ್ಪನ್ ಪೇಟೆ ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಗ್ರಾಪಂ ಸದಸ್ಯರಾದ ಎನ್ ಚಂದ್ರೇಶ್ ಹಾಗೂ ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಆಸೀಫ಼್ ಭಾಷಾಸಾಬ್ ಜಂಟಿ ಪತ್ರೀಕಾ ಗೋಷ್ಟಿಯಲ್ಲಿ ಆಗ್ರಹಿಸಿದರು.
ಪಟ್ಟಣದ ಕುವೆಂಪು ಸಭಾಂಗಣದಲ್ಲಿ ನಡೆದ ಪತ್ರೀಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಯಾವುದೇ ಪಕ್ಷಕ್ಕೂ ನಿಷ್ಟೆ ತೋರದ ಮಹಾಲಕ್ಷ್ಮಿ ಅಣ್ಣಪ್ಪರವರು ನಿನ್ನೆ ದಿನ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ.ಕಾಂಗ್ರೆಸ್ ಗ್ರಾಪಂ ಸದಸ್ಯರ ಬೆಂಬಲದಿಂದ ಗ್ರಾಪಂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಮಹಾಲಕ್ಷ್ಮಿ ಅಣ್ಣಪ್ಪ ರವರು ಕೇವಲ ತಮ್ಮ ಸ್ವಾರ್ಥಕ್ಕಾಗಿ,ಅಕ್ರಮ ಆಸ್ತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.ಅವರ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್ ಗೂ ನಷ್ಟ ಇಲ್ಲಾ ಹಾಗೇಯೆ ಬಿಜೆಪಿಗೂ ಲಾಭ ಇಲ್ಲಾ ಎಂದರು.
ಮಹಾಲಕ್ಷ್ಮಿ ಅಣ್ಣಪ್ಪರವರಿಗೆ ಬಿಜೆಪಿಯವರು ವೈಯಕ್ತಿಕ ತೊಂದರೆ ಕೊಟ್ಟಾಗ ಕಾಂಗ್ರೆಸ್ ಪಕ್ಷ ಅವರ ಬೆಂಬಲಕ್ಕೆ ನಿಂತಿತ್ತು ಈವಾಗ ಕೇವಲ ವೈಯಕ್ತಿಕ ಸ್ವಾರ್ಥಕ್ಕಾಗಿ ಪಕ್ಷ ಬದಲಾಯಿಸಿರುವುದು ಅವರ ರಾಜಕೀಯ ಅಧೋಗತಿಗೆ ಮುನ್ನುಡಿಯಾಗಲಿದೆ, ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರಿಂದ ಗ್ರಾಪಂ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಹಾಲಕ್ಷ್ಮಿ ಅಣ್ಣಪ್ಪ ರವರು ನೈತಿಕ ಹೊಣೆ ಹೊತ್ತು ಕೂಡಲೇ ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಅವರ ವಿರುದ್ದ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಈ ಸಂಧರ್ಭದಲ್ಲಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಿಪ್ಪನ್ ಪೇಟೆ ಗ್ರಾಪಂ ಸದಸ್ಯರುಗಳಾದ ಮಧುಸೂದನ್, ಧನಲಕ್ಷ್ಮಿ, ವೇದಾವತಿ ಪರಮೇಶ್,ಗಣಪತಿ,ಪ್ರಕಾಶ್ ಪಾಲೇಕರ್ ಹಾಗೂ ಕಾಂಗ್ರೆಸ್ ಮುಖಂಡರಾದ ರವೀಂದ್ರ ಕೆರೆಹಳ್ಳಿ,ಫ಼್ಯಾನ್ಸಿ ರಮೇಶ್ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಉಲ್ಲಾಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.