ರಿಪ್ಪನ್ ಪೇಟೆ: ಸ್ವಾತಂತ್ರ್ಯೋತ್ಸವದ ದಿನದಂದು ಮೌನ ಹೋರಾಟಕ್ಕಿಳಿದ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ:

ರಿಪ್ಪನ್ ಪೇಟೆ:ದೇಶಕ್ಕೆ ಸ್ವಾತಂತ್ರ್ಯಬಂದು ಎಪ್ಪತ್ತೈದು ವರ್ಷವಾಯಿತು,  ಭ್ರಷ್ಟಾಚಾರ ಮಾಡುವವರು,ಲೂಟಿ ಹೊಡೆಯುವವರು ಸ್ವಾತಂತ್ರ್ಯ ಸಿಕ್ಕಿದೆ.ದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದೇವೆ,ಕೊಡಿಸಿದ್ದೇವೆ ಎಂಬ ಕೀಳು ಮಟ್ಟದ ಮಾತುಗಳನ್ನಾಡುತ್ತಿದ್ದಾರೆಯೇ ಹೊರತು ದೇಶದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಆಸಕ್ತಿ ಇಲ್ಲಾ ಇಚ್ಚಾಶಕ್ತಿ ಇಲ್ಲದ ರಾಜಕಾರಣಿಗಳಿಂದ ದೇಶಕ್ಕೆ ಏನೂ ಪ್ರಯೋಜನ ಇಲ್ಲಾ. ಎಲ್ಲಾ ಆಡಂಬರದ ಆಚರಣೆ ಎಂದು ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಪೋಲಿಸರನ್ನು ಸದ್ಬಳಕೆ ಮಾಡಿಕೊಂಡ್ಡಿದ್ದರೆ ದೇಶ ಪ್ರಪಂಚಕ್ಕೆ ಮಾದರಿಯಾಗುತ್ತಿತ್ತು,ಆದರೆ ಅವರನ್ನು ಸದ್ಬಳಕೆ ಮಾಡಿಕೊಳ್ಳದೆ ದುರ್ಬಳಕೆ ಮಾಡಿಕೊಂಡು ಕೆಟ್ಟ ನೀತಿಯನ್ನು ಮಾಡಿಕೊಂಡು…

Read More

ಶೈಕ್ಷಣಿಕ ಅಭಿವೃದ್ಧಿಗೆ ಸಂಪೂರ್ಣ ಸಹಕಾರ: ಆರಗ ಜ್ಞಾನೇಂದ್ರ

 ರಿಪ್ಪನ್ ಪೇಟೆ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರತಿಭೆ ಇದ್ದರೂ ಅವಕಾಶವಿರುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂಬ ಸದುದ್ದೇಶದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ರಾಜ್ಯದ ಗೃಹ ಮಂತ್ರಿ ಆರಗ ಜ್ಞಾನೇಂದ್ರ  ಹೇಳಿದರು.  ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅತ್ಯುತ್ತಮ ಕಾಲೇಜ್ ಎಂದು ಖ್ಯಾತಿ ಗಳಿಸಿರುವ ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರು  ಹಾಗೂ ಗೃಹಸಚಿವರಾದ ಆರಗ ಜ್ಞಾನೇಂದ್ರ ಅವರು ಸೋಮವಾರ ಭೇಟಿ ನೀಡಿ…

Read More

ರಿಪ್ಪನ್ ಪೇಟೆ: ಗುರು ರಾಘವೇಂದ್ರ ಸ್ವಾಮಿಗಳವರ 350ನೇ ಆರಾಧನ ಮಹೋತ್ಸವ:

ರಿಪ್ಪನ್‌ಪೇಟೆ:ಇಲ್ಲಿನ ಬೈರಾಪುರದ ಕಿರುಮಂತ್ರಾಲಯ ಶ್ರೀಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಆಗಸ್ಟ್ 23 ರಿಂದ 25 ರವರೆಗೆ ಗುರುರಾಘವೇಂದ್ರ ಸ್ವಾಮಿಗಳವರ 350ನೇ ಆರಾಧನಾ ಮಹೊತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ಟಿ.ಪುರುಷೋತ್ತಮ್‌ರಾವ್ ಮತ್ತು ಕಾರ್ಯದರ್ಶಿ ಕೆ.ದೇವರಾಜ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊರೊನಾ ಮಾರ್ಗಸೂಚಿಯನ್ವಯ ಸರಳ ಸಂಪ್ರದಾಯದಂತೆ 23ರಂದು ಸೋಮವಾರ ಬೆಳಗ್ಗೆ ಪೂರ್ವಾರಾಧನೆ ಮತ್ತು ವಿಶೇಷ ಪೂಜೆಗಳು ತೀರ್ಥಪ್ರಸಾದ ವಿತರಣೆ, ಆಗಸ್ಟ್ 24 ರಂದು ಮಂಗಳವಾರ ಗುರುರಾಯರ ಆರಾಧನೆ ವಿಶೇಷ ಪೂಜೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ…

