ರಿಪ್ಪನ್ ಪೇಟೆ: ಪ್ರಬುದ್ದ ಸ್ವಸಹಾಯ ಸಂಘದ ಮಹಿಳೆಯರಿಗೆ ಗಾದಿ ವಿನ್ಯಾಸ ತರಬೇತಿ ಕಾರ್ಯಗಾರ

ರಿಪ್ಪನ್‌ಪೇಟೆ: ನಬಾರ್ಡ್ ಮತ್ತು ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಶಿವಮೊಗ್ಗ ಇವರ ಸಂಯುಕ್ತ ಅಶ್ರಯದಲ್ಲಿ ಕೆಂಚನಾಲ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಬುದ್ಧ ಸ್ವಸಹಾಯ ಸಂಘದ ಮಹಿಳೆಯರಿಗಾಗಿ ಗಾದಿ ವಿನ್ಯಾಸ ಕುರಿತಾದ 15 ದಿನಗಳ ತರಬೇತಿ ಕಾರ್ಯಗಾರ ನಡೆಯಿತು. ಈ ತರಬೇತಿ ಕಾರ್ಯಗಾರದಲ್ಲಿ ಪ್ರಬುದ್ದ ಸ್ವಸಹಾಯ ಸಂಘದ 35 ಮಹಿಳೆಯರಿಗೆ 15 ದಿನಗಳ ಕಾಲ ಗಾದಿ ವಿನ್ಯಾಸದ ಕುರಿತು ತರಬೇತಿ ನೀಡಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಶಿವಮೊಗ್ಗ ನಬಾರ್ಡ್ ಮುಖ್ಯಸ್ಥರಾದ ಬಿ ರವಿ ಯವರು ಗ್ರಾಮೀಣ ಪ್ರದೇಶದ…

Read More

ರಿಪ್ಪನ್ ಪೇಟೆ: ಹೊಸನಗರ ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹಿಸಿ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

ರಿಪ್ಪನ್‌ಪೇಟೆ: ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಪುನರ್ ನಾಮಕರಣಗೊಳಿಸುವಂತೆ ಆಗ್ರಹಿಸಿ 30 ಗ್ರಾಮಗಳಲ್ಲಿ ಸಾರ್ವಜನಿಕ ಸಹಿ ಸಂಗ್ರಹಣ ಅಭಿಯಾನಕ್ಕೆ ರಿಪ್ಪನ್‌ಪೇಟೆಯಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ ಮತ್ತು ರಾಜ್ಯ ಜೆಡಿಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಇಂದು ಸಾರ್ವಜನಿಕರ ಸಹಿ ಸಂಗ್ರಹಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಹೊಸನಗರ ವಿಧಾನಸಭಾ ಕ್ಷೇತ್ರದ ಮರು ಸ್ಥಾಪನೆಯಿಂದ ತಾಲೂಕಿನ ಅಭಿವೃದ್ದಿ ಮಾಡಲು ಸಾಧ್ಯವಾಗುತ್ತದೆ.ಒಂದು ತಾಲೂಕ್ಕಿಗೆ ಇಬ್ಬಿಬ್ಬರು ಶಾಸಕರಾಗಿ ಅಭಿವೃದ್ಧಿ ಕಾರ್ಯಗಳು ಕನಸಿನ ಮಾತಾಗಿದೆ.ನಮ್ಮ ತಾಲೂಕ್ಕಿಗೆ ವಿಧಾನಸಭಾ ಕ್ಷೇತ್ರ ಕೇಳುವುದು ನಮ್ಮ ಹಕ್ಕು…

Read More

ರಿಪ್ಪನ್ ಪೇಟೆ : ಕಳಪೆ ಚರಂಡಿ ಕಾಮಗಾರಿ,ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಬರುವೆ ಶಾಲೆಯ ಮುಂಭಾಗದ ರಸ್ತೆ

ರಿಪ್ಪನ್ ಪೇಟೆ: ಇಲ್ಲಿನ ಚೌಡೇಶ್ವರಿ ಬೀದಿಯ ಬರುವೆ ಶಾಲೆಯ ಮುಂಭಾಗ 2018 ರಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ನಿರ್ಮಿಸಿದ್ದ ಪ್ರವಾಹ ನಿಯಂತ್ರಣ ಕಾಲುವೆಯ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ನಿರ್ಮಿಸಿದ್ದ ಅಷ್ಟು ಚರಂಡಿಯು ಕುಸಿದು ಮುಚ್ಚಿ ಹೋಗಿದ್ದು ಈ ರಸ್ತೆಯು ಅಪಾಯಕ್ಕೆ ಆಹ್ವಾನ ಕೊಡುತ್ತಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಅನುದಾನದದಡಿ  ಲಕ್ಷಾಂತರ ವೆಚ್ಚದಲ್ಲಿ ಕೈಗೊಂಡ ಪ್ರವಾಹ ನಿಯಂತ್ರಣ ಚರಂಡಿ ನಿರ್ಮಾಣ ಕಾಮಗಾರಿ ಕಳಪೆಯಾಗಿ ಮುಚ್ಚಿ ಹೋಗಿದೆ.ಈ…

