w
Headlines
Home » ಸಹೃದಯಿ ಶಾಸಕ ಆರಗ ಜ್ಞಾನೇಂದ್ರರವರಿಗೆ ಗೃಹಖಾತೆ ಲಭಿಸಿರುವುದು ಖುಷಿ ತಂದಿದೆ : ಎಂ ಬಿ ಲಕ್ಷಣಗೌಡ

ಸಹೃದಯಿ ಶಾಸಕ ಆರಗ ಜ್ಞಾನೇಂದ್ರರವರಿಗೆ ಗೃಹಖಾತೆ ಲಭಿಸಿರುವುದು ಖುಷಿ ತಂದಿದೆ : ಎಂ ಬಿ ಲಕ್ಷಣಗೌಡ

ರಿಪ್ಪನ್ ಪೇಟೆ: ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಸರಳ ಹಾಗೂ ಸಹೃದಯಿ ವ್ಯಕ್ತಿತ್ವದ ಜನನಾಯಕ ಆರಗ ಜ್ಞಾನೇಂದ್ರರವರು ಗೃಹ ಸಚಿವರಾಗಿ ಆಯ್ಕೆಯಾಗಿರುವುದು ಸಮಾಜಕ್ಕೆ ಹರ್ಷ ತಂದಿದೆ ಎಂದು ಹೊಸನಗರ ತಾಲೂಕಿನ ಒಕ್ಕಲಿಗ ಸಮಾಜದ ಅಧ್ಯಕ್ಷರಾದ ಎಂ ಬಿ ಲಕ್ಷಣಗೌಡ ಹೇಳಿದ್ದಾರೆ.

ಕಳೆದ 45 ವರ್ಷಗಳಿಂದ ಸಂಘ ಪರಿವಾರದಲ್ಲಿ ಸಕ್ರೀಯ ನಾಯಕರಾಗಿದ್ದು 9 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ 4 ಬಾರಿ ಶಾಸಕರಾಗಿ ಎಂದಿಗೂ ಅಧಿಕಾರಕ್ಕಾಗಿ ಲಾಭಿ ನಡೆಸದೇ ಇದ್ದ ಜನನಾಯಕನಿಗೆ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಗೃಹ ಸಚಿವರಾಗಿ ಆಯ್ಕೆಯಾಗಿರುವುದು ಸಮಾಜಕ್ಕೆ ಹರ್ಷ ತಂದಿದೆ ಎಂದರು.

ಜ್ಞಾನೇಂದ್ರರವರು ಎಂದಿಗೂ ಜಾತಿ-ಧರ್ಮದ ಭೇದ ಭಾವ ತೋರಿದವರಲ್ಲ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ಅವರಲ್ಲಿದೆ ಮುಂದಿನ ದಿನಗಳಲ್ಲಿ ಸಚಿವರಾಗಿ ರಾಜ್ಯಕ್ಕೆ ಅಪಾರ ಕೊಡುಗೆ ನೀಡಲಿದ್ದಾರೆ ಎಂದು ಈ ಸಂಧರ್ಭದಲ್ಲಿ ಹೇಳಿದರು.

ಹೊಸನಗರ ತಾಲೂಕ್ ಒಕ್ಕಲಿಗರ ಸಮಾಜ ಹಾಗೂ ರಿಪ್ಪನ್ ಪೇಟೆ ಒಕ್ಕಲಿಗರ ಸಮಾಜದ ಪದಾಧಿಕಾರಿಗಳು ಆರಗ ಜ್ಞಾನೇಂದ್ರರವನ್ನು ಅಭಿನಂದಿಸಿದ್ದಾರೆ‌.






ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..


Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.