ರಿಪ್ಪನ್‌ಪೇಟೆ;-ಪಟ್ಟಣದ ಸಮಾಜ ಸೇವಕ ಹಾಗೂ ಕೊಡಗೈ ದಾನಿ ಹಾಸ್ಟಲ್ ಮಂಜಣ್ಣ ದಂಪತಿಗೆ ರಿಪ್ಪನ್‌ಪೇಟೆ ರೋಟರಿ ಸಂಸ್ಥೆಯವರು ಸನ್ಮಾನಿಸಿ ಗೌರವಿಸಿದರು.
ಪಟ್ಟಣದ ಸಮೀಪದ ಗವಟೂರು ನಿವಾಸಿಯಾದ ಹಾಸ್ಟಲ್ ಮಂಜಣ್ಣ ಮುವತ್ತು ವರ್ಷಗಳ ಕಾಲ ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತ ಹೊಂದಿ ತನ್ನ ಸೇವಾವಧಿಯಲ್ಲಿ ಉಳಿತಾಯ ಮಾಡಿದ ೬ ಲಕ್ಷ ಕ್ಕೂ ಅಧಿಕ ಮೊತ್ತದ ಹಣವನ್ನು “ಮುಕ್ತಿವಾಹಿನಿ’’ವಾಹನಕ್ಕೆ ವಿನಿಯೋಗಿಸಿ ಸಾರ್ವಜನಿಕರ ಸೇವೆಗಾಗಿ ರೋಟರಿ ಸಂಸ್ಥೆಯವರ ಮೂಲಕ ಲೋಕಾರ್ಪಣೆ ಮಾಡುವುದರೊಂದಿ ಎಲೆಮರೆಯ ಕಾಯಿಯಂತೆ ಎಡಗೈಗೆ ಕೊಟ್ಟಿರುವುದು ಬಲಗೈಗೆ ಗೊತ್ತಾಗದಂತೆ ಎಷ್ಟು ಸಮಾಜ ಮುಖಿ ಕಾರ್ಯವನ್ನು ಮಾಡಿರುವುದನ್ನು ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಬಿಲಕ್ಷ್ಮಣಗೌಡ ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಸಂಸ್ಥೆಯವರಿಂದ ಕೊಡಗೈ ದಾನಿ ಹಾಸ್ಟಲ್ ಮಂಜಣ್ಣ(ಹೆಚ್ ಎಲ್ ಚಂದ್ರಶೇಖರ್) ಮತ್ತು ಪತ್ನಿ ಅನಸೂಯ ಹಾಗೂ ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಪ್ಪನ್‌ಪೇಟೆ ರೋಟರಿ ಸಂಸ್ಥೆಯ ಅಧ್ಯಕ್ಷೆ ಪ್ರಮೀಳಾ ಎಲ್.ಗೌಡ ವಹಿಸಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜಣ್ಣ ರವರು ಬಡತನದಲ್ಲಿ ಹುಟ್ಟಿ ಬೆಳದ ನನಗೆ ಸಮಾಜದಲ್ಲಿನ ಬಡಜನತೆಯ ನೋವು ನಲಿವುಗಳ ಬಗ್ಗೆ ಹುಟ್ಟಿನಿಂದಲೇ ಅರಿವು ಇದೆ.ಪ್ರತಿಯೊಬ್ಬ ಮನುಷ್ಯನಿಗೆ ಸಮಾಜದ ಋಣವಿದ್ದು ಅ ಋಣ ತೀರಿಸಲು ಸಮಾಜ ಸೇವೆಯಿಂದ ಮಾತ್ರ ಸಾಧ್ಯವಿದ್ದು ಆ ದಸೆಯಲ್ಲಿ ಪ್ರಮಾಣಿಕವಾಗಿ ದುಡಿದ ಹಣದಿಂದ ಮುಕ್ತಿವಾಃಇನಿ ವಾಹನವನ್ನು ಸಮಾಜಕ್ಕೆ ಸಮರ್ಪಿಸಿರುವುದು ಪುಣ್ಯದ ಕಾರ್ಯವಾಗಿದೆ ಹಾಗೆಯೇ ನನ್ನ ಕಾರ್ಯಾವಧಿಯಲ್ಲಿ ನಿರ್ವಹಿಸಿದ ದಾವಣಗೆರೆ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ವಸತಿ ಶಾಲೆಗಳಲ್ಲಿದ್ದು ಶಿಕ್ಷಣ ಪಡೆಯುತ್ತಿದ್ದ ನೂರಾರು ಬಡ ಮಕ್ಕಳಿ ಆರ್ಥಿಕಾ ನೆರವು ನೀಡುವುದರ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿರುವುದು ನನಗೆ ತೃಪ್ತಿ ತಂದಿದೆ.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಗಣೇಶ್ ಎನ್.ಕಾಮತ್ ಎಂ.ಬಿ.ಮಂಜುನಾಥ್ ,ಹೆಚ್.ಎ.ರಾಧಾಕೃಷ್ಣ,ರಾಮಚಂದ್ರ ,ಜೆ.ರಾಧಾಕೃಷ್ಣ,ಕೃಷ್ಣರಾಜ್,ಹೆಚ್.ಎಂ .ವರ್ತೇಶ್,ತಾನಾರಾಮ್ ಪಾಟೀಲ್,ಸುದೀಂದ್ರಹೆಬ್ಬಾರ್,ಸಂಧ್ಯಾಕಾಮತ್,ರವೀಂದ್ರ ಬಲ್ಲಾಳ್,ಇನ್ನಿತರರು ಹಾಜರಿದ್ದರು.
ಪ್ರಾರಂಭದಲ್ಲಿ ಸಂದ್ಯಾ ಕಾಮತ್ ಪ್ರಾರ್ಥಿಸಿದರು.ಎಂ.ಬಿ.ಲಕ್ಷ್ಮಣಗೌಡ ಸ್ವಾಗತಿಸಿ,ಸಬಾಸ್ಟಿನ್ ಮಾಥ್ಯೂಸ್ ನಿರೂಪಿಸಿ,ಸವಿತಾರಾಧಾಕೃಷ್ಣ ವಂದಿಸಿದರು.
ಇದೇ ಸಂದರ್ಭದಲ್ಲಿ ಆಯ್ದ ಬಡ ಕುಟುಂಬಕ್ಕೆ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಲಾಯಿತು.