Headlines

ಸಂಘಟನೆಯಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ : ವಾಸಪ್ಪ ಮಾಸ್ತಿ ಕಟ್ಟೆ | ರಿಪ್ಪನ್ ಪೇಟೆಯಲ್ಲಿ ಶ್ರೀ ನಾರಾಯಣಗುರು ವಿಚಾರ ವೇದಿಕೆಯ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ

ರಿಪ್ಪನ್ ಪೇಟೆ :ಒಂದೇ ಕುಲ, ಒಂದೇ ಧರ್ಮ, ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಯಿಂದ ಬಲಯುತರಾಗಿ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದ ಮಹಾನ್ ದಾರ್ಶನಿಕ ಶ್ರೀ ನಾರಾಯಣ ಗುರುಗಳ ಸಂದೇಶವನು ಪಾಲಿಸೋಣ, ಆಗ ಮಾತ್ರ ಸಮಾಜವನ್ನು ಕಟ್ಟಲು ಸಾಧ್ಯ,  ಎಂದು ಹೊಸನಗರ ತಾಲೂಕು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಮಾಸ್ತಿಕಟ್ಟೆ ವಾಸಪ್ಪ ಹೇಳಿದರು.

 ಪಟ್ಟಣದ ಆಶ್ರೀತಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ  ಕೆರಹಳ್ಳಿ ಹೋಬಳಿ ಮಟ್ಟದ ಶ್ರೀ ನಾರಾಯಣ ಗುರು ವಿಚಾರಣ ವೇದಿಕೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಈಗಿನ ಪರಿಸ್ಥಿತಿಯಲ್ಲಿ ಸಂಘಟನೆಯಿಂದ ಮಾತ್ರ ಸಮಾಜವನ್ನು ಅಭಿವೃದ್ಧಿಗೊಳಿಸಲು ಸಾಧ್ಯ. ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸಾಗೋಣ ಎಂದು ಹೇಳಿದರು.


ರಾಜ್ಯ ಶ್ರೀ ನಾರಾಯಣಗುರು ವಿಚಾರವೇದಿಕೆ ಸಂಘಟನೆ ರಾಜ್ಯಾಧ್ಯಕ್ಷ ರಾದ ಸತ್ಯಜಿತ್ ಸುರತ್ಕಲ್  ರವರ ನೇತೃತ್ವದಲ್ಲಿ 26 ಉಪ ಪಂಗಡಗಳನ್ನು ಒಳಗೊಂಡಂತೆ ಈಡಿಗ ಸಮುದಾಯದ ಅಭಿವೃದ್ಧಿಗೆ ಹೋರಾಡುತ್ತಿರುವ ಸಂಘಟನೆಯಾಗಿದ್ದು, ಈಗಾಗಲೇ ಅನೇಕ ಹೋರಾಟಗಳ ಮೂಲಕ ಸರ್ಕಾರ ನಮ್ಮ ಸಮಾಜದ ಕಡೆ ಗಮನ ಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.


ಕೆರೆ ಹಳ್ಳಿ ಹೋಬಳಿ ವ್ಯಾಪ್ತಿಯ, ಬೆಳ್ಳೂರು, ಕೆಂಚನಾಲ, ಬಾಳೂರು, ಹರತಾಳು. ಅರಸಾಳು, ಹಾ ರೋಹಿತ್ತಲು, ಬಸವಪುರ  ಹರಿದ್ರಾವತಿ, ಪುರಪ್ಪೆ ಮನೆ ಗ್ರಾಮ ಪಂಚಾಯತ್  ಹಾಗೂ ರಿಪ್ಪನ ಪೇಟೆ ಗ್ರಾಮ ಪಂಚಾಯತ್  ವ್ಯಾಪ್ತಿಯ  ನಾರಾಯಣ ಗುರುಗಳ ಭಕ್ತರು  ಹಾಗೂ  ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಸಂಘಟನೆಯ ತಾಲೂಕ್ ಘಟಕದ ಪದಾಧಿಕಾರಿಗಳು ಆಗಮಿಸಿದ್ದರು.

 ಈ ಸಭೆಯಲ್ಲಿ ಬಿ ಪಿ ರಾಮಚಂದ್ರ, ಕಲಗೋಡ್ ರತ್ನಾಕರ್, ಸುಮತಿ ಆರ್ ಪೂಜಾರ್,ಎನ್ ಸತೀಶ್ , ಮುಡುಬ ರಾಘವೇಂದ್ರ,ಸುಧೀಂದ್ರ ಪೂಜಾರಿ, ಹೊದಲ ಶಿವು,ಸಂತೋಷ್ ಆಶ್ರೀತಾ,ಜಿ ಆರ್ ಗೋಪಾಲಕೃಷ್ಣ ,ಮಳವಳ್ಳಿ ಮಂಜುನಾಥ್,ಮುರಳೀಧರ ಜಿ.ಸಂತೋಷ, ವೆಂಕಟೇಶ್  ನಾಯ್ಕ್, ನಗರ ನಿತಿನ್, ಗೀತಾ ಲಿಂಗಪ್ಪ, ನಾಗೇಶ್  ಇನ್ನಿತರರು ಇದ್ದರು.ಸೀತಮ್ಮ ಪ್ರಾರ್ಥಿಸಿ , ಅಶೋಕ್ ಕೆ. ಟಿ ನಿರೂಪಿಸಿದರು.

ಈ ಸಂಧರ್ಭದಲ್ಲಿ ಕೆರೆಹಳ್ಳಿ ಹೋಬಳಿಯ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳ ಪಟ್ಟಿ.

ಗೌರವಾಧ್ಯಕ್ಷರು :
ಸತೀಶ್ ಎನ್ ರಿಪ್ಪನ್ ಪೇಟೆ

ಅಧ್ಯಕ್ಷರು:
ಸಂತೋಷ್. ಅಶ್ರಿತ ಎಂಟರ್ಪ್ರೈಸಸ್

ಉಪಾಧ್ಯಕ್ಷರು :
ಸುಧೀಂದ್ರ ಪೂಜಾರಿ,
ಯೋಗೇಂದ್ರ ಅರಸಾಳು,
ಅಶ್ವಿನಿ ಸತೀಶ್,
ವೀಣಾ ದ್ವಾರಕೇಶ್,
ಕೆ ಜಿ ಬಸಪ್ಪ ಹೆಬ್ಬುರುಳಿ,

ಪ್ರಧಾನ ಕಾರ್ಯದರ್ಶಿ :
ಅರುಣ್ ಕಟ್ಟೆ ಬೆಳ್ಳೂರು

ಹೋಬಳಿ ಸಂಚಾಲಕ
ನಾರಿ ರವಿ

ಸಂಘಟನಾ ಕಾರ್ಯದರ್ಶಿಗಳು:

ದೇವರಾಜ್ ಅತ್ತಿಗಾರ್,
ಕಟ್ಟೆ ನಾಗಪ್ಪ,
ಸೀತಮ್ಮ,
ಸೋಮಶೇಖರ್ ಅರಗೋಡಿ,
ಶಿವಪ್ಪ ಅವಡೆ,
ರಮೇಶ್ ಹೆಬ್ಬಳ್ಳಿ,

ನಿರ್ದೇಶಕರು :
ಶರತ್ ಹರತಾಳು
ಶಶಿ ಕುಮಾರ್ ಎಂ,ಹರತಾಳು
ಅರುಣ ಹರಿದ್ರಾವತಿ,
ಉಮಾ ನಾರಾಯಣ,
ಮಂಜುನಾಥ್ ಕಳಸೆ,
ನಾರಾಯಣ ಹಾರೋಹಿತ್ಲು,
ಗಿರಿಜಾ ಮಂಜನಾಯ್ಕ,
ವಿನಯ್,
ಶೀಲಾ ಗಂಗನಾಯ್ಕ,
ನಾರಾಯಣ ಹೀಲಗೊಡು,
ತಿಮ್ಮಪ್ಪ ಬರುವೆ,
ಸುದೀರ್ ಪಿ,
ವೈ ಜೆ ಕೃಷ್ಣ.

Leave a Reply

Your email address will not be published. Required fields are marked *