ರಿಪ್ಪನ್ ಪೇಟೆ : ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಸುಗೂಸು : ಸಹಾಯಕ್ಕಾಗಿ ಯಾಚನೆ

ರಿಪ್ಪನ್ ಪೇಟೆ :ಪಟ್ಟಣದ ತೀರ್ಥಹಳ್ಳಿ ರಸ್ತೆ ಶಬರೀಶನಗರ ನಿವಾಸಿ ಭರತ್ ಹಾಗು ಶ್ವೇತ ದಂಪತಿಯ ಏಳು ತಿಂಗಳಿಗೆ ಜನಿಸಿದ ಹಸುಗೂಸು ಉಸಿರಾಟದ ಸಮಸ್ಯೆಯಿಂದ ಸಾವು ಬದುಕಿನ ಮದ್ಯೆ ಹೋರಾಡುತ್ತಿದೆ. ಸದ್ಯ ಮಗುವಿಗೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ಲಕ್ಷಾಂತರ ರೂ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.ಉಸಿರಾಟದ ತೊಂದರೆ, ಸೆಳವು ಅಥವಾ ಸಾಮಾನ್ಯ ತಾಪಮಾನವನ್ನು ಕಾಪಾಡಿಕೊಳ್ಳಲು ಅಸಮರ್ಥತೆಯ ಮತ್ತು ಮೆದುಳಿನಲ್ಲಿ ನೀರು ತುಂಬಿಕೊಂಡಿರುವ ತೊಂದರೆಯಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದೆ. ಈ ಕುಟುಂಬದಲ್ಲಿ  ಲಕ್ಷಾಂತರ ವೆಚ್ಚ ಪಾವತಿಸಲು…

Read More

ರಿಪ್ಪನ್ ಪೇಟೆಯಲ್ಲಿ ನಿರ್ಮಾಣವಾಗುತ್ತಿದೆ ನೂತನ ಸಾರ್ವಜನಿಕ ಹೈಟೆಕ್ ಶೌಚಾಲಯ:

ರಿಪ್ಪನ್ ಪೇಟೆ: ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿ ಸುಮಾರು ಹದಿನೈದು ಲಕ್ಷ ರೂಪಾಯಿ ಅನುದಾನದಲ್ಲಿ ನೂತನ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಸಿದ್ದವಾಗುತ್ತಿದ್ದು ಶೀಘ್ರದಲ್ಲಿ ಅತ್ಯಾಧುನಿಕ ಸುಸಜ್ಜಿತ ಶೌಚಾಲಯ ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗುತ್ತದೆ.ಈ ಹಿಂದೆ ಇದ್ದ ಶಿಥಿಲಗೊಂಡಿದ್ದ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.      { ….ನೂತನ ಹೈಟೆಕ್ ಶೌಚಾಲಯದ ನೀಲನಕ್ಷೆ…} ಸುತ್ತಮುತ್ತ ನೂರಾರು ಹಳ್ಳಿಗಳ  ಕೇಂದ್ರ ಬಿಂದುವಾಗಿರುವ ರಿಪ್ಪನ್ ಪೇಟೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದ ಹಳೆಯ ಸಾರ್ವಜನಿಕ ಶೌಚಾಲಯ ಪಾಳು ಬಿದ್ದು ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಯಲ್ಲಿದ್ದು…

Read More

ರಿಪ್ಪನ್ ಪೇಟೆ : ಪರಸ್ತ್ರೀ ವ್ಯಾಮೋಹಕ್ಕೆ ಪತಿ ಪರಾರಿ!! : ಪತ್ನಿಯಿಂದ ನಾಪತ್ತೆ ದೂರು ದಾಖಲು

ರಿಪ್ಪನ್ ಪೇಟೆ : ಪಟ್ಟಣದ ಗಾಂಧಿನಗರ ನಿವಾಸಿ 37 ವರ್ಷದ ಜಾಫರ್ ಎಂಬ ವ್ಯಕ್ತಿಯು ಆಗಸ್ಟ್ 22 ರಿಂದ ಕಾಣೆಯಾಗಿದ್ದಾರೆ ಎಂದು ಆತನ ಪತ್ನಿ ರಿಪ್ಪನ್ ಪೇಟೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಟ್ಟಣದ ಗಾಂಧಿನಗರ ನಿವಾಸಿ ಮಹಮ್ಮದ್ ಜಾಫರ್ ಹೊಸನಗರ ರಸ್ತೆಯಲ್ಲಿ ಗ್ಯಾರೇಜ್ ಹೊಂದಿದ್ದು ಹದಿಮೂರು ವರ್ಷದ ಹಿಂದೆ ಗಾಂಧಿನಗರ ವಾಸಿ ನಜ್ಮಾ ಎಂಬಾಕೆಯನ್ನು ಮದುವೆಯಾಗಿದ್ದು ಈ ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ.ಆಗಸ್ಟ್ 22ರ ಬೆಳಗ್ಗೆ ಎಂದಿನಂತೆ ಮೆಕ್ಯಾನಿಕ್ ಕೆಲಸಕ್ಕೆ ಹೋದ ಜಾಫರ್ ಹಿಂದಿರುಗಿ ವಾಪಾಸ್ ಮನೆಗೆ…

