Headlines

ಅ.16ಕ್ಕೆ ತಳಲೆಯಲ್ಲಿ ಜಿಲ್ಲೆಯಲ್ಲಿಯೇ ಮೊದಲ ಬಹುಸೇವಾ ವಾಣಿಜ್ಯ ಸಂಕೀರ್ಣ ಉದ್ಘಾಟನೆ |Ripponpet

ರಿಪ್ಪನ್‌ಪೇಟೆ: ಹೆದ್ದಾರಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ತಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಬಾರ್ಡ್ ಯೋಜನೆಯಿಂದ ನಿರ್ಮಾಣಗೊಂಡ ಜಿಲ್ಲೆಯಲ್ಲಿಯೇ ಪ್ರಥಮ ಬಹುಸೇವಾ ವಾಣಿಜ್ಯ ಸಂಕೀರ್ಣ ಗೋದಾಮು ಅಕ್ಟೋಬರ್ 16 ರ ಭಾನುವಾರ ಬೆಳಿಗ್ಗೆ 11 ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ  ಹೆಚ್.ಎಸ್. ದಿನೇಶ್‌ಗೌಡ ಹೇಳಿದರು.

ತಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಸುಮಾರು 70 ಲಕ್ಷ ರೂ. ಅನುದಾನದಲ್ಲಿ ಸುಸಜ್ಜಿತವಾದ ಬಹುಮಹಡಿ ಸಂಕೀರ್ಣವನ್ನು ನಿರ್ಮಿಸಲಾಗಿದೆ. ನಬಾರ್ಡ್ ಯೋಜನೆಯಂತೆ ಈ ಸಂಕೀರ್ಣಗಳಲ್ಲಿ ಕೃಷಿ ಪರಿಕರಗಳು, ಕೃಷಿ ಉತ್ಪನ್ನಗಳು ಹಾಗೂ ರೈತರಿಗೆ ಬೇಕಾದ ಅಗತ್ಯ ವಸ್ತುಗಳ ವಾಣಿಜ್ಯ ವ್ಯವಹಾರಕ್ಕೆ ಬಳಸಿಕೊಳ್ಳಲಾಗುತ್ತದೆ. ಈ ಭಾಗದ ಸುತ್ತಮುತ್ತಲಿನ ಸಾರ್ವಜನಿಕರು ಇದರ ಸದ್ಬಳಕೆಯನ್ನು ಮಾಡಿಕೊಂಡು ತಮ್ಮ ದೈನಂದಿನ ವಹಿವಾಟುಗಳು ನಡೆಸಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು. 

ಉದ್ಘಾಟನಾ ಕಾರ್ಯಕ್ರಮದಲ್ಲಿ ನೆಲ ಅಂತಸ್ತನ್ನು ಗೃಹ ಸಚಿವರಾದ ಆರಗ ಜ್ಞಾನೇಂದ್ರರವರು ಮತ್ತು ಮೊದಲ ಅಂತಸ್ತನ್ನು ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ, ಎರಡನೇ ಅಂತಸ್ತನ್ನು ಶಾಸಕ ಹರತಾಳು ಹಾಲಪ್ಪನವರು ಉದ್ಘಾಟನೆ ನೆರವೇರಿಸುವರು.ಶಿಲಾಫಲಕ ಅನಾವರಣವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಎಂ.ಬಿ. ಚನ್ನವೀರಪ್ಪ ನೆರವೇರಿಸುವರು. 

ಮುಖ್ಯ ಅತಿಥಿಗಳಾಗಿ ಅಪೆಕ್ಸ್ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಆರ್.ಎಂ. ಮಂಜುನಾಥಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಿ.ಎನ್. ಸುಧೀರ್, ಎಂ.ಎಂ ಪರಮೇಶ, ನಾಬಾರ್ಡ್ ಅಧಿಕಾರಿ ಬಿ. ರವಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ನಾಗೇಶ ಡೋಂಗ್ರೆ, ಸಹಕಾರ ಸಂಘಗಳ ಉಪನಿಬಂಧಕ ಜಿ. ವಾಸುದೇವ, ಸಹಾಯಕ ನಿಬಂಧಕ ಗೋಪಾಲ ಸಿ., ಅಭಿವೃದ್ಧಿ ಅಧಿಕಾರಿ ವೆಂಕಟಾಚಲಪತಿ ಗ್ರಾ.ಪಂ. ಅಧ್ಯಕ್ಷರಾದ ವನಿತಾ ಗಂಗಾಧರ, ಸದಸ್ಯರಾದ ಚೂಡಾಮಣಿ ಮತ್ತು ನಾಗರತ್ನ ಉಪಸ್ಥಿತಲಿರುವರು. ಈ ಎಲ್ಲಾ ಕಾರ್ಯಕ್ರಮದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾರಂಭವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ವಿನಂತಿಸಿದರು.

ಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಿ.ಎನ್. ಸುಧೀರ್, ಎಂ.ಎಂ ಪರಮೇಶ, ಸಂಘದ ಉಪಾಧ್ಯಕ್ಷರಾದ ಗಂಗಾಧರ, ನಿರ್ದೇಶಕರಾದ ಲೋಕಪ್ಪಗೌಡ, ಕೆ.ಜಿ. ಬಸಪ್ಪ, ಈ.ಡಿ. ಮಂಜುನಾಥ, ಕೆ.ಆರ್. ಮಂಜುನಾಥ, ಹೆಚ್.ಎನ್. ಅಭಿಷೇಕ್, ಗೌರಮ್ಮ, ಶೇಷಮ್ಮ ಯಂಕಪ್ಪ, ಮಹಮ್ಮದ್‌ಸಾಬ್, ಕ್ಷೇತ್ರಾಧಿಕಾರಿ ಇಂದ್ರಕುಮಾರ, ಕಗ್ಗಲಿ ಲಿಂಗಪ್ಪ, ಇನ್ನಿತರರಿದ್ದರು.

Leave a Reply

Your email address will not be published. Required fields are marked *