Headlines

ಶಿಥಿಲಗೊಂಡ ಆನಂದಪುರದ ಪುರಾತನ ಕೋಟೆ ಆಂಜನೇಯ ದೇವಾಲಯವನ್ನು ಕೇವಲ 3 ತಿಂಗಳಿನಲ್ಲಿ ನಿಬ್ಬೆರಗಾಗುವಂತೆ ಜೀರ್ಣೋದ್ಧಾರಗೊಳಿಸಿದ ಭಕ್ತಾದಿಗಳು !!!!

ಸುಮಾರು 17 ನೇ  ಶತಮಾನದಲ್ಲಿ ಕೆಳದಿ ಶಿವಪ್ಪ ನಾಯಕ ಅರಸು  ಕಾಲದಲ್ಲಿ ನಿರ್ಮಾಣವಾಗಿದ್ದಂತಹ ಇತಿಹಾಸ ಪ್ರಸಿದ್ಧ ಪುರಾತನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನವು ಇಂದು ಭಕ್ತಾದಿಗಳನ್ನು ಆಕರ್ಷಣೆ ಒಮ್ಮೆ ತಿರುಗಿ ನೋಡುವಂತೆ ಭಕ್ತಿಪೂರ್ವಕವಾಗಿ ಭಕ್ತಾದಿಗಳನ್ನು ಆಕರ್ಷಿಸುವ ತೊಡಗಿತ್ತು.
ಆನಂದಪುರದ ಇತಿಹಾಸದಲ್ಲಿ 500 ವರ್ಷ ಇತಿಹಾಸವಿರುವ ಹಳೆಯ ಶಿಥಿಲಗೊಂಡ ದೇವಸ್ಥಾನವು ಕೇವಲ 3 ತಿಂಗಳಿನಲ್ಲಿ ನಿಬ್ಬೆರಗಾಗುವಂತೆ ಜೀರ್ಣೋದ್ಧಾರ ಮಾಡಿದಂತ ಹೆಮ್ಮೆ ಆನಂದಪುರದ ಭಕ್ತಾದಿಗಳಿಗೆ ಸಲ್ಲುತ್ತದೆ.

3 ತಿಂಗಳ ಹಿಂದೆ ಈ ದೇವಸ್ಥಾನವು ಸಂಪೂರ್ಣವಾಗಿ ಶಿಥಿಲಗೊಂಡು ಕಳೆಯನ್ನು ಕಳೆದುಕೊಂಡಿತ್ತು ಆದರೆ ಇದೀಗ ಒಮ್ಮೆ ಎಲ್ಲರೂ ಈ ದೇವಸ್ಥಾನಕ್ಕೆ ಭಕ್ತಿಪೂರ್ವಕವಾಗಿ ವಿನಮ್ರವಾಗಿ ನಮಿಸುವಂತೆ ಇದೀಗ ಕಾಣತೊಡಗಿದೆ.

    ಇಂದು ಕೋಟೆ ಆಂಜನೇಯ ಸ್ವಾಮಿಗೆ  ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿಸಿ 4 ಸಾವಿರ ಜನಕ್ಕೆ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು ಹಾಗೂ ಸಂಜೆ ದೀಪೋತ್ಸವ ಕಾರ್ಯಕ್ರಮವನ್ನು ನೆರವೇರಿಸಿ ದೀಪ ಅಲಂಕಾರದಿಂದ ದೇವಾಲಯ ಕಂಗೊಳಿಸುತ್ತಿತ್ತು.
ಒಟ್ಟಾರೆ ಆನಂದಪುರದ ಕೋಟೆ ಆಂಜನೇಯ ಜೀರ್ಣೋದ್ಧಾರ ಸಮಿತಿ  ,ಶ್ರೀ ಮಾರುತಿ ಯುವಕ ಸಂಘ ಹಾಗೂ ಆನಂದಪುರದ ಭಕ್ತಾದಿಗಳ ಸಹಯೋಗದೊಂದಿಗೆ 3 ತಿಂಗಳಿನಲ್ಲಿ 20 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿ  ಈ ದೇವಸ್ಥಾನ ಇಷ್ಟರಮಟ್ಟಿಗೆ ಜೀರ್ಣೋದ್ಧಾರಗೊಂಡಿದ್ದು ಮಾತ್ರ ಭಕ್ತರಲ್ಲಿ ಭಕ್ತಿಯೊಂದಿಗೆ ಹರ್ಷವನ್ನ ಮೂಡಿಸಿತ್ತು.







ವರದಿ : ಪವನ್ ಕುಮಾರ್ ಕಠಾರೆ

Leave a Reply

Your email address will not be published. Required fields are marked *