Read More

ಅವ್ಯವಸ್ಥೆಯ ಆಗರ ರಿಪ್ಪನ್ ಪೇಟೆಯ ನಾಡಕಚೇರಿ : ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಾರ್ವಜನಿಕರ ಹರಸಾಹಸ

ರಿಪ್ಪನ್ ಪೇಟೆ:  ತಾಲ್ಲೂಕಿನಲ್ಲಿಯೇ ಅತೀ ದೊಡ್ಡ ಹೋಬಳಿ ರಿಪ್ಪನ್ ಪೇಟೆ ವ್ಯಾಪ್ತಿಯ ನಾಡಕಛೇರಿಯಲ್ಲಿನ ಅವ್ಯವಸ್ಥೆಯಿಂದ ಜನಸಾಮಾನ್ಯರು ಪ್ರತಿದಿನ ಪರದಾಡುವಂತಾಗಿದೆ. ರಿಪ್ಪನ್ ಪೇಟೆ ಹೋಬಳಿ ವ್ಯಾಪ್ತಿಯು ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ತಾಂತ್ರಿಕ ಸಮಸ್ಯೆಗಳಿಂದಾಗಿ ಸಾಮಾಜಿಕ ಭದ್ರತಾ ಯೋಜನೆಯ ವಿಧವಾ ವೇತನ, ವೃದ್ಯಾಪ್ಯ ವೇತನ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಬೆಳೆ ದೃಡೀಕರಣ ಪತ್ರ, ಜಮೀನು ಸರ್ವೇಗಾಗಿ ಭೂ ಮಾಪನಾ ಅರ್ಜಿ ಸಲ್ಲಿಕೆ, ವಾಸಸ್ಥಳ, ವಂಶವೃಕ್ಷ, ಅತ್ಯವಶ್ಯಕ ದೃಡೀಕರಣ ಪತ್ರಗಳು ಸೇರಿ ವಿವಿಧ ಯೋಜನೆಗಳ ಸೌಲಭ್ಯಗಳಿಗಾಗಿ…

Read More

ರಿಪ್ಪನ್ ಪೇಟೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಳಿ ಕ್ಷಮೆ ಕೋರದೆ ಇದ್ದರೆ ಬೇಳೂರು ವಿರುದ್ದ ಬಿಲ್ಲವ ಸಮಾಜದಿಂದ ಉಗ್ರ ಪ್ರತಿಭಟನೆಯ ಎಚ್ಚರಿಕೆ :

ರಿಪ್ಪನ್ ಪೇಟೆ: ಸೊರಬದಲ್ಲಿ ಇತ್ತೀಚೆಗೆ ನಡೆದ ಈಡಿಗರ ಸಮುದಾಯದ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ದ ಮಾಜಿ ಶಾಸಕ ಗೋಪಾಲಕೃಷ್ಣ ಅವಹೇಳನಕಾರಿಯಾಗಿ ಮಾತನಾಡಿದ್ದು ಕೂಡಲೇ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಕೆರೆಹಳ್ಳಿ ಹಾಗೂ ಹುಂಚಾ ಹೋಬಳಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜದ ಅಧ್ಯಕ್ಷರಾದ ಗರ್ತಿಕೆರೆ ಚಂದ್ರಪ್ಪ ಒತ್ತಾಯಿಸಿದ್ದಾರೆ. ಪಟ್ಟಣದಲ್ಲಿ ಬುಧವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಚಿವ ಶ್ರೀನಿವಾಸ ಪೂಜಾರಿಯವರಿಗೆ ಹೆಬ್ಬೆಟ್ಟು,ಅವರಿಗೆ ಯಾವುದೇ ವಿಧ್ಯಾಭ್ಯಾಸ ಇಲ್ಲ…

Read More

ಹುಂಚಾ : ಗೃಹಮಂತ್ರಿಗಳ ಸ್ವಕ್ಷೇತ್ರದಲ್ಲಿ ಇಲ್ಲದವರ ಮೇಲೆ ಉಳ್ಳವರ ದರ್ಬಾರ್ : ಬಡ ವೃದ್ದೆಯ ಮೇಲೆ ದಬ್ಬಾಳಿಕೆ