Read More

ಚಿಕ್ಕಜೇನಿ ಪ್ರೌಢಶಾಲೆ ಎಸ್ ಡಿಎಂಸಿ ಅಧ್ಯಕ್ಷರಾಗಿ ಉಮೇಶ್ ಗೌಡ ಆಯ್ಕೆ:

ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಚಿಕ್ಕ ಜೇನಿ ಸರ್ಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಉಮೇಶ್ ಗೌಡ ಚಿಕ್ಕಜೇನಿ ಆಯ್ಕೆಯಾಗಿದ್ದಾರೆ. ಶನಿವಾರ ಪ್ರೌಢಶಾಲಾ ಆವರಣದಲ್ಲಿ ನಡೆದ ಪೋಷಕರಿಂದ ಆಯ್ಕೆಯಾದ ಸದಸ್ಯರು ಉಮೇಶ್ ಗೌಡ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.  ಸಮಿತಿಯ ಸದಸ್ಯರಾಗಿ ಶ್ರೀಮತಿ ಆಶಾ ನರಸಿಂಹ, ಶ್ರೀಮತಿ ಮೀನಾಕ್ಷಿ, ಶ್ರೀಮತಿ ಯಶೋಧ, ಧನಂಜಯ ಹಿರೇಜೇನಿ, ನಾಗರಾಜ್ ಬಿಳಿಕಿ, ಹರೀಶ್ ಕುಮಾರ್ ಕಾರೆಮಟ್ಟಿ, ಜಿಎಲ್ ಲಿಂಗರಾಜ್ ಹಿರೇಮೈತೆ, ಶಿವಕುಮಾರ್ ಶೆಟ್ಟಿಬೀಡು ಇವರುಗಳು ಆಯ್ಕೆಯಾದರು.  ಸಭೆಯ ಅಧ್ಯಕ್ಷತೆಯನ್ನು ಶಾಲಾ…

Read More

ಕೆಂಚನಾಲ ನೂತನ ಮಾರಿಕಾಂಬಾ ದೇವಾಲಯ ಲೋಕಾರ್ಪಣೆ:

ರಿಪ್ಪನ್ ಪೇಟೆ: ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ಧ ಕೆಂಚನಾಲ ಮಾರಿಕಾಂಬಾ ದೇವಾಲಯವು ಇಂದು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಲೋಕಾರ್ಪಣೆಗೊಂಡಿತು. ಕೆಂಚನಾಲ ಮಾರಿಕಾಂಬಾ ದೇವಾಲಯದ ಲೋಕಾರ್ಪಣ ಕಾರ್ಯಕ್ರಮವು ಅತ್ಯಂತ ಸರಳ ಹಾಗೂ ಸಾಂಕೇತಿಕವಾಗಿ ನಡೆಯಿತು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮವು ಕೆಂಜಿಗಾಪುರ ಶ್ರೀಧರ ಭಟ್ ನೇತ್ರತ್ವದಲ್ಲಿ ಜರುಗಿತು.ಹಾಗೂ ಕೊರೊನಾ ರೋಗದ ಭೀತಿಯಿಂದ ಇಲ್ಲಿಗೆ ಆಗಮಿಸುವ ಭಕ್ತಾದಿಗಳ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿತ್ತು.  ರಾಜ್ಯ ಸರ್ಕಾರದ ಆದೇಶದಂತೆ ಕೊರೋನ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿತ್ತು. ತಾಲೂಕು ಆಡಳಿತ, ಗ್ರಾಮಾಡಳಿತ, ಕಂದಾಯ…