Read More

ರಿಪ್ಪನ್ ಪೇಟೆ : 54 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಕೊರೋನಾ ಲಸಿಕಾ ಶಿಬಿರ

ರಿಪ್ಪನ್ ಪೇಟೆ : ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿ ರಿಪ್ಪನ್ ಪೇಟೆ ವತಿಯಿಂದ  54 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಕೊರೋನಾ ಲಸಿಕಾ ಶಿಬಿರವನ್ನು  ನಡೆಸಲಾಯಿತು. ಇಂದು ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಭಾಭವನದ ಆವರಣ ದಲ್ಲಿ 18 ವರ್ಷ ಮೇಲ್ಪಟ್ಟವರಿಗೆ 250 ಲಸಿಕೆ  ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಶ್ರೀ ಸುರೇಶ್, ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ದ ಆರೋಗ್ಯಾಧಿಕಾರಿ ಶ್ರೀ ಅನಿಲ್ ಕುಮಾರ್, ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ…

Read More

ಮೀಸಲಾತಿ ಹೆಸರಿನಲ್ಲಿ ಸಮಾಜದಲ್ಲಿ ಒಡಕು ಹುಟ್ಟು ಹಾಕುವ ಪ್ರಯತ್ನ ಸಹಿಸುವುದಿಲ್ಲ : ವೀರೇಶ್ ಆಲುವಳ್ಳಿ

ರಿಪ್ಪನ್‌ಪೇಟೆ: ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಪಂಚಮಸಾಲಿ ಲಿಂಗಾಯಿತ ಜಾತಿಗೆ 2(ಎ) ಮೀಸಲಾತಿ ನೀಡುವಂತೆ ಒತ್ತಾಯಿಸಿ ಹೊಸನಗರ ತಾಲೂಕಿನ ವ್ಯಾಪ್ತಿಯಲ್ಲಿ ಜಾಗೃತ ಸಭೆ ನಡೆಸಿ ತಾಲೂಕಿನ ವ್ಯಾಪ್ತಿಯ ವೀರಶೈವ ಸಮಾಜದಲ್ಲಿ ಒಡಕು ಹುಟ್ಟುಹಾಕುವ ಪ್ರಯತ್ನ ನಡೆಸುತ್ತಿದ್ದಾರೆಂದು ಹೊಸನಗರ ತಾಲ್ಲೂಕು ವೀರಶೈವ ಜಾಗೃತಿ ವೇದಿಕೆಯ ಮುಖಂಡ,ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಆರೋಪಿಸಿದ್ದಾರೆ.  ಪಟ್ಟಣದ ಗ್ರಾಪಂ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಮಾಜದ ಎಲ್ಲಾ ಬಾಂಧವರು ಹೊಂದಿಕೊಂಡು ಹೋಗಬೇಕಾಗಿದೆ.ವೀರಶೈವರು ಹಾಗೂ…

Read More

ರಿಪ್ಪನ್ ಪೇಟೆ :: ದೂನ ಗ್ರಾಮದ ನಾರಾಯಣರಾವ್ ಇನ್ನಿಲ್ಲ!

ರಿಪ್ಪನ್ ಪೇಟೆ: ಇಲ್ಲಿನ ಸಮೀಪದ ಅರಸಾಳು ಗ್ರಾಮ ಪಂಚಾಯಿತಿಯ ದೂನ ಗ್ರಾಮದ ಹಿರಿಯರಾದ ನಾರಾಯಣರಾವ್ (76) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತಿದ್ದ ಇವರು ಮಧ್ಯರಾತ್ರಿ ಸುಮಾರು 12.30 ಕ್ಕೆ  ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಮೂವರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದು, ಇವರ ಅಂತ್ಯಕ್ರಿಯೆ ಶುಕ್ರವಾರ ಸ್ವಗ್ರಾಮ ದೂನದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

Read More

ಬಿಜೆಪಿ ಕಾರ್ಯಕರ್ತರ ಪಕ್ಷ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ : ಶಾಸಕ ಹರತಾಳು ಹಾಲಪ್ಪ

ರಿಪ್ಪನ್ ಪೇಟೆ : ಬಿಜೆಪಿ ಪಕ್ಷ ಸದೃಢವಾಗಿದ್ದು ಅಭಿವೃದ್ದಿ ಕಾರ್ಯದಲ್ಲಿ ಈ ಹಿಂದಿನ ಸರ್ಕಾರಗಳು ಮಾಡಲಾಗದಷ್ಟು ಅಭಿವೃದ್ದಿಯನ್ನು ಕೇವಲ ಬಿಜೆಪಿ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಮಾಡಿದೆ. ಎಲ್ಲ ಸಮುದಾಯದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು. ಬಿಜೆಪಿಯ ಬೂತ್ ಮಟ್ಟದ ಅಧ್ಯಕ್ಷರ ನಾಮಫಲಕ ಅನಾವರಣದ ನಿಮಿತ್ತ ಇಂದು ರಿಪ್ಪನ್ ಪೇಟೆ ಹೋಬಳಿಯ ಬೂತ್ ನ ಅಧ್ಯಕ್ಷರುಗಳಿಗೆ ಅಭಿನಂದಿಸಿ ನಾಮಫಲಕ ಅನಾವರಣ ಮಾಡಿದ ಅವರು ಬಿಜೆಪಿಯು “ಕಾರ್ಯಕರ್ತರ ಪಕ್ಷ” ಎನ್ನುವುದು ನಮ್ಮೆಲ್ಲರಿಗೂ ಗೌರವದ…

