ರಿಪ್ಪನ್‌ಪೇಟೆಯಲ್ಲಿ ಆರ್ ಎಸ್ ಎಸ್ ಪಥಸಂಚಲನ : ಗಮನಸೆಳೆದ ಗಣವೇಷಧಾರಿಗಳು – ಕಲ್ಲಡ್ಕ ಪ್ರಭಾಕರ್ ಭಟ್ ರವರಿಂದ ಪುಷ್ಪಾರ್ಚನೆ|RSS
ರಿಪ್ಪನ್‌ಪೇಟೆ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕರು ಪಟ್ಟಣದಲ್ಲಿ ಇಂದು ಗಣವೇಷ ಧರಿಸಿ ಪಥಸಂಚಲನ ನಡೆಸಿದರು. ಪಟ್ಟಣದ ಹೊಸನಗರ ರಸ್ತೆಯ ರಾಮಮಂದಿರದಿಂದ ಆರಂಭವಾದ ಪಥಸಂಚಲನ, ತೀರ್ಥಹಳ್ಳಿ ರಸ್ತೆ ಮಾರ್ಗವಾಗಿ ಚೌಡೇಶ್ವರಿ ಬೀದಿಯಿಂದ ಹಳೇ ಸಂತೆ ಮಾರ್ಕೇಟ್ ರಸ್ತೆಯಿಂದ ವಿನಾಯಕ ವೃತ್ತಕ್ಕೆ ಆಗಮಿಸಿ ಸಾಗರ ರಸ್ತೆಯ ಮೂಲಕ ಪಥಸಂಚಲನ ಸಾಗಿತು. ವಿನಾಯಕ ವೃತ್ತದಲ್ಲಿ ಅಲಂಕೃತ ವಾಹನದಲ್ಲಿದ್ದ ಡಾ.ಹೆಡ್ಗೆವಾರ್ ಮತ್ತು ಗೋಳ್ವಾಲ್ಕರ್ ಭಾವಚಿತ್ರಕ್ಕೆ ನಾಗರೀಕರು ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ಪುಷ್ಪಾರ್ಚನೆ ಸಲ್ಲಿಸಿದರು. ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