ರಿಪ್ಪನ್ ಪೇಟೆ: ಪ್ರಬುದ್ದ ಸ್ವಸಹಾಯ ಸಂಘದ ಮಹಿಳೆಯರಿಗೆ ಗಾದಿ ವಿನ್ಯಾಸ ತರಬೇತಿ ಕಾರ್ಯಗಾರ

ರಿಪ್ಪನ್‌ಪೇಟೆ: ನಬಾರ್ಡ್ ಮತ್ತು ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಶಿವಮೊಗ್ಗ ಇವರ ಸಂಯುಕ್ತ ಅಶ್ರಯದಲ್ಲಿ ಕೆಂಚನಾಲ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಬುದ್ಧ ಸ್ವಸಹಾಯ ಸಂಘದ ಮಹಿಳೆಯರಿಗಾಗಿ ಗಾದಿ ವಿನ್ಯಾಸ ಕುರಿತಾದ 15 ದಿನಗಳ ತರಬೇತಿ ಕಾರ್ಯಗಾರ ನಡೆಯಿತು.

ಈ ತರಬೇತಿ ಕಾರ್ಯಗಾರದಲ್ಲಿ ಪ್ರಬುದ್ದ ಸ್ವಸಹಾಯ ಸಂಘದ 35 ಮಹಿಳೆಯರಿಗೆ 15 ದಿನಗಳ ಕಾಲ ಗಾದಿ ವಿನ್ಯಾಸದ ಕುರಿತು ತರಬೇತಿ ನೀಡಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಶಿವಮೊಗ್ಗ ನಬಾರ್ಡ್ ಮುಖ್ಯಸ್ಥರಾದ ಬಿ ರವಿ ಯವರು ಗ್ರಾಮೀಣ ಪ್ರದೇಶದ ವಿದ್ಯಾವಂತ ಮಹಿಳೆಯರು ಸ್ವಾವಲಂಬಿ ಬದುಕಿಗೆ ನಮ್ಮ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು.

ಈ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೆಂಚನಾಲ ಗ್ರಾಮಪಂಚಾಯ್ತಿ ಅಧ್ಯಕ್ಷ ಉಬೇದುಲ್ಲಾ ಷರೀಫ್ ವಹಿಸಿ ಮಾತನಾಡಿದ ಅವರು  ಗ್ರಾಮೀಣ ಪ್ರದೇಶದ ವಿದ್ಯಾವಂತ ನಿರುದ್ಯೋಗಿ ಮಹಿಳೆಯರು ಸ್ವಾವಲಂಬಿ ಬದುಕಿಗಾಗಿ ಬ್ಯಾಂಕ್ ಆರ್ಥಿಕ ನೆರವು ನೀಡುವ ಮೂಲಕ ಕುಶಲ ಕೌಶಲ್ಯಾಭಿವೃದ್ದಿಗೆ ಸಹಕರಿಸುವಂತೆ ಕರೆ ನೀಡಿದರು.

::ಕಾರ್ಯಗಾರದಲ್ಲಿ ತಯಾರಿಸಿದ್ದ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.::



ಈ ಸಂದರ್ಭದಲ್ಲಿ ಕೆಂಚನಾಲ ಗ್ರಾಪಂ ಉಪಾಧ್ಯಕ್ಷರಾದ ಪುಟ್ಟಮ್ಮ,ಸಂಪನ್ಮೂಲ ವ್ಯಕ್ತಿಯಾದ ಎಂ ಪಿ ರೋಹಿಣಿ ಗ್ರಾಪಂ ಸದಸ್ಯರುಗಳಾದ ಮಹಮ್ಮದ್ ಷರೀಪ್ ಸಾಬ್,ಲಕ್ಷ್ಮಮ್ಮ,ಕೃಷ್ಣೋಜಿರಾವ್,ಹೂವಮ್ಮ ಹಾಗೂ ಗ್ರಾಪಂ ಕಾರ್ಯದರ್ಶಿಗಳಾದ ಶಿವಪ್ರಸಾದ್ ಎನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *