Headlines

ಕೋಟಿ ಹಣವಿದ್ದರೂ ತುತ್ತು ಅನ್ನಕ್ಕೆ ಪರದಾಟ : ಆಸ್ತಿ ಪಡೆದು ಕೈಕೊಟ್ಟ ಮಕ್ಕಳು – ಅನ್ನಕ್ಕಾಗಿ ಅಂಗಲಾಚುತ್ತಿರುವ ವೃದ್ದ|sadstory

ಹೊಸನಗರ : ಮನುಷ್ಯ ತನ್ನ ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿ ಆಸ್ತಿಪಾಸ್ತಿಗಳನ್ನು ಗಳಿಸುವುದು ತನ್ನ ಮಕ್ಕಳು ತಾನು ಪಟ್ಟ ಕಷ್ಟ ಅನುಭವಿಸದಿರಲಿ ಹಾಗೂ ತಮ್ಮ ವೃದ್ದಾಪ್ಯ ಸ್ಥಿತಿಯಲ್ಲಿ ಆಸರೆಯಾಗಿ ಇರಲಿ ಎಂದು ತಾನೇ…ಆದರೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹಳ್ಳಿಯೊಂದರಲ್ಲಿ ತಾನು ಗಳಿಸಿದ ಆಸ್ತಿಯೇ ವೃದ್ದರೊಬ್ಬರಿಗೆ ಮುಳುವಾಗಿ ತುತ್ತು ಅನ್ನಕ್ಕೆ ಪರದಾಡುವ ಪರಿಸ್ಥಿತಿ ಬಂದೊದಗಿದೆ.


ಹೌದು ಹೊಸನಗರ ಪಟ್ಟಣದಿಂದ ಸುಮಾರು 12 ಕಿಮೀ ದೂರದಲ್ಲಿರುವ ಮಳಲಿ ಗ್ರಾಮದ ಅತೀ ಶ್ರೀಮಂತರಾಗಿ ಬಾಳಿ ಬದುಕಿದ್ದ ಮಳಲಿ ಶೀನಯ್ಯನವರು ತಮ್ಮ 89ನೇ ವರ್ಷದ ಇಳಿ ವಯಸಿನಲ್ಲಿ ಒಂದು ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಬಂದಿದೆ.

ಇತ್ತೀಚೆಗೆ ಹೊಸನಗರ ತಾಲ್ಲೂಕು ಕಛೇರಿಯ ಆರ್.ಐ ವೆಂಕಟೇಶ್‌ಮೂರ್ತಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ದೀಪು ಮಳಲಿ ಶೀನಯ್ಯನವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೂರು ದಿನಗಳಿಂದ ಅನ್ನ-ನೀರು ಇಲ್ಲದೇ ಹಾಸಿಗೆ ಹಿಡಿದಿದ್ದರು.ಅವರನ್ನು ಕೂಡಲೇ ಸಮಸ್ಯೆ ಬಗ್ಗೆ ಕೇಳಿದಾಗ ಅವರ ಉತ್ತರ ಈಗಿನ ಯುವಪೀಳಿಗೆ ನಾಚುವಂತೆ ಇತ್ತು.

ಮಳಲಿ ಶ್ರೀನಯ್ಯ ಅಧಿಕಾರಿಗಳಿಗೆ ನೀಡಿದ ಹೇಳಿಕೆ :

 ನಾನು ಹೊಸನಗರ ತಾಲ್ಲೂಕು ಮಳಲಿ ಗ್ರಾಮದಲ್ಲಿ ಹುಟ್ಟಿದ್ದು ನನಗೆ ಈಗ 89ವರ್ಷವಾಗಿದೆ. ನನ್ನ ಪತ್ನಿ ಮರಣ ಹೊಂದಿ ನಾಲ್ಕು ವರ್ಷ ಕಳೆದಿದೆ. ನನಗೆ ಒಟ್ಟು 3ಜನ ಮಕ್ಕಳಿದ್ದು 2ಗಂಡು 1ಹೆಣ್ಣು ಮಗಳಿದ್ದಾರೆ ಎಲ್ಲರಿಗೂ ಮದುವೆ ಮಾಡಿದ್ದೇವೆ.ನನಗೆ ಸ್ವಂತ 7ಎಕರೆ ಅಡಿಕೆ ತೋಟದಿಂದ ಜೀವನ ನಡೆಸುತ್ತಿದ್ದೆ ನನ್ನ ಮಕ್ಕಳನ್ನು ಸಂಪೂರ್ಣ ನಂಬಿ ಅವರವರ ಪಾಲಿನ ಆಸ್ತಿಯನ್ನು ಅವರ ಹೆಸರಿಗೆ 16 ವರ್ಷಗಳ ಹಿಂದೆ ಮಕ್ಕಳಿಗೆ ಬರೆದುಕೊಟ್ಟೆ‌.

