ಪುರಾಣ ಪ್ರಸಿದ್ಧ ಚಂದ್ರಗುತ್ತಿ ರೇಣುಕಾಂಬ ದೇವಾಲಯ ವಿರೂಪಗೊಳಿಸಿದ ದುಷ್ಕರ್ಮಿಗಳು|chandragutti temple
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಾಲಯವನ್ನು ದುಷ್ಕರ್ಮಿಗಳು ವಿರೂಪ ಗೊಳಿಸಿದ್ದಾರೆ. ದೇವಾಲಯದ ಬಾಗಿಲು ಒಡೆದು ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದ ಕಿಡಿಗೇಡಿಗಳು, ದೇವಾಲಯದ ಗರ್ಭಗುಡಿಯಲ್ಲಿ ಇರುವ ಮೂಲ ದೇವರ ಬೆಳ್ಳಿಯ ಹೊದಿಕೆಯನ್ನು ಹೊರ ಎಸೆದಿದ್ದಾರೆ. ಅಲ್ಲದೇ ದೇವಾಲಯದಲ್ಲಿರುವ ಹುಂಡಿ ಹಾಗೂ ಪೂಜಾ ಸಾಮಾಗ್ರಿಗಳನ್ನು ಚೆಲ್ಲಾಪಿಲ್ಲಿ ಗೊಳಿಸಿದ್ದಾರೆ. ದೇವರ ಬೆಳ್ಳಿ ಮುಖವಾಡವನ್ನು ಗರ್ಭಗುಡಿಯಿಂದ ದೇವಸ್ಥಾನದ ಹೊರಗಡೆ ವರಂಡದಲ್ಲಿ ಎಸೆದಿದ್ದು, ಕಳ್ಳತನ ಮಾಡುವ ಉದ್ದೇಶ ಇರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದ ಕೆಳಭಾಗದಲ್ಲಿರುವ…