ಸಾಗರ : ಅಬಕಾರಿ ಅಧಿಕಾರಿಗಳ ಭರ್ಜರಿ ಕಾರ್ಯಚರಣೆ , 150 ಲೀ ಬೆಲ್ಲದ ಕೊಳೆ ವಶ

ಸಾಗರ : ಅಕ್ರಮವಾಗಿ ಕಳ್ಳ ಭಟ್ಟಿ ಸಾರಾಯಿ ತಯಾರಿಕೆಗೆ ಬಳಸುವ ಬೆಲ್ಲ ಕೊಳೆಯನ್ನು ಸಂಗ್ರಹಿಸಿಟ್ಟಿದ್ದ ಮನೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಸಾಗರ ತಾಲೂಕಿನ ಸುಳ್ಳೂರು ಗ್ರಾಮದಲ್ಲಿ ನಡೆದಿದೆ. ಈ ವೇಳೆ ಹೊಲದಲ್ಲಿ ಸಂಗ್ರಹಿಸಿದ್ದ 150 ಲೀಟರ್ ಬೆಲ್ಲದ ಕೊಳೆಯನ್ನು ವಶಕ್ಕೆ ಪಡೆಯಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸುಳ್ಳೂರು ಗ್ರಾಮದ ಕಾಳಿ ಕಟ್ಟೆ ಎಂಬಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕೆಗೆ ಸಂಗ್ರಹಿಸಿದ್ದ ಬೆಲ್ಲದ ಕೊಳೆಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಲಕ್ಷಣ ಬಿನ್ ಬಸಪ್ಪ ಎಂಬುವವನನ್ನು ವಶಕ್ಕೆ ಪಡೆಯಲಾಗಿದೆ.

ಸಾಗರ ವಲಯ ಅಬಕಾರಿ ನಿರೀಕ್ಷಕರಾದ ಸಂದೀಪ್ ಎಲ್ ಸಿ ರವರ ನೇತ್ರತ್ವದಲ್ಲಿ ಈ ದಾಳಿ ನಡೆದಿದೆ.  

150 ಲೀಟರ್ ಬೆಲ್ಲದ ಕೊಳೆಯನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಾಗರ ವಲಯ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿ ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದಾಳಿಯಲ್ಲಿ ಅಬಕಾರಿ ಸಿಬ್ಬಂದಿಗಳಾದ ಸಂತೋಷ್ ಅಬಕಾರಿ ಉಪ ನಿರೀಕ್ಷಕರು , ಅಬಕಾರಿ ಕಾನ್ ಸ್ಟೆಬಲ್ ಗಳಾದ  ಮಹಾಬಲೇಶ್ ಗರುಮೂರ್ತಿ ಮುದಾಸಿರ್ರ್ ಕನ್ನಯ್ಯ ಬಸವರಾಜ್ ಹಾಗೂ ವಾಹನ ಚಾಲಕರಾದ ಗಣಪತಿ ಭಾಗವಹಿಸಿದ್ದರು.



ವರದಿ : ಓಂಕಾರ್ ಎಸ್ ವಿ ತಾಳಗುಪ್ಪ

Leave a Reply

Your email address will not be published. Required fields are marked *