ಹೆದ್ದಾರಿಪುರ: ಬಿಜೆಪಿ ಕಾರ್ಯಕರ್ತರ ಪಕ್ಷ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ : ಆರಗ ಜ್ಞಾನೇಂದ್ರ

ಹೆದ್ದಾರಿಪುರ : ಕರ್ನಾಟಕ ರಾಜ್ಯದ ಗೃಹ ಮಂತ್ರಿಯಾದ ಆರಗ ಜ್ಞಾನೇಂದ್ರ ರವರು ಬಿಜೆಪಿಯ ಬೂತ್ ಮಟ್ಟದ ಅಧ್ಯಕ್ಷರ ನಾಮಫಲಕ ಅನಾವರಣದ ನಿಮಿತ್ತ ಇಂದು ಹೆದ್ದಾರಿಪುರ ಬೂತ್ ನ ಅಧ್ಯಕ್ಷರಾದ ಸತೀಶ್ ಭಟ್ ರವರಿಗೆ ಅಭಿನಂದಿಸಿ ನಾಮಫಲಕ ಅನಾವರಣ ಮಾಡುವ ಮೂಲಕ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಾಮಪಲಕ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಿಜೆಪಿ ಯು “ಕಾರ್ಯಕರ್ತರ ಪಕ್ಷ” ಎನ್ನುವುದು ನಮ್ಮೆಲ್ಲರಿಗೂ ಗೌರವದ ಸಂಗತಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೊತೆಗೆ ಪಕ್ಷದ ಸಂಪರ್ಕವನ್ನು ಸಾಧಿಸುವ ಬೂತ್ ಕಾರ್ಯಕರ್ತರ ಪರಿಶ್ರಮಗಳೇ ಸಂಘಟನೆಯ ಆಧಾರ. ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಒಂದು ವೈಶಿಷ್ಟ್ಯಪೂರ್ಣವಾದ ಯೋಜನೆಯಂತೆ ಬೂತ್ ಅಧ್ಯಕ್ಷರ ನಾಯಕತ್ವದ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಈ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ,ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ,ಯಾವುದೇ ಮನೆತನ,ಜನಾಂಗದ ಪಕ್ಷವಲ್ಲ ಎಂದರು.
 ಸಾಮಾನ್ಯ ವ್ಯಕ್ತಿಯಾದ ನನ್ನನು ಗುರುತಿಸಿ ಉನ್ನತ ಹುದ್ದೆ ನೀಡಿರುವುದು ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಹೆದ್ದಾರಿಪುರ ಗ್ರಾಪಂ ಅಧ್ಯಕ್ಷರಾದ ವನಿತಾ ಗಂಗಾಧರ್,ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್,ಬಿಜೆಪಿ ಮುಖಂಡರಾದ ಕಗ್ಗಲಿ ಲಿಂಗಪ್ಪ,ಕಲ್ಲೂರು ನಾಗೇಂದ್ರಪ್ಪ,ಕಲ್ಲೂರು ಆದರ್ಶ,ನಾಗೇಂದ್ರ ಮತ್ತು  ಬೂತ್ ನ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು…..



ವರದಿ : ಚಿದಾನಂದ್ ರಿಪ್ಪನ್ ಪೇಟೆ

Leave a Reply

Your email address will not be published. Required fields are marked *