Headlines

ತೀರ್ಥಹಳ್ಳಿ :ಸರ್ಕಾರದ ಮಾರ್ಗಸೂಚಿ ಪಾಲಿಸಿ ಈ ಬಾರಿಯ ಗಣೇಶೋತ್ಸವವನ್ನು ಆಚರಿಸಿ : ತಹಸೀಲ್ದಾರ್ ಡಾ. ಶ್ರೀಪಾದ್

ತೀರ್ಥಹಳ್ಳಿ : ಕೊರೊನಾ ಸೋಂಕಿನ ಸಂದರ್ಭದಲ್ಲಿ 
ಗಣೇಶೋತ್ಸವ ಆಚರಣೆ ಅತ್ಯಂತ ಸರಳವಾಗಿ ಶ್ರದ್ಧಾ ಭಕ್ತಿ ಭಾವದಿಂದ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ಸರ್ಕಾರದ ಎಲ್ಲಾ ಮಾನದಂಡ
ಮತ್ತು.ಮಾರ್ಗಸೂಚಿ ಪಾಲಿಸಿ ಈ ಬಾರಿಯ
ಗಣೇಶೋತ್ಸವವನ್ನು ಆಚರಿಸಿ ಎಂದು ತೀರ್ಥಹಳ್ಳಿ 
ತಹಶೀಲ್ದಾರ್‌ ಡಾ. ಶ್ರೀಪಾದರವರು ಗಣೇಶೋತ್ಸವ ಆಚರಣೆ ಮಾಡುವ ಸಮಿತಿಯವರಿಗೆ ಸೂಚನೆ ನೀಡಿದರು.

ಇಂದು ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪೋಲೀಸ್ ಇಲಾಖೆ ವತಿಯಿಂದ
ಕರೆಯಲಾಗಿದ್ದ ಗಣೇಶೋತ್ಸವ ಆಚರಣೆಯ ಕುರಿತಾದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು
ತಾಲ್ಲೂಕಿನಲ್ಲಿ ಕೊರೊನ ಸಾಂಕ್ರಾಮಿಕ ರೋಗದ ಹೆಚ್ಚಳ ಹಿನ್ನೆಲೆಯಲ್ಲಿ ಈ ಬಾರಿ ಗಣೇಶ ಉತ್ಸವವನ್ನು
ಅತ್ಯಂತ ಎಚ್ಚರಿಕೆಯಿಂದ ಆಚರಿಸುವ ಅವಶ್ಯಕತೆಯಿದ್ದು ಗಣಪತಿ ಪ್ರತಿಷ್ಠಾಪಿಸುವ
ಜಾಗಗಳಲ್ಲಿ ಭಕ್ತಾದಿಗಳಿಗೆ ವಿಶೇಷವಾದ ವ್ಯವಸ್ಥೆಗಳನ್ನು ಮಾಡಬೇಕು ಹೆಚ್ಚು ಜನ ಸೇರದಂತೆ ನಿಗಾ ವಹಿಸಬೇಕು ಕೊರೋನ ಮುಂಜಾಗೃತ ಕ್ರಮ ವಹಿಸಬೇಕು ಯಾವುದೇ ಮನರಂಜನಾ
ಮೆರವಣಿಗೆಗಳು ಕಾರ್ಯಕ್ರಮಗಳು ಹಮ್ಮಿಕೊಳ್ಳಬಾರದು ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಸಬಾರದು ಬದಲಾಗಿ
ಸ್ಥಳೀಯವಾಗಿ ರೈತರು ಬೆಳೆದಂಥ ಫಲವಸ್ತುಗಳನ್ನು ಪ್ರಸಾದ ರೂಪದಲ್ಲಿ ಹಂಚುವುದು ಸೂಕ್ತ ಹಾಗೆಯೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ ಶ್ರದ್ಧಾ ಭಕ್ತಿಯಿಂದ ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಸರಳವಾಗಿ
ಗಣೇಶೋತ್ಸವ ಆಚರಿಸುವಂತೆ ತಾಲ್ಲೂಕು
ದಂಡಾಧಿಕಾರಿಗಳಾದ ಶ್ರೀಪಾದರವರು
ತಿಳಿಸಿದರು.

ಡಿಜೆ ಮೈಕ್ ಬಳಸುವಂತಿಲ್ಲ ಮೆರವಣಿಗೆ ಮಾಡುವಂತಿಲ್ಲ, ಪೊಲೀಸ್ ಇಲಾಖೆ ಅನುಮತಿ ಕಡ್ಡಾಯ-ಡಿವೈಎಸ್ಪಿ ಶಾಂತವೀರ

ಧಾರ್ಮಿಕ ಆಚರಣೆ ದೃಷ್ಟಿಯಿಂದ ಸರ್ಕಾರ ವಿಶೇಷ ತಜ್ಞರ ಶಿಫಾರಸನ್ನೊಳಗೊಂಡ ಸುಮಾರು ಹದಿನೇಳು ಮಾರ್ಗಸೂಚಿಗಳನ್ನು ಪ್ರಕಟಮಾಡಿ 5 ದಿನಗಳ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದ್ದು ಇದಕ್ಕೆ
ಗಣಪತಿ ಪ್ರತಿಷ್ಠಾಪಿಸುವ ಎಲ್ಲಾ ಸಂಘ ಸಂಸ್ಥೆಯವರು ಸಹಕಾರ ಅಗತ್ಯವಾಗಿದೆ ಕೊರೊನ ಸಾಂಕ್ರಾಮಿಕ ರೋಗ ಎಲ್ಲೆಡೆ ವ್ಯಾಪಿಸುತ್ತಿದ್ದು ಈ ನಿಟ್ಟಿನಲ್ಲಿ ಸರ್ಕಾರ
ಹೊರಡಿಸಿರುವ ಎಲ್ಲ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಡಿವೈಎಸ್ಪಿ ಶಾಂತವೀರ ರವರು ಸೂಚಿಸಿದರು. 

ಇನ್ನು ಯಾರೂ ಕೂಡ ಡಿಜೆ ಮೈಕ್ ಬಳಸಬಾರದು ಗಣೇಶ ಮೂರ್ತಿ ಪ್ರತಿಷ್ಠಾಪಿಸುವಾಗ ಮತ್ತು
ವಿಸರ್ಜಿಸುವಾಗ ಮೆರವಣಿಗೆ ಮಾಡುವಂತಿಲ್ಲ.
ಗುಂಪು ಗುಂಪಾಗಿ ಸೇರುವಂತಿಲ್ಲ ಸರ್ಕಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಸರಕಾರದ ನಿಯಮಗಳನ್ನು.ಉಲ್ಲಂಘಿಸಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾಗುತ್ತದೆ.

ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ
ಎಲ್ಲರೂ ಕೂಡ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಪರವಾನಿಗೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಶಾಂತಿ
ಸೌಹಾರ್ದತೆಯಿಂದ ಗಣೇಶ ಹಬ್ಬದ ಆಚರಣೆಯನ್ನು ಮಾಡುವಂತೆ ತಿಳಿಸಿದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಕುರಿಯಾಕೋಸ್,ಪೋಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಪ್ರವೀಣ್ ನೀಲಮ್ಮನವರ್,ಸಂತೋಷ್ ಕುಮಾರ್ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು,ಗಣೇಶ ಸಂಸ್ಥೆಯ ಎಲ್ಲ ಪದಾಧಿಕಾರಿಗಳು,ತಾಲ್ಲೂಕಿನ ಹಿರಿಯನಾಗರಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *