ರಿಪ್ಪನ್ ಪೇಟೆ : ಪಟ್ಟಣದ ಗಾಂಧಿನಗರ ನಿವಾಸಿ 37 ವರ್ಷದ ಜಾಫರ್ ಎಂಬ ವ್ಯಕ್ತಿಯು ಆಗಸ್ಟ್ 22 ರಿಂದ ಕಾಣೆಯಾಗಿದ್ದಾರೆ ಎಂದು ಆತನ ಪತ್ನಿ ರಿಪ್ಪನ್ ಪೇಟೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಟ್ಟಣದ ಗಾಂಧಿನಗರ ನಿವಾಸಿ ಮಹಮ್ಮದ್ ಜಾಫರ್ ಹೊಸನಗರ ರಸ್ತೆಯಲ್ಲಿ ಗ್ಯಾರೇಜ್ ಹೊಂದಿದ್ದು ಹದಿಮೂರು ವರ್ಷದ ಹಿಂದೆ ಗಾಂಧಿನಗರ ವಾಸಿ ನಜ್ಮಾ ಎಂಬಾಕೆಯನ್ನು ಮದುವೆಯಾಗಿದ್ದು ಈ ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ.ಆಗಸ್ಟ್ 22ರ ಬೆಳಗ್ಗೆ ಎಂದಿನಂತೆ ಮೆಕ್ಯಾನಿಕ್ ಕೆಲಸಕ್ಕೆ ಹೋದ ಜಾಫರ್ ಹಿಂದಿರುಗಿ ವಾಪಾಸ್ ಮನೆಗೆ ಬಂದಿರುವುದಿಲ್ಲ, ಎರಡು ದಿನ ನೆಂಟರಿಷ್ಟರ ಮನೆಯಲ್ಲಿ ಹುಡುಕಾಟ ನಡೆಸಿ ನಂತರ ರಿಪ್ಪನ್ ಪೇಟೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.
ಜಾಫರ್ ಕಾಣೆಯಾದ ದಿನದಂದೆ ರಿಪ್ಪನ್ ಪೇಟೆ ಚೌಡೇಶ್ವರಿ ಬೀದಿಯ ನಿವಾಸಿ ಸಾಜಿದ ಎಂಬ ಮಹಿಳೆಯು ಕೂಡ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ನಜ್ಮಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪರಸ್ತ್ರೀಯೊಂದಿಗೆ ಪರಾರಿಯ ಶಂಕೆ !! :
ಮೂಲತಃ ಕೆಂಚನಾಲ ನಿವಾಸಿಯಾದ ಜಾಫರ್ 13 ವರ್ಷಗಳ ಹಿಂದೆ ಪಟ್ಟಣದ ಗಾಂಧಿನಗರ ವಾಸಿ ನಜ್ಮಾರವರನ್ನು ವಿವಾಹವಾಗಿ ರಿಪ್ಪನ್ ಪೇಟೆಯಲ್ಲೇ ವಾಸವಿರುತ್ತಾರೆ.
ಈಗ ಪರಸ್ತ್ರಿ ಮೋಹಕ್ಕೆ ಬಿದ್ದು ನನಗೆ ಮತ್ತು ನನ್ನ ಮೂವರು ಮಕ್ಕಳಿಗೆ ಮೋಸ ಮಾಡಿ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಜಾಫರ್ ಪತ್ನಿ ನಜ್ಮಾ ಆರೋಪಿಸುತ್ತಿದ್ದಾರೆ.
ಸಾಜಿದ ಎಂಬ ಮಹಿಳೆಯು ಕೂಡ ಪತಿಯಿಂದ ದೂರ ಉಳಿದು ಒಂಟಿಯಾಗಿ ಜೀವನ ಸಾಗಿಸುತಿದ್ದರು, ಜಾಫರ್ ಇವರ ಮೋಹದ ಬಲೆಗೆ ಬಿದ್ದು ವಿಚ್ಚೇದನ ಕೂಡ ಪಡೆಯದೇ ಪತ್ನಿ ಹಾಗು ಮುದ್ದಾದ ಮೂರು ಮಕ್ಕಳಿಗೆ ದ್ರೋಹ ಮಾಡಿ ಪರಾರಿಯಾಗಿದ್ದಾರೆ ಎಂದು ನಜ್ಮಾ ಸಂಬಂದಿಕರು ಆರೋಪಿಸಿದ್ದಾರೆ.
ನನ್ನ ಪತಿಯನ್ನು ದಯವಿಟ್ಟು ಹುಡುಕಿ ಕೊಡಿ ಎಂದು ನಜ್ಮಾ ಅಂಗಲಾಚುತ್ತಿರುವುದು ಎಂತಹ ಕಲ್ಲು ಹೃದಯವನ್ನು ಕರಗಿಸುವಂತಹ ಸನ್ನಿವೇಶವಾಗಿದೆ.ಪತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆಯವರು ವಿಳಂಬ ಮಾಡಿದಲ್ಲಿ ಮಹಿಳಾ ಆಯೋಗದ ಮೊರೆ ಹೋಗುವುದಾಗಿಯು ಈ ಸಂಧರ್ಭದಲ್ಲಿ ತಿಳಿಸಿದ್ದಾರೆ.
ಯಾವುದೇ ವಿಚಾರವನ್ನು ಅರಿಯದ ಮುದ್ದಾದ ಮೂರು ಕಂದಮ್ಮಗಳು ನಮ್ಮ ಅಪ್ಪ ಮನೆಗೆ ಬಾರದೇ ತುಂಬಾ ದಿನವಾಯಿತು ನೀವಾದರು ಕರೆದುಕೊಂಡು ಬನ್ನಿ ಪ್ಲೀಸ್ ಎಂದು ಹೇಳುವಾಗ ಎದೆ ಸೀಳಿದಂತ ಭಾಸವಾಗುತ್ತದೆ.
ಸಂಬಂಧಪಟ್ಟ ಪೊಲೀಸ್ ಇಲಾಖೆ ಆದಷ್ಟು ಬೇಗ ಜಾಫರ್ ನನ್ನು ಪತ್ತೆ ಹಚ್ಚಿ ಅನ್ಯಾಯಕ್ಕೆ ಒಳಗಾಗಿರುವ ಮಹಿಳೆಗೆ ಸೂಕ್ತವಾದ ನ್ಯಾಯ ಒದಗಿಸಿಕೊಡಬೇಕಾಗಿದೆ.
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..
ನಿರಂತರ ಸ್ಥಳೀಯ ಸುದ್ದಿಗಳನ್ನು ಫೇಸ್‌ಬುಕ್ ನಲ್ಲಿ ಪಡೆಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