ಹೊಸನಗರ ಮತ್ತು ಜಯನಗರದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ | Eid milad

ಹೊಸನಗರ ಪಟ್ಟಣ ಹಾಗೂ ಜಯನಗರದಲ್ಲಿ ಇಂದು ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಈದ್ ಮಿಲಾದ್ ಮೆರವಣಿ ಗೆಯಲ್ಲಿ ಪಾಲ್ಗೊಂಡು ಪ್ರವಾದಿ ಮಹಮದ್ ರವರ ಜನ್ಮದಿನವನ್ನು ಶ್ರದ್ದಾಪೂರ್ವಕವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಸೀದಿಯ ಧರ್ಮ ಗುರುಗಳು ಸಂದೇಶ ನೀಡಿ ಪ್ರವಾದಿ ಅವರ ಆಲೋಚನೆಗಳು ಅತ್ಯಂತ ಪ್ರಸ್ತುತವಾಗಿದೆ ಉತ್ತಮ ಸಮಾಜ ನಿರ್ಮಾಣಕ್ಕೆ ಅವರ ಗುರಿ ಸಂದೇಶಗಳು ಪೂರಕವಾಗಿದೆ ಮಾನವ ಜೀವನದ ಸಮಗ್ರ ಸುಧಾರಣೆ ಪ್ರವಾದಿ ಅವರ ಗುರಿಯಾಗಿತ್ತು.ಪ್ರವಾದಿಯವರ ಆಶೋತ್ತರಗಳು ಕೇವಲ ಇಸ್ಲಾಂ ಸಮುದಾಯಕ್ಕೆ ಮಾತ್ರವಲ್ಲದೆ ಜಗತ್ತಿನ ಮಾನವ ಕುಲದ ಪ್ರತಿಯೊಬ್ಬರಿಗೂ…

Read More

ಹೊಸನಗರ : ಅಡಿಕೆ ತೋಟಕ್ಕೆ ಎಲೆಚುಕ್ಕಿ ರೋಗ – ಬೇಸತ್ತ ರೈತ ಆತ್ಮಹತ್ಯೆ |sucide

ಮಲೆನಾಡಿನಲ್ಲಿ ಎಲೆ ಚುಕ್ಕೆ ತೀವ್ರತೆ ಹೆಚ್ಚಾಗಿದ್ದು, ರೈತನೋರ್ವನ ಬಲಿ ಪಡೆದುಕೊಂಡಿದೆ. ಎಲೆಚುಕ್ಕೆ ರೋಗಕ್ಕೆ ಅಡಕೆ ತೋಟ ಬಲಿಯಾದ ಹಿನ್ನೆಲೆ ಮಾಡಿದ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ ರೈತ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸನಗರ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಿಳಮದೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಕರಿಮನೆ ಗ್ರಾಪಂ ಕಿಳಂದೂರು ಗ್ರಾಮದ ಕೃಷ್ಣಪ್ಪಗೌಡ (60) ಮೃತ ವ್ಯಕ್ತಿ ಮನೆಯ ಪಕ್ಕದಲ್ಲಿರುವ ಮಾವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಕೃಷ್ಣಪ್ಪಗೌಡ ಅವರ ಸಹೋದರ…

Read More

ಗವಟೂರು-ಮಾವಿನಸರ ಕಳಪೆ ರಸ್ತೆ ಕಾಮಗಾರಿ ವಿರೋಧಿಸಿ ಬೇಳೂರು ನೇತ್ರತ್ವದಲ್ಲಿ ಪ್ರತಿಭಟನೆ | ಪೇ..ಸಿಎಂ ಅಲ್ಲಾ ಪೇ ಹಾಲಪ್ಪ…ಪೇ. ಸಂಸದ… ಮಾಜಿ ಶಾಸಕ ಗಂಭೀರ ಅರೋಪ |

