ರಿಪ್ಪನ್‌ಪೇಟೆ : ಪಾದಚಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಗೆ ತೀವ್ರತರವಾದ ಗಾಯಗಳಾಗಿರುವ ಘಟನೆ ಪಟ್ಟಣದ ವಿನಾಯಕನಗರದ ಬಾಲಕಿಯರ ಹಾಸ್ಟೆಲ್ ಮುಂಭಾಗದಲ್ಲಿ ನಡೆದಿದೆ.
ಶಿವಮೊಗ್ಗ ರಾಮನಗರ ನಿವಾಸಿ ಸೈಯದ್ ಮುಜಾಹಿದ್ (34) ಗಂಭೀರ ಗಾಯಗೊಂಡಿದ್ದಾರೆ.
ವಿನಾಯಕನಗರದಿಂದ ರಿಪ್ಪನ್‌ಪೇಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ರಿಪ್ಪನ್‌ಪೇಟೆ ಕಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಎಡಗಾಲು ಮುರಿದಿದ್ದು ,ತಲೆ ಹಾಗೂ ಎಡಪಕ್ಕೆಗೆ ತೀವ್ರತರವಾದ ಪೆಟ್ಟಾಗಿದ್ದು ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗ ರಾಮನಗರ ನಿವಾಸಿ ಸೈಯದ್ ಮುಜಾಹಿದ್ ಪಟ್ಟಣದ ವಿನಾಯಕ ನಗರದಲ್ಲಿರುವ ಮಾವನ ಮನೆಗೆ ಬಂದು ಹಿಂದಿರುಗುತಿದ್ದಾಗ ಈ ಘಟನೆ ನಡೆದಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.