ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದ ಹೆದ್ದಾರಿಪುರದ ಯುವಕ ಸುಷ್ಮಾಂತ್ | ಕೃತಕ ಕಾಲಿನಲ್ಲಿ ಹೆಜ್ಜೆ ಹಾಕಿ ಎಲ್ಲಾರ ಗಮನಸೆಳೆದ ಯುವಕ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕಬ್ಬಡಿ ಆಟಗಾರನಾಗಿದ್ದ ಸುಶ್ಮಂತ್ ಅವರು ಇಂದು ರಾಹುಲ್ ಗಾಂಧಿಯೊಂದಿಗೆ ಭಾರತ ಐಕ್ಯತಾ ಯಾತ್ರೆಯಲ್ಲಿ ತನ್ನ ಕೃತಕ ಕಾಲಿನ ಸಹಾಯದಿಂದ ಹೆಜ್ಜೆ ಹಾಕಿದರು.

ಹೆದ್ದಾರಿಪುರ ಗ್ರಾಮದ ಪ್ರತಿಭಾವಂತ ಯುವ ಕಬ್ಬಡಿ ಆಟಗಾರ ಸುಶ್ಮಾಂತ್ ತನ್ನ ಒಂದು ಕಾಲನ್ನು ಕಳೆದುಕೊಂಡು ಕಿಚ್ಚ ಸುದೀಪ್ ಟ್ರಸ್ಟ್, TV9 ಮಾರುವೇಷ ತಂಡ ಹಾಗೂ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಇವರ ನೆರವಿನಿಂದ ಕೃತಕ ಕಾಲನ್ನು ಅಳವಡಿಸಿಕೊಂಡಿದ್ದ.

ಸುಶ್ಮಾಂತ್ ಜೊತೆ ಹೆಜ್ಜೆ ಹಾಕುವಾಗ ಕಾಲನ್ನು ಕಳೆದುಕೊಂಡಿದ್ದರ ಬಗ್ಗೆ ಸುಶ್ಮಂತ್ ರಿಂದ ಮಾಹಿತಿ ಪಡೆದ ರಾಹುಲ್ ಆತ್ಮ ವಿಶ್ವಾಸದೊಂದಿಗೆ ಬದುಕಿ ಸಮಾಜದಲ್ಲಿ ಎಲ್ಲರಂತೆ ಬಾಳಿ ಇನ್ನುಳಿದವರಿಗೆ ಮಾದರಿಯಾಗಿ ಎಂಬುವ ಪ್ರೇರಣಾ ನುಡಿಗಳನ್ನಾಡಿದರು.

ಈ ಸಂಧರ್ಭದಲ್ಲಿ ಕೃತಕ ಕಾಲನ್ನು ಕೊಡಿಸಲು ನೆರವಾದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ ವಿ ಶ್ರೀನಿವಾಸ್ ಮತ್ತು ಯುವ ಕಾಂಗ್ರೆಸ್ ತಂಡದವರಿಗೆ ಸುಶ್ಮಾಂತ್ ಅಭಿನಂದನೆ ತಿಳಿಸಿದರು.

ಪ್ರತಿಭಾವಂತ ಆಟಗಾರ ಸುಶ್ಮಾಂತ್:

ಕಬಡ್ಡಿಯನ್ನೆ ಹಗಲು ರಾತ್ರಿ ಧ್ಯಾನಿಸುತ್ತಿದ್ದ ಹುಡುಗ ಸುಶ್ಮಾಂತ್ , ಕಬಡ್ಡಿಯಲ್ಲೆ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡುವ ಹಾದಿಯಲ್ಲಿದ್ದ ಹುಡುಗ ಮತ್ತೆ ಕಬಡ್ಡಿ ಆಡಲಾರ ಎಂಬುವುದು ನುಂಗಲಾರದ ವಿಷಯವಾಗಿತ್ತು. ಕಾಲು ಕತ್ತರಿಸಲೇಬೇಕಾದ ಪರಿಸ್ಥಿತಿ ಒದಗಿದಾಗ  ಕಬಡ್ಡಿ ಆಡದಿದ್ರೂ ಪರ್ವಾಗಿಲ್ಲಾ ಅವನು ಕಬಡ್ಡಿ ಆಟದ ಭಾಗವಾಗ ಬೇಕು, ಕೋಚ್ , ಸಹಾಯಕ ಕೋಚ್, ಮೆಂಟರ್ ಏನಾದರೂ ಆಗಲೇ ಬೇಕು ಎಂದು ಅವನ ಸ್ನೇಹಿತರು ಕುಟುಂಬಸ್ಥರು ತೀರ್ಮಾನಿಸಿದ್ದರು.

ಸರ್ವ ವಿಧದ ನೋವುಣ್ಣುವಾಗಲೂ ತನ್ನ ಚಂದದ ನಗುವಿನಿಂದ ಜಗತ್ತು ಗೆಲ್ಲಬಲ್ಲೆ ಎಂದು ವಿಶ್ವಾಸ ಹುಟ್ಟಿಸುತ್ತಿದ್ದ ಹುಡುಗನಿಗೆ ಆಪರೇಷನ್ ನಂತರ ಪ್ರೊಸ್ಥೆಟಿಕ್ ಲೆಗ್ ಹಾಕಿಸಿಕೊಳ್ಳುವ ಆಸೆ ಇತ್ತು.
ಹೇಳಿ ಕೇಳಿ ಹತ್ತಾರು ಲಕ್ಷದ ಕಾಲು , ಬಡ ಹುಡುಗನಿಗೆ ಕೊಡುವವರು ಯಾರು? 

ಈ ಬಗ್ಗೆ ಭಾರತೀಯ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರು, ಕೋವಿಡ್ ಸಂದರ್ಭದಲ್ಲಿ ದೇಶಕ್ಕೆ ಆಕ್ಸಿಜನ್ ಮ್ಯಾನ್ ಎಂದೇ ಪ್ರಸಿದ್ದರಾಗಿದ್ದ ಬಿ ವಿ ಶ್ರೀನಿವಾಸ್ ರವರಿಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಆದರ್ಶ್ ಹುಂಚದಕಟ್ಟೆ ಮಾಹಿತಿ ನೀಡಿ ಯುವ ಕಾಂಗ್ರೆಸ್ ಫೌಂಡೇಶನ್ ದಿನದಂದು ಪ್ರೊಸ್ಥೆಟಿಕ್ ಲೆಗ್ ಹಾಕಿಸಲಾಯಿತು.

ಯುವ ಆಟಗಾರನಿಗೆ ಕಿಚ್ಚ ಸುದೀಪ್ ಟ್ರಸ್ಟ್, TV9 ಮಾರುವೇಷ ತಂಡ ಹಾಗೂ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ ವಿ ಶ್ರೀನಿವಾಸ್ ನೆರವಾಗುವ ಮೂಲಕ ಸೇವಾ ಮನೋಭಾವ ಮೆರೆದಿದ್ದಾರೆ.

Leave a Reply

Your email address will not be published. Required fields are marked *