Read More

ದೇವೇಗೌಡರು ಹಾಗೂ ಕುಮಾರಸ್ವಾಮಿ ಬೆಂಬಲ ಇರುವ ತನಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ : ಬೇಳೂರು ಗೋಪಾಲಕೃಷ್ಣ

ರಿಪ್ಪನ್ ಪೇಟೆ : ರಾಜ್ಯದಲ್ಲಿ ನೂತನವಾಗಿ ರಚನೆಗೊಂಡಿರುವ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಬೆಂಬಲ ಇರುವ ತನಕ ಮಾತ್ರ ಅಸ್ತಿತ್ವದಲ್ಲಿರುತ್ತದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.  ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ನೂತನವಾಗಿ ರಚನೆಗೊಂಡಿರುವ ಬಸವರಾಜ್ ಬೊಮ್ಮಾಯಿ ಅವರ ಸರಕಾರಕ್ಕೆ ಅವರ ಪಕ್ಷದಿಂದಲೇ ಬಹಳಷ್ಟು ವಿರೋಧವಿದೆ. ಈಗಾಗಲೇ ಭಿನ್ನಮತೀಯರ ಚಟುವಟಿಕೆ ಹೆಚ್ಚಾಗಿದ್ದು ಕೆಲವೇ ದಿನಗಳಲ್ಲಿ ಕೆಲವು ಮಂತ್ರಿಗಳು ಹಾಗೂ ಶಾಸಕರು…

Read More

ಅವ್ಯವಸ್ಥೆಯ ಆಗರ,ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಾದ ರಿಪ್ಪನ್ ಪೇಟೆ ಬಸ್ ಪ್ರಯಾಣಿಕರ ತಂಗುದಾಣ !!

  ರಿಪ್ಪನ್ ಪೇಟೆ : ತಾಲೂಕಿನಲ್ಲೇ ಅತೀ ದೊಡ್ಡ ಗ್ರಾಮ ಪಂಚಾಯತ್, ಸ್ವಚ್ಚ ಭಾರತ್ ಅಭಿಯಾನದಲ್ಲಿ ಪ್ರಶಸ್ತಿ ಪಡೆದ ಪಂಚಾಯತಿ,ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ರಿಪ್ಪನ್ ಪೇಟೆ ಯಲ್ಲಿರುವ ಒಂದೇ ಒಂದು ಪ್ರಯಾಣಿಕರ ತಂಗುದಾಣ ಸರಿಯಾದ ನಿರ್ವಹಣೆ ಇಲ್ಲದೆ ಗಬ್ಬುನಾರುತ್ತಿದೆ. ರಿಪ್ಪನ್ ಪೇಟೆ ಜನತೆಯ ದಶಕದ ಬೇಡಿಕೆ ಬಸ್ ನಿಲ್ದಾಣ ರಾಜಕಾರಣಿ ಗಳ ಇಚ್ಚ ಶಕ್ತಿ ಕೊರತೆಯಿಂದ ಆಗದೆ ರಾಜಕಾರಣಿ ಗಳಿಗೆ ತಮ್ಮ ಎಲೆಕ್ಷನ್ ಸಮಯದ ಪ್ರಚಾರದ ಅಸ್ತ್ರಕ್ಕೆ ಸೀಮಿತ ವಾಗಿದೆ. ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು…

Read More

ಶಿವಮೊಗ್ಗಜಿಲ್ಲೆಯ ನೂತನ ಮಂತ್ರಿಗಳಿಗೆ ಶ್ರೀ ರೇಣುಕಾನಂದ ಸ್ವಾಮೀಜಿಗಳಿಂದ ಅಭಿನಂದನೆ.

ರಿಪ್ಪನ್ ಪೇಟೆ : ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ ಬಸವರಾಜ್ ಬೊಮ್ಮಾಯಿ ಅವರ ಸರಕಾರದಲ್ಲಿ ಶಿವಮೊಗ್ಗ ಜಿಲ್ಲೆಯ ಕೆಎಸ್ ಈಶ್ವರಪ್ಪ ಹಾಗೂ ಆರಗ ಜ್ಞಾನೇಂದ್ರ ರವರನ್ನು ಸಚಿವರನ್ನಾಗಿ ಮಾಡಿದ್ದಕ್ಕೆ ನಿಟ್ಟೂರಿನ ಶ್ರೀನಾರಾಯಣಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿಗಳು ಅಭಿನಂದಿಸಿದ್ದಾರೆ.  ರಿಪ್ಪನ್ ಪೇಟೆ ಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸರಳ ಸಜ್ಜನಿಕೆಯ ವ್ಯಕ್ತಿತ್ವ ಜನನಾಯಕ ಆರಗ ಜ್ಞಾನೇಂದ್ರ ರವರಿಗೆ ರಾಜ್ಯದ ಗೃಹ ಮಂತ್ರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿರುವುದು ಸಂತೋಷವಾಗಿದೆ. …