ರಿಪ್ಪನ್‌ಪೇಟೆ: ಹೊಸನಗರ ತಾಲ್ಲೂಕಿನ ಹುಂಚ ಹೋಬಳಿ ವ್ಯಾಪ್ತಿಯ ಕರಿಗೆರಸು ಗ್ರಾಮದ ಸರ್ವೇ ನಂಬರ್ 37 ರಲ್ಲಿ ಜಮೀನಿನ ಖಾತೆದಾರನಿಗೆ ಹಕ್ಕು ಪತ್ರ ನೀಡಲಾಗಿದ್ದರೂ ಕೂಡಾ ಸದರಿ ಜಾಗದ ಪಕ್ಕದ ರೈತನೋರ್ವ ದುರುದ್ದೇಶದಿಂದ ಅಧಿಕಾರಿಗಳನ್ನು ಬಳಸಿಕೊಂಡು ಓಡಾಟಕ್ಕೆ ಜಾಗ ಬಿಡುವಂತೆ ಒತ್ತಾಯಿಸಿ ತೆರವುಗೊಳಿಸಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಸದರಿ ಗ್ರಾಮದ ಸರಿಯಾಗಿ ಕಣ್ಣು ಕಾಣಿಸದ ಮತ್ತು ಕಿವಿ ಕೇಳಿಸದ ಸುಮಾರು 75 ವರ್ಷದ ವೃದ್ಧೆ ಗೌರಮ್ಮ ಕೋಂ ಡಾಕಪ್ಪ ಎಂಬುವರಿಗೆ ಸರ್ವೇ ನಂಬರ್ 37 ರಲ್ಲಿ ಒಂದು…

Read More

ರಿಪ್ಪನ್ ಪೇಟೆ : ನೂತನ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಅನುದಾನ ಬಿಡುಗಡೆ:ಶಾಸಕ ಹರತಾಳು ಹಾಲಪ್ಪ

ರಿಪ್ಪನ್ ಪೇಟೆ: ಪಟ್ಟಣದ ಬಹುದಿನಗಳ ಬೇಡಿಕೆಯಾಗಿದ್ದ ಮೆಟ್ರಿಕ್ ಪೂರ್ವ ಬಾಲಕರ ವಿಧ್ಯಾರ್ಥಿ ನಿಲಯದ ನೂತನ ಕಟ್ಟಡಕ್ಕೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸುಮಾರು ನಾಲ್ಕು ಕೋಟಿ ಇಪ್ಪತ್ತಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ಶಾಸಕರಾದ ಹರತಾಳು ಹಾಲಪ್ಪ ಇಂದಿಲ್ಲಿ ತಿಳಿಸಿದರು. ರಿಪ್ಪನ್ ಪೇಟೆ ಯಲ್ಲಿರುವ ಪ್ರಸ್ತುತ ಬಾಲಕರ ವಸತಿ ನಿಲಯವು ಶಿಥಿಲ ಅವಸ್ಥೆಯಲ್ಲಿರುವುದರಿಂದ ಬಹುದಿನದ ಬೇಡಿಕೆಯಾಗಿದ್ದ ವಸತಿ ನಿಲಯದ ಕಟ್ಟಡಕ್ಕೆ ಅನುಮೋದನೆ ಸಿಕ್ಕಿರುವುದರಿಂದ ಹರತಾಳು ಹಾಲಪ್ಪ ನವರು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡದ…

Read More

ಹೆದ್ದಾರಿಪುರ: ಬಿಜೆಪಿ ಕಾರ್ಯಕರ್ತರ ಪಕ್ಷ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ : ಆರಗ ಜ್ಞಾನೇಂದ್ರ

ಹೆದ್ದಾರಿಪುರ : ಕರ್ನಾಟಕ ರಾಜ್ಯದ ಗೃಹ ಮಂತ್ರಿಯಾದ ಆರಗ ಜ್ಞಾನೇಂದ್ರ ರವರು ಬಿಜೆಪಿಯ ಬೂತ್ ಮಟ್ಟದ ಅಧ್ಯಕ್ಷರ ನಾಮಫಲಕ ಅನಾವರಣದ ನಿಮಿತ್ತ ಇಂದು ಹೆದ್ದಾರಿಪುರ ಬೂತ್ ನ ಅಧ್ಯಕ್ಷರಾದ ಸತೀಶ್ ಭಟ್ ರವರಿಗೆ ಅಭಿನಂದಿಸಿ ನಾಮಫಲಕ ಅನಾವರಣ ಮಾಡುವ ಮೂಲಕ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಾಮಪಲಕ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಿಜೆಪಿ ಯು “ಕಾರ್ಯಕರ್ತರ ಪಕ್ಷ” ಎನ್ನುವುದು ನಮ್ಮೆಲ್ಲರಿಗೂ ಗೌರವದ ಸಂಗತಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೊತೆಗೆ ಪಕ್ಷದ ಸಂಪರ್ಕವನ್ನು…

