ತೀರ್ಥಹಳ್ಳಿ:: ಸಂಘ ಪರಿವಾರದಿಂದ ಯಶಸ್ವಿ ರಕ್ತದಾನ ಶಿಬಿರ

ತೀರ್ಥಹಳ್ಳಿ : ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಸಂಘ ಪರಿವಾರಗಳು ತೀರ್ಥಹಳ್ಳಿ ಇವರು ಆಯೋಜಿಸಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ತೀರ್ಥಹಳ್ಳಿಯ ರೋಟರಿ ರಕ್ತನಿಧಿಯಲ್ಲಿ ಇಂದು ನಡೆಯಿತು.

ಸಂಘ ಪರಿವಾರದ ಸದಸ್ಯರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ  ರೋಟರಿ ರಕ್ತನಿಧಿ ತೀರ್ಥಹಳ್ಳಿಯ ಟೆಕ್ನೀಶಿಯನ್ ಅರುಣ್ ಕೆರೋಡಿ  ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿ “ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದರೆ ಸೇವೆ, ಸಂಘದಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ದಿನವನ್ನು ಸೇವೆಗೆ ಮುಡಿಪಾಗಿಡುತ್ತಾರೆ ಅದರಲ್ಲಿ ಸ್ವಚ್ಚತಾ ಕಾರ್ಯಗಳು ಹಾಗೂ ರಕ್ತದಾನ ಕೂಡಾ ಸೇರಿಕೊಳ್ಳುತ್ತವೆ. ಕೊರೋನಾ ಅಟ್ಟಹಾಸ ಮುಗಿಲು ಮುಟ್ಟಿದ ಸಂದರ್ಭದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಮಾಡಿದ ಸೇವೆ ಶ್ಲಾಘನೀಯ, ಯುವಕರು ಹಣಗಳಿಕೆ ಹಾಗೂ ಕುಟುಂಬಕ್ಕಷ್ಟೇ ಸೀಮಿತವಾಗದೇ ಇಂತಹಾ ಸಮಾಜಮುಖಿ ವಿಚಾರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೇಶ ಹಾಗೂ ಸಮಾಜಕ್ಕೆ ಹಿತ” ಎಂದರು…
 


ರಕ್ತದಾನದ ಈ ದಿನದ  ಕಡೆಯ ದಾನಿಯಾಗಿದ್ದ ಶ್ರೀವತ್ಸ ಕುರುವಳ್ಳಿ ರವರು ಮಾತನಾಡಿ ” ಸಂಘ ನಮಗೆ ಸಮರ್ಪಣಾ ಭಾವವನ್ನು ಕಲಿಸುತ್ತದೆ, ರಕ್ತದಾನ ಮಾಡಿ ಸಂತಸಗೊಂಡಿದ್ದೇನೆ ಎಂದರು.



ಸುದ್ದಿ: ಪ್ರಶಾಂತ್ ಮೇಗರವಳ್ಳಿ

Leave a Reply

Your email address will not be published. Required fields are marked *