Headlines

ಅಪರೂಪದ ಥಲಸ್ಸೆಮಿಯಾ ರೋಗ ಪೀಡಿತರಿಗಾಗಿ ಹಿರೇಸಾನಿಯಲ್ಲಿ ರಕ್ತದಾನ ಶಿಬಿರ

ಅಪರೂಪದ ಥಲಸ್ಸೆಮಿಯಾ ರೋಗ ಪೀಡಿತರಿಗಾಗಿ ಹಿರೇಸಾನಿಯಲ್ಲಿ ರಕ್ತದಾನ ಶಿಬಿರ


ರಿಪ್ಪನ್ ಪೇಟೆ: ಇಲ್ಲಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಸಾನಿ ಎಂಬ ಕುಗ್ರಾಮಕ್ಕೆ ಇಂದಿಗೂ ಚಿಮುಣಿ ಬುಡ್ಡಿಯಂತೆ ಉರಿಯುವ ವಿದ್ಯುತ್  ದೀಪಗಳು, ರಸ್ತೆ, ಸಾರಿಗೆ, ದೂರವಾಣಿ ಹಾಗೂ ನೆಟ್ವರ್ಕ್  ಸೌಕರ್ಯವಿಲ್ಲ. ಪ್ರತಿ ಚುನಾವಣೆಯಲ್ಲಿ ಮತದಾನ ಮಾಡುವ ಮುನ್ನ ಭರವಸೆ ನೀಡುವ ನಾಯಕರು ನಂತರ ಇತ್ತಕಡೆ ತಲೆ ಹಾಕಿ ಮಲಗಿದ ಉದಾಹರಣೆಯೂ ಇಲ್ಲ. ಆದರೂ, ಈ ಗ್ರಾಮದ ಯುವಕರ  ಚಿಂತನೆ  ಗ್ರಾಮಸ್ಥರ ಸಹಮತದೊಂದಿಗೆ ಯಶಸ್ವಿ ರಕ್ತದಾನ ಶಿಬಿರಕ್ಕೆ ಮುನ್ನುಡಿ  ಬರೆದಿದೆ.

ಹೌದು  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ  ರಕ್ತ ನಿಧಿ ಘಟಕ ಇವರ ಸಹಯೋಗದಲ್ಲಿ ಹಿರೇಸಾನಿ ಗ್ರಾಮದ  ಮಲೆನಾಡ ಬಳಗ  ವತಿಯಿಂದ ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ನೆರವಿಗಾಗಿ ಗುರುವಾರ ರಕ್ತದಾನ ಶಿಬಿರ ಆಯೋಜಿಸಲಾಯಿತು. ಕೇವಲ 34 ಮನೆಗಳಷ್ಟೇ ಇರುವ ಈ ಚಿಕ್ಕ ಗ್ರಾಮದಲ್ಲಿ ನಡೆದ ಶಿಬಿರದಲ್ಲಿ  ಯಾವುದೇ ರಾಜಕೀಯ, ಸಂಘ ಸಂಸ್ಥೆಗಳ ಬಳಕೆ ಮಾಡಿಕೊಳ್ಳದೆ 24ಕ್ಕೂ ಹೆಚ್ಚು ಯೂನಿಟ್ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಥಲಸ್ಸೆಮಿಯಾ ಒಂದು ಅನುವಂಶಿಯ  ಸಂಬಂಧದ ಮೂಲಕ  ಹರಡುವ ರೋಗವೆಂದು ಪರಿಗಣಿಸಲಾಗಿದೆ.ಈ ಕಾಯಿಲೆಯಿಂದ ಬಳಲುವವರು ಜೀವನಪೂರ್ತಿ ನಿಯಮಿತವಾಗಿ ಹೊಸ ರಕ್ತವನ್ನು ಪಡೆಯಬೇಕಾಗುತ್ತದೆ. ರಕ್ತದಾನಿಗಳ ಕೊರತೆಯಿಂದ ಅನೇಕ ರೋಗಿಗಳು ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿಯೇ ಹಿರೇಸಾನಿ ಗ್ರಾಮದ ಯುವಕರ ಈ ಕಾರ್ಯವು ರಾಜ್ಯಕ್ಕೆ ಮಾದರಿಯಾಗಿದೆ.

ಶಿಬಿರದ ವೈದ್ಯಾಧಿಕಾರಿ ಡಾ. ಗಣೇಶ್ ಡಿ. ಅವರು ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ 400 ಕ್ಕೂ ಅಧಿಕ  ಮಂದಿ ಈ ಕಾಯಿಲೆಯಿಂದ  ಬಳಲುತ್ತಿದ್ದು  ಆಸ್ಪತ್ರೆಯಲ್ಲಿ 180ಕ್ಕೂ ಅಧಿಕ   “ಥಲಸ್ಸೆಮಿಯಾ ರೋಗಿಗಳಿಗೆ  ಚಿಕಿತ್ಸೆ ನೀಡಲಾಗುತ್ತಿದ್ದು, ಅವರ   ರಕ್ತದ  ಕೊರತೆಗೆ ಅನುಗುಣವಾಗಿ  ಪ್ರತಿ ತಿಂಗಳು 2 ರಿಂದ 3 ಬಾರಿ  ಹೊಸ ರಕ್ತ ಕಣಗಳನ್ನು ಸಕಾಲದಲ್ಲಿ , ಇಂಥ ರೋಗಪೀಡಿತರಿಗಾಗಿ ಸ್ಥಳೀಯ ಗ್ರಾಮಸ್ಥರು ಪ್ರೇರಣೆಯಿಂದ ಮುಂದೆ ಬಂದು ರಕ್ತದಾನ ಮಾಡಿರುವುದು ರಾಜ್ಯದಲ್ಲಿ ಪ್ರಥಮವಾಗಿದೆ.ಇಂತಹ ಶಿಬಿರಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸಿರುವುದು ಶ್ಲಾಘನೀಯ ಎಂದರು.

ಈ ಸಂಧರ್ಭದಲ್ಲಿ ಡಾ.  ಡಿ. ಗಣೇಶ್ , ಡಾ. ಗಣೇಶ್ ವೈ., ರೂಪಾನಂದ ಮೂರ್ತಿ, ಸುಷ್ಮಾ ಡಿಸೋಜಾ, ವೇದಮೂರ್ತಿ, ಮಂಜುನಾಥ್ ಕಲ್ಯಾಣ್, ಗಣೇಶ್, ಕುಮಾರಿ ಹಜರಿಯ, ಹನುಮಂತಪ್ಪ ಸೇರಿದಂತೆ ಮಲ್ನಾಡ್ ಬಾಯ್ಸ್ ಗ್ರೂಪ್ ಮತ್ತು ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು  ಸಕ್ರಿಯವಾಗಿ ಭಾಗವಹಿಸಿದರು.

ಈ ಕೆಳಗಿನ ಲಿಂಕ್‌ ಕ್ಲಿಕ್ ಮಾಡಿ ಯೂಟ್ಯೂಬ್ ನಲ್ಲಿ ವೀಡಿಯೋ ವೀಕ್ಷಿಸಿ

https://youtu.be/AQg5JMsu5pE

Blood donation camp in Hiresani for people suffering from rare thalassemia ದಿಸೆಅಸೆ