Read More

ಸಹೃದಯಿ ಶಾಸಕ ಆರಗ ಜ್ಞಾನೇಂದ್ರರವರಿಗೆ ಗೃಹಖಾತೆ ಲಭಿಸಿರುವುದು ಖುಷಿ ತಂದಿದೆ : ಎಂ ಬಿ ಲಕ್ಷಣಗೌಡ

ರಿಪ್ಪನ್ ಪೇಟೆ: ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಸರಳ ಹಾಗೂ ಸಹೃದಯಿ ವ್ಯಕ್ತಿತ್ವದ ಜನನಾಯಕ ಆರಗ ಜ್ಞಾನೇಂದ್ರರವರು ಗೃಹ ಸಚಿವರಾಗಿ ಆಯ್ಕೆಯಾಗಿರುವುದು ಸಮಾಜಕ್ಕೆ ಹರ್ಷ ತಂದಿದೆ ಎಂದು ಹೊಸನಗರ ತಾಲೂಕಿನ ಒಕ್ಕಲಿಗ ಸಮಾಜದ ಅಧ್ಯಕ್ಷರಾದ ಎಂ ಬಿ ಲಕ್ಷಣಗೌಡ ಹೇಳಿದ್ದಾರೆ. ಕಳೆದ 45 ವರ್ಷಗಳಿಂದ ಸಂಘ ಪರಿವಾರದಲ್ಲಿ ಸಕ್ರೀಯ ನಾಯಕರಾಗಿದ್ದು 9 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ 4 ಬಾರಿ ಶಾಸಕರಾಗಿ ಎಂದಿಗೂ ಅಧಿಕಾರಕ್ಕಾಗಿ ಲಾಭಿ ನಡೆಸದೇ ಇದ್ದ ಜನನಾಯಕನಿಗೆ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಗೃಹ ಸಚಿವರಾಗಿ…

Read More

ರಿಪ್ಪನ್ ಪೇಟೆ : ಜಿಲ್ಲೆಯ ನೂತನ ಸಚಿವರುಗಳಿಗೆ ಅದ್ದೂರಿ ಸ್ವಾಗತ

ರಿಪ್ಪನ್ ಪೇಟೆ: ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ನೂತನ ಸಚಿವರಾಗಿ ಮೊದಲ ಬಾರಿಗೆ ರಿಪ್ಪನ್ ಪೇಟೆಗೆ ಆಗಮಿಸಿದ ಶಿವಮೊಗ್ಗ ಉಸ್ತುವಾರಿ ಸಚಿವರಾದ ಕೆಎಸ್ ಈಶ್ವರಪ್ಪನವರು ಹಾಗೂ ಪ್ರಪ್ರಥಮವಾಗಿ ಸಚಿವರಾಗಿರುವ ಆರಗ ಜ್ಞಾನೇಂದ್ರ ರವರನ್ನು ರಿಪ್ಪನ್ ಪೇಟೆಯ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಡಗರದಿಂದ ಪಟಾಕಿ ಸಿಡಿಸಿ,ಸಾರ್ವಜನಿಕರಿಗೆ ಸಿಹಿ ಹಂಚಿ ಬರಮಾಡಿಕೊಂಡರು. ರಿಪ್ಪನ್ ಪೇಟೆಯ ವಿನಾಯಕ ವೃತ್ತಕ್ಕೆ ಬಂದಿಳಿದ ಸಚಿವರುಗಳು ಅದ್ದೂರಿ ಸ್ವಾಗತ ಸ್ವೀಕರಿಸಿದ ನಂತರ ಗ್ರಾಮ ಪಂಚಾಯತ್ ವರೆಗೂ ಮೆರವಣಿಗೆ ಮೂಲಕ ಬಂದ ಸಚಿವರುಗಳಿಗೆ ರಿಪ್ಪನ್ ಪೇಟೆ ಗ್ರಾಮ…

Read More