Read More

ರಿಪ್ಪನ್ ಪೇಟೆ : ಕುಗ್ರಾಮದಲ್ಲೊಂದು ಖಾಸಗಿ ಶಾಲೆಯನ್ನು ಮೀರಿಸುವಂತಹ ಸುಸಜ್ಜಿತ ಸರ್ಕಾರಿ ಶಾಲೆ

ರಿಪ್ಪನ್ ಪೇಟೆ: ಸರ್ಕಾರಿ ಶಾಲೆ ಎಂದು ಮೂಗು ಮುರಿಯುವವರೆಲ್ಲ ರಿಪ್ಪನ್ ಪೇಟೆ ಸಮೀಪದ ಬಿದರಹಳ್ಳಿ ಶಾಲೆಗೆ ಒಮ್ಮೆ ಭೇಟಿ ನೀಡಬೇಕು. ಮೂಗಿನ ಮೇಲೆ ಬೆರಳಿಟ್ಟುಕೊಂಡು ಅಹುದಹುದು ಎನ್ನದಿದ್ದರೆ ಹೇಳಿ! ಮಲೆನಾಡ ಗಾಂಧಿ ಎಚ್‌.ಜಿ. ಗೋವಿಂದೇಗೌಡ ಹೆಸರಿನ ರಾಜ್ಯಮಟ್ಟದ ಅತ್ಯುತ್ತಮ ಸರ್ಕಾರಿ ಶಾಲೆ ಪ್ರಶಸ್ತಿ ಹಾಗೂ ಇನ್ನಿತರ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆಯುವ ಮೂಲಕ ಮಲೆನಾಡಿನ ಹಳ್ಳಿಯೊಂದು ರಾಜ್ಯದಲ್ಲಿ ಗುರುತಿಸಿಕೊಂಡಿದೆ. ಶಿಕ್ಷಕರ ನಿಸ್ವಾರ್ಥ ಸೇವೆ, ಶಿಕ್ಷಣ  ಪ್ರೇಮ, ಊರವರ ಸಹಾಯ-ಸಹಕಾರ ಸೇರಿದರೆ ಸರ್ಕಾರಿ ಶಾಲೆಯೊಂದು ಹೇಗೆ ಅಭಿವೃದ್ಧಿ ಪಥದಲ್ಲಿ…

Read More

ರಿಪ್ಪನ್ ಪೇಟೆ: ಮಳೆ ಬಂದಾಗ ಈಜುಕೊಳವಾಗುವ ಆಟೋ ಸ್ಟ್ಯಾಂಡ್, ಕಾಟಾಚಾರದ ಬ್ಯಾರಿಕೇಡ್ ನಿಂದ ಸುಗಮ ಸಂಚಾರಕ್ಕೆ ಅಡ್ಡಿ:

ರಿಪ್ಪನ್ ಪೇಟೆ :ಪಟ್ಟಣದ ತೀರ್ಥಹಳ್ಳಿ ಮುಖ್ಯ ರಸ್ತೆಯಲ್ಲಿರುವ ಆಟೋ ಸ್ಟ್ಯಾಂಡ್ ಬಳಿ ಮಳೆ ಬಂದರೆ ಸಾಕು ಮಳೆ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಈಜುಕೊಳದಂತಾಗಿ ರಸ್ತೆಯ ಮೇಲೆ ನೀರು ಹರಿಯುತ್ತದೆ ಇದರಿಂದ ಪಾದಚಾರಿಗಳಿಗೆ ಹಾಗು ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ ಇದರಿಂದ ಅನೇಕ ಸಣ್ಣಪುಟ್ಟ ಅಪಘಾತಗಳು ನಡೆದ ಉದಾಹರಣೆಗಳಿವೆ.  ಒಂದು ಕಡೆ ಮಳೆ ನೀರು ಹೋಗಲು ವ್ಯವಸ್ಥೆ ಇಲ್ಲದೆ ಈಜುಕೊಳವಾಗಿದ್ದರೆ ಇನ್ನೊಂದು ಕಡೆ ಕಾಟಚಾರಕ್ಕೆ ಹಾಕಿರುವ ಬ್ಯಾರಿಕೇಡ್, ತೀರ್ಥಹಳ್ಳಿ ರಸ್ತೆ ಯಲ್ಲಿ ಒಂದು ಕಡೆ…

Read More