Read More

ರಿಪ್ಪನ್ ಪೇಟೆ : ನಿಂತಿದ್ದ ಟಿಪ್ಪರ್ ಗೆ ಆಟೋ ಡಿಕ್ಕಿ ,ಚಾಲಕನ ಸ್ಥಿತಿ ಗಂಭೀರ

ರಿಪ್ಪನ್ ಪೇಟೆ : ಪಟ್ಟಣದ ಹೊಸನಗರ ರಸ್ತೆಯ ಹಳೂರಿನಲ್ಲಿ  ನಿಲ್ಲಿಸಿದ್ದ ಟಿಪ್ಪರ್ ಗೆ ಹಿಂಬದಿಯಿಂದ ಬಂದ  ಪ್ಯಾಸೇಂಜರ್ ಆಟೋ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ರಿಪ್ಪನ್ ಪೇಟೆ ವಾಸಿ ಕಿರಣ್  ತೀವ್ರವಾಗಿ ಗಾಯಗೊಂಡು ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಹೊಸನಗರ-ಶಿವಮೊಗ್ಗ ಮುಖ್ಯ ರಸ್ತೆಯಲ್ಲಿ ಗವಟೂರು ಹೊಳೆ ಸಮೀಪ ಮಧ್ಯ ರಸ್ತೆಯಲ್ಲಿ ಯಾವುದೇ ಇಂಡಿಕೇಟರ್ ಹಾಕದೇ ನಿಲ್ಲಿಸಿದ್ದ ಟಿಪ್ಪರ್ ಗೆ ರಿಪ್ಪನ್ ಪೇಟೆ ಕಡೆಯಿಂದ ಜೇನಿ ಕಡೆಗೆ ಹೋಗುತ್ತಿದ್ದ ಪ್ಯಾಸೇಂಜರ್ ಆಟೋ ಹಿಂಬದಿಯಿಂದ ಡಿಕ್ಕಿ ಹೊಡೆದ…

Read More

ಜಾನಪದ ಸಮೂಹ ಗಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ :

ಹೊಸನಗರ : ಇತ್ತೀಚೆಗೆ ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಾಂಸ್ಕ್ರತಿಕ ಮೇಳದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಶಿಕ್ಷಕರ ಸಮೂಹವು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಇದೇ ತಿಂಗಳು 15,16,17 ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ 75ನೇ ಆಜಾದ್ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ  ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಸಾಧನೆಗೈದ ತಾಲೂಕಿನ ಪ್ರತಿಭಾವಂತ ಶಿಕ್ಷಕರುಗಳಾದ ತೀರ್ಥಕುಮಾರ್ ,ದುಗ್ಗಪ್ಪ,ಮೋಹನ್ ಕುಮಾರ್ ಸಿ,ಪ್ರಕಾಶ್,ಮೋಹನ್ ಹೆಚ್ ಆರ್ ,ತಿಮ್ಮಪ್ಪ ಕಣಬಂದೂರು ,ದೊಡ್ಡಪ್ಪ,ಸೈಯದ್ ಇರ್ಫ಼ಾನ್ ,ಮನೋಹರ…

Read More

ರಿಪ್ಪನ್ ಪೇಟೆ: ಕಾರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ :ಬೈಕ್ ಸವಾರನ ಸ್ಥಿತಿ ಗಂಭೀರ

ರಿಪ್ಪನ್ ಪೇಟೆ: ಪಟ್ಟಣದ ತೀರ್ಥಹಳ್ಳಿ ರಸ್ತೆಯ ಜ್ಯೋತಿ ಮಾಂಗಲ್ಯ ಮಂಟಪ್ಪದ ಬಳಿಯಲ್ಲಿ ಬೈಕ್ ಹಾಗೂ ಕಾರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರನಿಗೆ ತೀವ್ರವಾದ ಪೆಟ್ಟಾಗಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ರಿಪ್ಪನ್ ಪೇಟೆ ಮಾರ್ಗದಿಂದ ಬರುತ್ತಿದ್ದ ಮಾರುತಿ ಆಲ್ಟೋ ಕಾರ್ ತೀರ್ಥಹಳ್ಳಿ ಮಾರ್ಗದಿಂದ ಬರುತ್ತಿದ್ದ ಸ್ಕೂಟಿ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಜ್ಜುಗುಜ್ಜಾಗಿದ್ದು ಸ್ಕೂಟಿ ಸವಾರ ಮುಸ್ತಾಫಾ ಗೆ ತೀವ್ರತರನಾದ…

Read More