Headlines

ರಿಪ್ಪನ್ ಪೇಟೆ : ನಿಂತಿದ್ದ ಟಿಪ್ಪರ್ ಗೆ ಆಟೋ ಡಿಕ್ಕಿ ,ಚಾಲಕನ ಸ್ಥಿತಿ ಗಂಭೀರ

ರಿಪ್ಪನ್ ಪೇಟೆ : ಪಟ್ಟಣದ ಹೊಸನಗರ ರಸ್ತೆಯ ಹಳೂರಿನಲ್ಲಿ  ನಿಲ್ಲಿಸಿದ್ದ ಟಿಪ್ಪರ್ ಗೆ ಹಿಂಬದಿಯಿಂದ ಬಂದ  ಪ್ಯಾಸೇಂಜರ್ ಆಟೋ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ರಿಪ್ಪನ್ ಪೇಟೆ ವಾಸಿ ಕಿರಣ್  ತೀವ್ರವಾಗಿ ಗಾಯಗೊಂಡು ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ.

ಹೊಸನಗರ-ಶಿವಮೊಗ್ಗ ಮುಖ್ಯ ರಸ್ತೆಯಲ್ಲಿ ಗವಟೂರು ಹೊಳೆ ಸಮೀಪ ಮಧ್ಯ ರಸ್ತೆಯಲ್ಲಿ ಯಾವುದೇ ಇಂಡಿಕೇಟರ್ ಹಾಕದೇ ನಿಲ್ಲಿಸಿದ್ದ ಟಿಪ್ಪರ್ ಗೆ ರಿಪ್ಪನ್ ಪೇಟೆ ಕಡೆಯಿಂದ ಜೇನಿ ಕಡೆಗೆ ಹೋಗುತ್ತಿದ್ದ ಪ್ಯಾಸೇಂಜರ್ ಆಟೋ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಕಿರಣ್ ಗೆ ತಲೆಗೆ ಗಂಭೀರ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

   {ಯಾವುದೇ ಇಂಡಿಕೇಟರ್ ಹಾಗೂ ಪ್ರತಿಫಲಕವಿಲ್ಲದ ಟಿಪ್ಪರ್}




ನಡು ರಸ್ತೆಯಲ್ಲಿ ಯಾವುದೇ ಇಂಡಿಕೇಟರ್ ಬಳಸದೇ ಹಾಗೂ ಹಿಂಬದಿಯ ಗಾಡಿಗೆ ಸೂಚಿಸುವ ಪ್ರತಿಫಲಕವಿಲ್ಲದೇ ನಿಲ್ಲಿಸಿದ್ದರಿಂದ ಆಟೋ ಚಾಲಕ ಟಿಪ್ಪರ್ ಗಾಡಿ ನಿಂತಿರುವುದನ್ನು ಗ್ರಹಿಸಲಾಗದೇ ಹಿಂಬದಿಯಿಂದ ರಭಸದಿಂದ ಗುದ್ದಿದ ಪರಿಣಾಮ ಆಟೋ ಚಾಲಕನ ತಲೆಗೆ ತೀವ್ರವಾದ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ

ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



About The Author

Leave a Reply

Your email address will not be published. Required fields are marked *