ರಿಪ್ಪನ್‌ಪೇಟೆ : ಇಲ್ಲಿನ ಗವಟೂರು-ಪೂಜಾರದಿಂಬ ಸಂಪರ್ಕ ರಸ್ತೆಯ ಪಿಎಂಜಿಎಸ್‌ವೈ ಯೋಜನೆಯಡಿ 4.41 ಕೋಟಿ ವೆಚ್ಚದಲ್ಲಿ ನಿರ್ವಹಿಸಲಾಗಿರುವ ಕಾಮಗಾರಿ ಕೇವಲ ಮೂರು ತಿಂಗಳಲ್ಲಿ ಕಿತ್ತು ಹೋಗಿರುವುದನ್ನು ಖಂಡಿಸಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷದವರು ಇಂದು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸಭೆಯನುದ್ದೇಶಿಸಿ ಮಾತನಾಡಿದ ಬೇಳೂರು ಪೇ.ಸಿಎಂ ಅಲ್ಲ……ಪೇ.ಹಾಲಪ್ಪ….ಪೇ.ಸಂಸದ  ಎಂದು  ಟೀಕಿಸುವುದರೊಂದಿಗೆ ಬಾಳೆಹಣ್ಣು ತಿಂದು………! ಸಿಪ್ಪೆಯನ್ನು ಗುತ್ತಿಗೆದಾರರಿಗೆ ಬಿಟ್ಟಿದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾ ಎಂಬುವ ಹಾಗಿದೆ ಈ ಕಾಮಗಾರಿ. ರಾಜ್ಯ ಸರ್ಕಾರ ಶೇಕಡಾ 40 ಪರ್ಸೇಂಟ್…

Read More

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದ ಹೆದ್ದಾರಿಪುರದ ಯುವಕ ಸುಷ್ಮಾಂತ್ | ಕೃತಕ ಕಾಲಿನಲ್ಲಿ ಹೆಜ್ಜೆ ಹಾಕಿ ಎಲ್ಲಾರ ಗಮನಸೆಳೆದ ಯುವಕ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕಬ್ಬಡಿ ಆಟಗಾರನಾಗಿದ್ದ ಸುಶ್ಮಂತ್ ಅವರು ಇಂದು ರಾಹುಲ್ ಗಾಂಧಿಯೊಂದಿಗೆ ಭಾರತ ಐಕ್ಯತಾ ಯಾತ್ರೆಯಲ್ಲಿ ತನ್ನ ಕೃತಕ ಕಾಲಿನ ಸಹಾಯದಿಂದ ಹೆಜ್ಜೆ ಹಾಕಿದರು. ಹೆದ್ದಾರಿಪುರ ಗ್ರಾಮದ ಪ್ರತಿಭಾವಂತ ಯುವ ಕಬ್ಬಡಿ ಆಟಗಾರ ಸುಶ್ಮಾಂತ್ ತನ್ನ ಒಂದು ಕಾಲನ್ನು ಕಳೆದುಕೊಂಡು ಕಿಚ್ಚ ಸುದೀಪ್ ಟ್ರಸ್ಟ್, TV9 ಮಾರುವೇಷ ತಂಡ ಹಾಗೂ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಇವರ ನೆರವಿನಿಂದ ಕೃತಕ ಕಾಲನ್ನು ಅಳವಡಿಸಿಕೊಂಡಿದ್ದ. ಸುಶ್ಮಾಂತ್ ಜೊತೆ ಹೆಜ್ಜೆ ಹಾಕುವಾಗ ಕಾಲನ್ನು ಕಳೆದುಕೊಂಡಿದ್ದರ ಬಗ್ಗೆ…

Read More

ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಪೋಷಣ್ ಅಭಿಯಾನ : ವಿಜಯ | ಕಣ್ಮನ ಸೆಳೆದ ಸಿರಿಧಾನ್ಯಗಳ ಮನೆ |Ripponpet news

ರಿಪ್ಪನ್ ಪೇಟೆ: ಸಮಾಜದ ಪ್ರತಿಯೊಬ್ಬರು ಆರೋಗ್ಯವಾಗಿದ್ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಪ್ರಸ್ತುತ ಅಪೌಷ್ಠಿಕತೆಯಿಂದ ಬಳಲುತ್ತಿರುವ ಜನರನ್ನು ಅನಾರೋಗ್ಯ ಮುಕ್ತರನ್ನಾಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಉದ್ದೇಶದಿಂದ ಸರಕಾರ ಪೋಷಣ್ ಅಭಿಯಾನವನ್ನು ಜಾರಿಗೆ ತಂದಿಗೆ ಎಂದು ಹೊಸನಗರ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ವಿಜಯ ಹೇಳಿದರು.   ಬಾಳೂರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು  ಅಪೌಷ್ಠಿಕ ಮುಕ್ತತೆಯನ್ನು ಮನಗೊಂಡಿರುವ ಸರಕಾರ ಪೋಷಣ್ ಅಭಿಯಾನ ಯೋಜನೆಯ ಮೂಲಕ ಮಹಿಳೆಯರಿಗೆ…

