ಸಾಗರ: ಸೈನಿಕರಾಗಿ ದೇಶದ ಗೌರವ ಪೂರ್ವಕ ಸೇವೆಯನ್ನು ನಿರ್ವಹಿಸಿ ಸೇನೆಯಿಂದ ನಿವೃತ್ತಿಯಾದ ಮಾಜಿ ಯೋಧರಿಗೆ ವ್ಯವಸಾಯದ ಉದ್ದೇಶಕ್ಕೆ ಭೂ ಮಂಜೂರಾತಿ ಮಾಡಬೇಕೆಂದು ಆಗ್ರಹಿಸಿ ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ವತಿಯಿಂದ ಸಾಗರ ಉಪ ವಿಭಾಗಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಭೆಯ ನೇತೃತ್ವವನ್ನು ವಹಿಸಿದ ರಾಜ್ಯ ಮಾಜಿ ಸೈನಿಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಸುಭಾಷ್ ಚಂದ್ರ ತೇಜಸ್ವಿ ಮಾತನಾಡುತ್ತಾ ರಾಜ್ಯ ಸರ್ಕಾರದ ಆದೇಶವಿದ್ದರೂ ಭೂ ಮಂಜೂರಾತಿಗಾಗಿಅರ್ಜಿ ಸಲ್ಲಿಸಿದ ಸೈನಿಕರ ಅರ್ಜಿಗಳನ್ನು ಪುರಸ್ಕರಿಸದೆ ಕಾಲಹರಣ ಮಾಡುತ್ತಾ ಇಲ್ಲದ ಕಾರಣಗಳನ್ನು ಹೇಳಿ ಮಾಜಿ ಸೈನಿಕರನ್ನು ಅಲೆದಾಡಿಸುತ್ತಿರುವುದು ಖಂಡನೀಯ ತಕ್ಷಣದಲ್ಲಿ ಸೈನಿಕರ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಭೂ ಮಂಜೂರಾತಿ ಮಾಡಬೇಕೆಂದು ಆಗ್ರಹಿಸಿದರು.
ಮನವಿಯ ಸಂದರ್ಭದಲ್ಲಿ ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು ಉಪಸ್ತಿತರಿದ್ದರು.
ವರದಿ :ಧರ್ಮರಾಜ್.ಜಿ.