ರಿಪ್ಪನ್ ಪೇಟೆ : ತಾಲೂಕಿನಲ್ಲೇ ಅತೀ ದೊಡ್ಡ ಗ್ರಾಮ ಪಂಚಾಯತ್, ಸ್ವಚ್ಚ ಭಾರತ್ ಅಭಿಯಾನದಲ್ಲಿ ಪ್ರಶಸ್ತಿ ಪಡೆದ ಪಂಚಾಯತಿ,ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ರಿಪ್ಪನ್ ಪೇಟೆ ಯಲ್ಲಿರುವ ಒಂದೇ ಒಂದು ಪ್ರಯಾಣಿಕರ ತಂಗುದಾಣ ಸರಿಯಾದ ನಿರ್ವಹಣೆ ಇಲ್ಲದೆ ಗಬ್ಬುನಾರುತ್ತಿದೆ.
ರಿಪ್ಪನ್ ಪೇಟೆ ಜನತೆಯ ದಶಕದ ಬೇಡಿಕೆ ಬಸ್ ನಿಲ್ದಾಣ ರಾಜಕಾರಣಿ ಗಳ ಇಚ್ಚ ಶಕ್ತಿ ಕೊರತೆಯಿಂದ ಆಗದೆ ರಾಜಕಾರಣಿ ಗಳಿಗೆ ತಮ್ಮ ಎಲೆಕ್ಷನ್ ಸಮಯದ ಪ್ರಚಾರದ ಅಸ್ತ್ರಕ್ಕೆ ಸೀಮಿತ ವಾಗಿದೆ. ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಇರುವ ಈ ಹೋಬಳಿ ವ್ಯಾಪ್ತಿಯಲ್ಲಿ ಒಂದು ಸುಸಜ್ಜಿತ ಬಸ್ ನಿಲ್ದಾಣ ಇಲ್ಲದಿರುವುದು ನಾಚಿಕೆಯ ಸಂಗತಿಯಾಗಿದೆ.
ಇನ್ನು ಪ್ರಸ್ತುತ ಇರುವ ಪ್ರಯಾಣಿಕರ ತಂಗುದಾಣದ ಸ್ಥಿತಿಯಂತೂ ಶೋಚನೀಯವಾಗಿದೆ. ಎಲೆಂದರಲ್ಲಿ ಬಟ್ಟೆಬರೆಗಳು, ಬಿಕ್ಷುಕರು, ಮದ್ಯವ್ಯಸನಿಗಳು, ಅನಾಥರು,ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಮಲಗಿರುತ್ತಾರೆ. ಬಸ್ ನಿಲ್ದಾಣದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿನಿಯರು,ವೃದ್ಧರು,ಮಹಿಳೆಯರು,ಹಿರಿಯ ನಾಗರಿಕರು ಕಾಯುತ್ತಿರುತ್ತಾರೆ. ಆದರೆ ಇಲ್ಲಿ ಒಂದು ನಿಮಿಷಕ್ಕಿಂತ ಹೆಚ್ಚು ಕಾಯುವ ಸ್ಥಿತಿ ಇಲ್ಲಿಲ್ಲ.!!
ಎಲ್ಲೆಂದರಲ್ಲಿ ಬಿದ್ದಿರುವ ಕಸದರಾಶಿ, ಗಲೀಜು ವಸ್ತುಗಳು, ಗಬ್ಬುನಾರುತ್ತಿದೆ.ಸ್ವಚ್ಛ ಭಾರತ ಅಭಿಯಾನದಲ್ಲಿ ಪ್ರಶಸ್ತಿ ಪಡೆದಿರುವ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಪ್ರಯಾಣಿಕರ ತಂಗುದಾಣವನ್ನು ಗಮನಿಸದೆ ಇರುವುದು ದುರಂತವೇ ಸರಿ !
ಈ ಬಸ್ ಪ್ರಯಾಣಿಕರ ತಂಗುದಾಣ ಕ್ಕೆ ಈ ಹಿಂದೆ ಸೂಕ್ತವಾದಂತಹ ವಿದ್ಯುತ್ ಸಂಪರ್ಕ ವ್ಯವಸ್ಥೆ ಇತ್ತು .ಈಗ ವಿದ್ಯುತ್ ಸಂಪರ್ಕವೂ ಸಹ ಇಲ್ಲದಂತಾಗಿದೆ. ರಾತ್ರಿ ಹೊತ್ತಿನಲ್ಲಿ ಬಸ್ ನಿಲ್ದಾಣದಲ್ಲಿ ಅನೈತಿಕ ಚಟುವಟಿಕೆಗೆ ಹೇಳಿಮಾಡಿಸಿದ ಜಾಗ ಎನ್ನುವಂತಾಗಿದೆ.
ಈ ಬಗ್ಗೆ ಸ್ಥಳೀಯ ಗ್ರಾಮಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು,ಜನಪ್ರತಿನಿಧಿಗಳು ಗಮನಹರಿಸಿದರೆ ಒಳ್ಳೆಯದು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ವರದಿ : ರಾಮನಾಥ್ ರಿಪ್ಪನ್ ಪೇಟೆ