Read More

ಸಂಘಟನೆಯಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ : ವಾಸಪ್ಪ ಮಾಸ್ತಿ ಕಟ್ಟೆ | ರಿಪ್ಪನ್ ಪೇಟೆಯಲ್ಲಿ ಶ್ರೀ ನಾರಾಯಣಗುರು ವಿಚಾರ ವೇದಿಕೆಯ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ

ರಿಪ್ಪನ್ ಪೇಟೆ :ಒಂದೇ ಕುಲ, ಒಂದೇ ಧರ್ಮ, ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಯಿಂದ ಬಲಯುತರಾಗಿ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದ ಮಹಾನ್ ದಾರ್ಶನಿಕ ಶ್ರೀ ನಾರಾಯಣ ಗುರುಗಳ ಸಂದೇಶವನು ಪಾಲಿಸೋಣ, ಆಗ ಮಾತ್ರ ಸಮಾಜವನ್ನು ಕಟ್ಟಲು ಸಾಧ್ಯ,  ಎಂದು ಹೊಸನಗರ ತಾಲೂಕು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಮಾಸ್ತಿಕಟ್ಟೆ ವಾಸಪ್ಪ ಹೇಳಿದರು.  ಪಟ್ಟಣದ ಆಶ್ರೀತಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ  ಕೆರಹಳ್ಳಿ ಹೋಬಳಿ ಮಟ್ಟದ ಶ್ರೀ ನಾರಾಯಣ ಗುರು ವಿಚಾರಣ ವೇದಿಕೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು…

Read More

ರೌಡಿಸಂ ಮತ್ತು ಗಾಂಜಾ ದಂಧೆಕೋರರಿಗೆ ನೂತನ ಎಸ್ಪಿ ಮಿಥುನ್ ಕುಮಾರ್ ಖಡಕ್ ವಾರ್ನಿಂಗ್ |sp

ರೌಡಿಸಂ, ಗಾಂಜಾ ಮಾರಾಟವನ್ನು ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ’ ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಶೀಘ್ರ ಸಾರ್ವಜನಿಕರೊಂದಿಗೆ ಸಂವಹನ ನಡೆಸಿ ಇಲ್ಲಿನ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ. ಅಪರಾಧ ಚಟುವಟಿಕೆ ಕಂಡು ಬಂದಲ್ಲಿ ಇಲ್ಲವೇ ಮಾಹಿತಿ ಇದ್ದಲ್ಲಿ ಮಾಧ್ಯಮದವರು ಹಾಗೂ ಸಾರ್ವಜನಿಕರು ನೇರವಾಗಿ ನಮಗೆ ಮಾಹಿತಿ ಕೊಡಬಹುದು’ ಎಂದು ತಿಳಿಸಿದರು. ಕೋಮುಗಲಭೆ, ರೌಡಿ ಚಟುವಟಿಕೆ ಹಾಗೂ ಗಾಂಜಾ ಮಾರಾಟ ಶಿವಮೊಗ್ಗ…

