ಏಕಾಏಕಿ 200 ಮನೆ ತೆರವಿಗೆ ಮುಂದಾದ ಅಧಿಕಾರಿಗಳು : ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ – ಹಲವರನ್ನು ವಶಕ್ಕೆ ಪಡೆದ ಪೊಲೀಸ್|Shivamogga
ಶಿವಮೊಗ್ಗದ ಮಲ್ಲಿಗೇನಹಳ್ಳಿಯಲ್ಲಿ ಅಕ್ರಮ ಮನೆ ತೆರವು ಕಾರ್ಯಚರಣೆ ನಡೆಸಿ ಮನೆಗಳನ್ನ ನೆಲಸಮ ಗೊಳಿಸಲಾಗಿದೆ. ಕಾರ್ಯಾಚರಣೆಗೆ ಅಡ್ಡ ಬಂದವರನ್ನು ವಶಕ್ಕೆ ಪಡೆದು ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ. ಮಲ್ಲಿಗೇನಹಳ್ಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ಅಪ್ಪರ್ ತುಂಗ ಜಾಗದಲ್ಲಿ ಇಲ್ಲಿನ ಹಕ್ಲಿಪಿಕ್ಕಿ ಜನ ಅಕ್ರಮ ಮನೆ ನಿರ್ಮಿಸಿಕೊಂಡಿದ್ದು ಅವರನ್ನು ತೆರವುಗೊಳಿಸಲು ಯುಟಿಪಿ ಇಲಾಖೆ ಅನೇಕ ಬಾರಿ ನೋಟೀಸ್ ನೀಡಲಾಗಿತ್ತು.ಆದರೆ ನೋಟೀಸ್ ಗೆ ಉತ್ತರ ನೀಡಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ನಮಗೆ 6 ತಿಂಗಳು ಕಾಲಾವಕಾಶಕೊಡಿ ಕಾಲಾವಕಾಶ ನೀಡಿದ ನಂತರ ವಸತಿ ಸಚಿವರಿಂದಲೇ ಅನುಮತಿ ತರಲಿದ್ದೇವೆ…