WhatsApp Channel Join Now
Telegram Channel Join Now
ರಿಪ್ಪನ್ ಪೇಟೆ: ಸಮಾಜದ ಪ್ರತಿಯೊಬ್ಬರು ಆರೋಗ್ಯವಾಗಿದ್ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಪ್ರಸ್ತುತ ಅಪೌಷ್ಠಿಕತೆಯಿಂದ ಬಳಲುತ್ತಿರುವ ಜನರನ್ನು ಅನಾರೋಗ್ಯ ಮುಕ್ತರನ್ನಾಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಉದ್ದೇಶದಿಂದ ಸರಕಾರ ಪೋಷಣ್ ಅಭಿಯಾನವನ್ನು ಜಾರಿಗೆ ತಂದಿಗೆ ಎಂದು ಹೊಸನಗರ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ವಿಜಯ ಹೇಳಿದರು. 


 ಬಾಳೂರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು 
ಅಪೌಷ್ಠಿಕ ಮುಕ್ತತೆಯನ್ನು ಮನಗೊಂಡಿರುವ ಸರಕಾರ ಪೋಷಣ್ ಅಭಿಯಾನ ಯೋಜನೆಯ ಮೂಲಕ ಮಹಿಳೆಯರಿಗೆ ವಿವಿಧ ಸೌವಲತ್ತುಗಳನ್ನು ನೀಡುತ್ತಿದೆ. ಹೆಣ್ಣು ಗರ್ಭವತಿಯಾದ ದಿನದಿಂದ ಒಂದು ಸಾವಿರ ದಿನಗಳವರೆಗೆ ಪಾಲನೆ ಮಾಡುವ ಉದ್ದೇಶ ಯೋಜನೆಯದ್ದಾಗಿದೆ. ಇಂತಹ ಸಮಯದಲ್ಲಿ ಸರಕಾರದ ಯೋಜನೆಯನ್ನು ಪಡೆದುಕೊಂಡು ಮನೆಯಲ್ಲಿಯೇ ಸಿಗುವ ಹಣ್ಣು-ತರಕಾರಿ ಸೊಪ್ಪು-ಮೊಳಕೆೆಕಾಳುಗಳ ಸೇವನೆಯಿಂದ ತಮ್ಮ ಆರೋಗ್ಯವನ್ನು ಸದೃಢಗೊಳಿಸಿಕೊಳ್ಳಬೇಕು ಇದರಿಂದ ಹುಟ್ಟಿದ ಮಗು ಆರೋಗ್ಯವಂತವಾಗಿದ್ದು, ಮುಂದೆ ಅದರಿಂದ ಜನನವಾಗುವ ಪೀಳಿಗೆಯು ಆರೋಗ್ಯ ಪೂರ್ಣವಾಗಿರುತ್ತದೆ ಹಾಗೂ ರಾಸಾಯನಿಕವಾಗಿ ಬಳಸಿದ ಆಹಾರ ಪದಾರ್ಥಗಳಿಂದ ದೂರವಿರುವುದು ಅಗತ್ಯ ಇದರಿಂದ ಮುಂದಿನ ದಿನಗಳಲ್ಲಿ ಆರೋಗ್ಯವಂತ ಜೀವನ ನಡೆಸಲು ಸಾಧ್ಯ. ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಆರೋಗ್ಯದಿಂದ ಇದ್ದರು, ಆದರೆ ಇದೀಗ ಅವಿಭಕ್ತ ಕುಟುಂಬ ದೂರವಾಗಿ ವಿಭಕ್ತ ಕುಟುಂಬಗಳು ಹೆಚ್ಚಾಗಿದ್ದು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಇದಕ್ಕೆ ಕಾರಣ ಪೌಷ್ಟಿಕಾಂಶಗಳ ಕೊರತೆ ಎದ್ದು ಕಾಣುತ್ತಿದೆ ಎಂದರು. 

 ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ,ಪಂ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿದ್ದ ಸಿರಿಧಾನ್ಯಗಳ ಮನೆ :


ಈ ಕಾರ್ಯಕ್ರಮದಲ್ಲಿ ಸಿರಿ ಧಾನ್ಯಗಳಾದ ನವಣೆ, ಸಾಮೆ, ಅರ್ಕಾ,ಊದಲು,ಕೊರ್ಲೆ ಇವುಗಳ ಬಗ್ಗೆ  ರೇಖಾರವರು ಅತ್ಯುತ್ತಮ ಮಾಹಿತಿ ನೀಡಿದರು. ಗರ್ಭಿಣಿ ಮಹಿಳೆಯರಿಗೆ ಉಡಿ ತುಂಬಲಾಯಿತು ಹಾಗೂ ಗ್ರಾಮದ ಮಹಿಳೆಯರು ವಿವಿಧ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಬಗೆಯ ಖಾದ್ಯಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಡಲಾಯಿತು.ನಂತರ ಆಯ್ದ ಮಹಿಳೆಯರಿಗೆ ಬಹುಮಾನ ನೀಡಲಾಯಿತು. 



 ಈ ಕಾರ್ಯಕ್ರಮದಲ್ಲಿ ಗ್ರಾ,ಪಂ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ವೀರಮ್ಮ ,ಕಿರಿಯ ಆರೋಗ್ಯ ಸಹಾಯಕಿ ಪದ್ಮಾವತಿ, ರೇಖಾ ಬಸವರಾಜ್, ರಾಜುಗೌಡ ಹಾಲುಗುಡ್ಡೆ, ಶಿಕ್ಷಕರುಗಳಾದ ಈಶ್ವರಪ್ಪ, ನಾಗಭೂಷಣ ಆರ್, ಅಂಗನವಾಡಿ ಕಾರ್ಯಕರ್ತೆಯರಾದ ತಾಲೂಕಿನ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಲೀಲಾವತಿ,ವನಜಾ, ಆಶಾ,ರಮ್ಯಾ, ಸುಧಾ, ಯಮುನಾ ರೇಣುಕಾ ಕುಲಕರ್ಣಿ ಹಾಗೂ ಅಂಗನವಾಡಿ ಸಹಾಯಕಿಯರು ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು. 

 ಈ ಕಾರ್ಯಕ್ರಮವನ್ನು ಸವಿತ ಭಂಡಾರಿ ಸ್ವಾಗತಿಸಿ, ರೇಖಾ ಹಾಲುಗಡ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *