ರಿಪ್ಪನ್ ಪೇಟೆ:ದೇಶಕ್ಕೆ ಸ್ವಾತಂತ್ರ್ಯಬಂದು ಎಪ್ಪತ್ತೈದು ವರ್ಷವಾಯಿತು, ಭ್ರಷ್ಟಾಚಾರ ಮಾಡುವವರು,ಲೂಟಿ ಹೊಡೆಯುವವರು ಸ್ವಾತಂತ್ರ್ಯ ಸಿಕ್ಕಿದೆ.ದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದೇವೆ,ಕೊಡಿಸಿದ್ದೇವೆ ಎಂಬ ಕೀಳು ಮಟ್ಟದ ಮಾತುಗಳನ್ನಾಡುತ್ತಿದ್ದಾರೆಯೇ ಹೊರತು ದೇಶದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಆಸಕ್ತಿ ಇಲ್ಲಾ ಇಚ್ಚಾಶಕ್ತಿ ಇಲ್ಲದ ರಾಜಕಾರಣಿಗಳಿಂದ ದೇಶಕ್ಕೆ ಏನೂ ಪ್ರಯೋಜನ ಇಲ್ಲಾ. ಎಲ್ಲಾ ಆಡಂಬರದ ಆಚರಣೆ ಎಂದು ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಪೋಲಿಸರನ್ನು ಸದ್ಬಳಕೆ ಮಾಡಿಕೊಂಡ್ಡಿದ್ದರೆ ದೇಶ ಪ್ರಪಂಚಕ್ಕೆ ಮಾದರಿಯಾಗುತ್ತಿತ್ತು,ಆದರೆ ಅವರನ್ನು ಸದ್ಬಳಕೆ ಮಾಡಿಕೊಳ್ಳದೆ ದುರ್ಬಳಕೆ ಮಾಡಿಕೊಂಡು ಕೆಟ್ಟ ನೀತಿಯನ್ನು ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇಂದು ರಿಪ್ಪನ್ ಪೇಟೆಯ ಶಿವಮೊಗ್ಗ ಮುಖ್ಯ ರಸ್ತೆ ಬಳಿ ಸರಕಾರ ಮಂಜೂರು ಮಾಡಿದ ದಾಖಲೆಗಳನ್ನು ರಸ್ತೆಯಲ್ಲಿ ಇಟ್ಟು ಮೌನ ಹೋರಾಟ ನಡೆಸಿದ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ನವರು ಶಿವಮೊಗ್ಗ ಮುಖ್ಯ ರಸ್ತೆಯಿಂದ ಪೋಲಿಸ್ ವಸತಿ ಗೃಹಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, 2019 ರಲ್ಲಿ ಜಿಲ್ಲಾ ಮಂತ್ರಿಗಳಾದ ಕೆ ಎಸ್ ಈಶ್ವರಪ್ಪ ನವರ ಬಳಿ ಈ ಕುರಿತು ಗಮನಕ್ಕೆ ತಂದಾಗ ತಕ್ಷಣ ಕಾಂಕ್ರೀಟ್ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಆದೇಶ ಪ್ರತಿ ನೀಡುತ್ತಾರೆ.ಆದರೆ ಸ್ಥಳೀಯ ಗ್ರಾಮ ಪಂಚಾಯತಿ,ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಇಲಾಖೆಗಳು ಕಡೆಗಣಿಸುತ್ತಿವೆ ಎಂದರು.
ನಮ್ಮ ಜಿಲ್ಲೆಯವರಾದ ಆರಗ ಜ್ಞಾನೇಂದ್ರ ರವರು ಗೃಹ ಇಲಾಖೆಯ ಮಂತ್ರಿಗಳಾಗಿದ್ದಾರೆ,ಅವರ ಗಮನಕ್ಕೆ ಈ ಅವ್ಯವಸ್ಥೆ ಗಮನಕ್ಕೆ ಬರಬೇಕು, ಸೂಕ್ತ ರೀತಿಯಲ್ಲಿ ರಸ್ತೆ ಅಭಿವೃದ್ಧಿ ಪಡಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ರವರ ಮನೆ ಮುಂಬಾಗದಲ್ಲಿ ಈ ಕಾಮಗಾರಿ ಆರಂಭವಾಗುವವರೆಗೂ ಏಕಾಂಗಿಯಾಗಿ ಪ್ರತಿಭಟನೆಗೆ ಸಿದ್ದ,ಈ ಹೋರಾಟ ನನ್ನ ಸ್ವಾರ್ಥಕ್ಕಾಗಿ ಅಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಒಟ್ತಾರೆಯಾಗಿ ಬಹುದಿನಗಳ ಬೇಡಿಕೆಯಾಗಿರುವ ರಿಪ್ಪನ್ ಪೇಟೆ ಪೊಲೀಸ್ ವಸತಿಗೃಹಕ್ಕೆ ತೆರಳುವ ರಸ್ತೆಯ ಅವ್ಯವಸ್ಥೆ ನಮ್ಮ ಜಿಲ್ಲೆಯವರೇ ಗೃಹ ಮಂತ್ರಿಯಾಗಿರುವಾಗ ಸರಿಪಡಿಸುವತ್ತ ಗಮನ ಹರಿಸುತ್ತಾರಾ ಕಾದು ನೋಡಬೇಕಾಗಿದೆ.
ವರದಿ : ದೇವರಾಜ್ ರಿಪ್ಪನ್ ಪೇಟೆ
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..