Read More

ರಿಪ್ಪನ್ ಪೇಟೆ ರೋಟರಿ ಸಂಸ್ಥೆಯಿಂದ ಸಾಧಕರಿಗೆ ಸನ್ಮಾನ |Rotary

ರಿಪ್ಪನ್‌ಪೇಟೆ;-ಪಟ್ಟಣದ ಸಮಾಜ ಸೇವಕ ಹಾಗೂ ಕೊಡಗೈ ದಾನಿ ಹಾಸ್ಟಲ್ ಮಂಜಣ್ಣ ದಂಪತಿಗೆ ರಿಪ್ಪನ್‌ಪೇಟೆ ರೋಟರಿ ಸಂಸ್ಥೆಯವರು ಸನ್ಮಾನಿಸಿ ಗೌರವಿಸಿದರು. ಪಟ್ಟಣದ ಸಮೀಪದ ಗವಟೂರು ನಿವಾಸಿಯಾದ ಹಾಸ್ಟಲ್ ಮಂಜಣ್ಣ ಮುವತ್ತು ವರ್ಷಗಳ ಕಾಲ ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತ ಹೊಂದಿ ತನ್ನ ಸೇವಾವಧಿಯಲ್ಲಿ  ಉಳಿತಾಯ ಮಾಡಿದ ೬ ಲಕ್ಷ ಕ್ಕೂ ಅಧಿಕ ಮೊತ್ತದ ಹಣವನ್ನು “ಮುಕ್ತಿವಾಹಿನಿ’’ವಾಹನಕ್ಕೆ ವಿನಿಯೋಗಿಸಿ  ಸಾರ್ವಜನಿಕರ ಸೇವೆಗಾಗಿ ರೋಟರಿ ಸಂಸ್ಥೆಯವರ ಮೂಲಕ ಲೋಕಾರ್ಪಣೆ ಮಾಡುವುದರೊಂದಿ ಎಲೆಮರೆಯ ಕಾಯಿಯಂತೆ ಎಡಗೈಗೆ ಕೊಟ್ಟಿರುವುದು ಬಲಗೈಗೆ…

Read More

ರಿಪ್ಪನ್‌ಪೇಟೆ : ಪಾದಚಾರಿಗೆ ಬೈಕ್ ಡಿಕ್ಕಿ – ಗಂಭೀರ ಗಾಯಗೊಂಡ ಪಾದಚಾರಿ ಮೆಗ್ಗಾನ್ ಗೆ ದಾಖಲು |Accident

ರಿಪ್ಪನ್‌ಪೇಟೆ : ಪಾದಚಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಗೆ ತೀವ್ರತರವಾದ ಗಾಯಗಳಾಗಿರುವ ಘಟನೆ ಪಟ್ಟಣದ ವಿನಾಯಕನಗರದ ಬಾಲಕಿಯರ ಹಾಸ್ಟೆಲ್ ಮುಂಭಾಗದಲ್ಲಿ ನಡೆದಿದೆ. ಶಿವಮೊಗ್ಗ ರಾಮನಗರ ನಿವಾಸಿ ಸೈಯದ್ ಮುಜಾಹಿದ್ (34) ಗಂಭೀರ ಗಾಯಗೊಂಡಿದ್ದಾರೆ. ವಿನಾಯಕನಗರದಿಂದ ರಿಪ್ಪನ್‌ಪೇಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ರಿಪ್ಪನ್‌ಪೇಟೆ ಕಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಎಡಗಾಲು ಮುರಿದಿದ್ದು ,ತಲೆ ಹಾಗೂ ಎಡಪಕ್ಕೆಗೆ ತೀವ್ರತರವಾದ ಪೆಟ್ಟಾಗಿದ್ದು ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ರಾಮನಗರ ನಿವಾಸಿ ಸೈಯದ್ ಮುಜಾಹಿದ್…

Read More

ಶಿರಾಳಕೊಪ್ಪದಲ್ಲಿ ಭೂಕಂಪನ ಸಂಭವಿಸಿಲ್ಲ : KSNDMC ಸ್ಪಷ್ಟನೆ |ಸುಳ್ಳು ಸುದ್ದಿಗೆ ಭಯಬೀತರಾದ ಜನ

ಇಂದು ಮಧ್ಯಾಹ್ನ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಭೂಕಂಪನದ ( Earthquake ) ಅನುಭವ ಉಂಟಾಗಿದೆ ಎನ್ನಲಾಗಿತ್ತು. ಆದ್ರೇ ಭೂ ಕಂಪನ ಸಂಭವಿಸಿಲ್ಲ ಎಂಬುದಾಗಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು(KSNDMC) ಸ್ಪಷ್ಟ ಪಡಿಸಿದೆ. ಈ ಕುರಿತಂತೆ ಕೆ ಎಸ್ ಎನ್ ಡಿ ಎಂ ಸಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಶಿವಮೊಗ್ಗದ ಲಿಂಗನಮಕ್ಕಿ ಅಣೆಕಟ್ಟು, ಹಾಸನ ಜಿಲ್ಲೆಯ ಹೇಮಾಪತಿ ಅಣೆಕಟ್ಟು, ಉತ್ತರ ಕನ್ನಡ ಜಿಲ್ಲೆಯ ಸೂಪಾ ಅಣೆಕಟ್ಟು, ಮೈಸೂರು ಜಿಲ್ಲೆಯ ಕೆ ಆರ್ ಎಸ್…

Read More