ರಿಪ್ಪನ್ ಪೇಟೆ: ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ಧ ಕೆಂಚನಾಲ ಮಾರಿಕಾಂಬಾ ದೇವಾಲಯವು ಇಂದು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಲೋಕಾರ್ಪಣೆಗೊಂಡಿತು.
ಕೆಂಚನಾಲ ಮಾರಿಕಾಂಬಾ ದೇವಾಲಯದ ಲೋಕಾರ್ಪಣ ಕಾರ್ಯಕ್ರಮವು ಅತ್ಯಂತ ಸರಳ ಹಾಗೂ ಸಾಂಕೇತಿಕವಾಗಿ ನಡೆಯಿತು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮವು ಕೆಂಜಿಗಾಪುರ ಶ್ರೀಧರ ಭಟ್ ನೇತ್ರತ್ವದಲ್ಲಿ ಜರುಗಿತು.ಹಾಗೂ ಕೊರೊನಾ ರೋಗದ ಭೀತಿಯಿಂದ ಇಲ್ಲಿಗೆ ಆಗಮಿಸುವ ಭಕ್ತಾದಿಗಳ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿತ್ತು.
ರಾಜ್ಯ ಸರ್ಕಾರದ ಆದೇಶದಂತೆ ಕೊರೋನ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿತ್ತು. ತಾಲೂಕು ಆಡಳಿತ, ಗ್ರಾಮಾಡಳಿತ, ಕಂದಾಯ ಇಲಾಖೆ ಹಾಗೂ ಮುಜರಾಯಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಪೂರ್ವನಿಯೋಜಿತ ಮುನ್ನೆಚ್ಚರಿಕೆಯಿಂದ ಕೊರೋನಾ ರೋಗವನ್ನು ನಿಯಂತ್ರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು, ಪ್ರತಿಯೊಬ್ಬರಿಗೂ ಮಾಸ್ಕ್ ಬಳಸಿ ಸ್ಯಾನಿಟೈಸರ್ ಬಳಸುವುದರೊಂದಿಗೆ ಸಾಮಾಜಿಕ ಅಂತರವನ್ನು ಕಾಪಾಡಲು ಭಕ್ತಾದಿಗಳಿಗೆ ಅರಿವು ಮೂಡಿಸುವುದರೊಂದಿಗೆ ಕಟ್ಟುನಿಟ್ಟಿನ ಕ್ರಮವನ್ನು ಪಾಲಿಸಲಾಗಿತ್ತು.
ರಿಪ್ಪನ್ ಪೇಟೆ ಪೊಲೀಸ್ ಇಲಾಖೆಯು ದೇವಸ್ಥಾನಕ್ಕೆ ಆಗಮಿಸುವ ಮುಖ್ಯ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ದೇವಾಲಯದ ಆವರಣ ಪ್ರವೇಶಿಸುವಂತೆ ಕಟ್ಟುನಿಟ್ಟಿನ ಬಿಗಿ ಕ್ರಮ ಕೈಗೊಳ್ಳಲಾಗಿತ್ತು. ಭಕ್ತಾದಿಗಳು ಕೂಡ ಕೊರೋನ ರೋಗದ ವಿರುದ್ಧ ಸಮರ ಸಾರಿದ್ದರು.
ವರದಿ:ದೇವರಾಜ್ ಹೊಸನಗರ