ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿಶೀಟರ್ ಗೆ ಗುಂಡೇಟು | ಭದ್ರಾವತಿಯಲ್ಲಿ ನಡೆದಿದ್ದೇನು..!!?
ಶಿವಮೊಗ್ಗ ; ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಮುಂದಾಗಿದ್ದ ರೌಡಿಶೀಟರ್ ಕಾಲಿಗೆ ಸಬ್‌ಇನ್ಸ್ಪೆಕ್ಟರ್ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ ಘಟನೆ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಗುಂಡ ಅಲಿಯಾಸ್ ರವಿ, ಪೊಲೀಸ್ ಸಿಬಂದಿ ಆದರ್ಶ್ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದ ಈ ವೇಳೆ ಪಿಎಸ್‌ಐ ಕೃಷ್ಣ, ಶರಣಾಗುವಂತೆ ಸೂಚಿಸಿದರು.ಕೇಳದೇ ಇದ್ದಾಗ ಪಿಎಸ್‌ಐ ಕೃಷ್ಣ, ರೌಡಿ ಶೀಟರ್ ಗುಂಡನ ಕಾಲಿಗೆ ಗುಂಡು ಹಾರಿಸಿದ್ದಾರೆ.

ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಗುಂಡ ಅಲಿಯಾಸ್ ರವಿ ಇತ್ತೀಚೆಗೆ ಪ್ರವೀಣ್ ಬಿನ್ ನಾಗರಾಜ್ ಎಂಬಾತನ ಮೇಲೆ ಸ್ನೇಹಿತನೊಂದಿಗೆ ಸೇರಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿ ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದನು. ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು ಈ ಬಗ್ಗೆ ಹೊಸಮನೆ ಠಾಣೆಯಲ್ಲಿ 22/2025 ಗುನ್ನೆ ಸಂಖ್ಯೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಬೆನ್ನತ್ತಿದ್ದ ಹೊಸಮನೆ ಪೊಲೀಸರು ಆರೋಪಿ ಗುಂಡ ನನ್ನು ಬಂಧಿಸಲು ತೆರಳಿದಾಗ ಪೊಲೀಸ್ ಸಿಬ್ಬಂದಿ ಆದರ್ಶ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದಾನೆ ಈ ಸಂಧರ್ಭದಲ್ಲಿ ಪಿಎಸ್‌ಐ ಶರಣಾಗುವಂತೆ ಸೊಚಿಸಿದರೂ ಕೇಳದೇ ಇದ್ದಾಗ ಕಾಲಿಗೆ ಗುಂಡು ಹೊಡೆದಿದ್ದಾರೆ.
ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.