 ದೊಡ್ಡ ಮಗ ನನನ್ನು ಇಷ್ಟು ವರ್ಷಗಳ ಕಾಲ ಸಂಪೂರ್ಣ ಜವಾಬ್ದಾರಿಯುತವಾಗಿ ನೋಡಿಕೊಂಡಿದ್ದಾನೆ. ಆದರೆ ಅವರಿಗೆ ಅನಾರೋಗ್ಯದ ಕಾರಣ ಅವರು ಹಾಸಿಗೆ ಹಿಡಿದಿದ್ದಾರೆ. ಅವರಿಂದ ನನನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ 2ನೇ ಮಗ ನನನ್ನು ನೋಡಿಕೊಳ್ಳದೇ ನಾನು ಬರೆದುಕೊಟ್ಟ ಆಸ್ತಿ ಸುಮಾರು 1ಕೋಟಿ ರೂ.ಗಿಂತಲೂ ಅಧಿಕ ಹಣದ ಲಾಭಕ್ಕೆ ಮಾರಾಟ ಮಾಡಿದ್ದಾರೆ ಹಾಗೂ ಶಿವಮೊಗ್ಗದಲ್ಲಿ ಐಶಾರಾಮಿ ಜೀವನ ಸಾಗಿಸುತ್ತಿದ್ದಾರೆ. 

ನಾನು ಅಕ್ಷರಶಃ ಅನಾಥನಾಗಿದ್ದೇನೆ. ಅನ್ನ, ನೀರು ನೀಡಲು ಯಾರು ಇಲ್ಲ. ನನ್ನ ಬದುಕು ಕಷ್ಟಕರವಾಗಿದೆ. ನನಗೆ ಔಷಧಿ ತೆಗೆದುಕೊಳ್ಳಲು ಹಣವಿಲ್ಲ ನನ್ನ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ತಮ್ಮ ನೋವನ್ನು ಅವರ ಮುಂದೆ ಹೇಳಿಕೊಂಡಿದ್ದಾರೆ ನನಗೆ ಇಳಿ ವಯಸ್ಸಿನಲ್ಲಿ ಬದುಕಲು ಅವಕಾಶ ನೀಡಿ ಹಾಗೂ ನಾನು ನನ್ನ ಮಕ್ಕಳಿಗೆ ನೀಡಿದ 7ಎಕರೆ ತೋಟವನ್ನು ನನಗೆ ವಾಪಸ್ಸು ಪಡೆಯಲು ಸಹಕರಿಸಿ ಎಂದು ಬೇಡಿಕೊಂಡರು.

ಹೊಸನಗರ ತಾಲ್ಲೂಕು ಕಛೇರಿಯ ತಹಶೀಲ್ದಾರ್ ವಿ.ಎಸ್ ರಾಜೀವ್‌ರವರ ಆದೇಶದ ಮೇರೆಗೆ ರೆವಿನ್ಯೂ ಇನ್ಸ್‌ಪೆಕ್ಟರ್ ವೆಂಕಟೇಶ್‌ಮೂರ್ತಿ ಹಾಗೂ ಅಲ್ಲಿನ ಗ್ರಾಮ ಲೆಕ್ಕಾಧಿಕಾರಿ ದೀಪುರವರು ಮಳಲಿ ಶೀನಯ್ಯನವರಿಗೆ ಸಾಂತ್ವಾನ ಹೇಳುವುದರ ಜೊತೆಗೆ ಒಂದೇ ದಿನದಲ್ಲಿ ಸರ್ಕಾರದಿಂದ ಸಿಗುವ ವೃದ್ಧಾಪ್ಯ ವೇತನ 1200 ರೂಪಾಯಿಗಳು ಬರುವಂತೆ ಆದೇಶ ಪ್ರತಿಯನ್ನು ನೀಡಿ ಬಂದಿದ್ದಾರೆ.

ಮಕ್ಕಳು ವೃದ್ದಾಪ್ಯ ಸಮಯದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎನುವ ನಂಬಿಕೆಯಿಂದ ಆಸ್ತಿಪಾಸ್ತಿಗಳನ್ನು ಅವರ ಹೆಸರಿಗೆ ಬರೆದು ಒಂದು ಕಾಲದಲ್ಲಿ ಕೋಟ್ಯಾಧಿಪತಿಯಾಗಿದ್ದ ಮಳಲಿ ಶ್ರೀನಯ್ಯ ಇಂದು ಒಂದು ತುತ್ತಿನ ಅನ್ನಕ್ಕೆ ಪರದಾಡುತ್ತಿರುವುದು ನಮ್ಮ ಸಮಾಜದ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿಯಾಗಿದೆ.ಇನ್ನೂ ಅದೆಷ್ಟೋ ವೃದ್ದ ತಂದೆತಾಯಂದಿರು ಮಕ್ಕಳ ಮರ್ಯಾದೆ ತೆಗೆಯಬಾರದೆಂದು ಕಷ್ಟದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆಯೋ ಆ ದೇವನೆ ಬಲ್ಲ……….


Leave a Reply

Your email address will not be published. Required fields are marked *