ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಾಲಯವನ್ನು ದುಷ್ಕರ್ಮಿಗಳು ವಿರೂಪ ಗೊಳಿಸಿದ್ದಾರೆ.
ದೇವಾಲಯದ ಬಾಗಿಲು ಒಡೆದು ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದ ಕಿಡಿಗೇಡಿಗಳು, ದೇವಾಲಯದ ಗರ್ಭಗುಡಿಯಲ್ಲಿ ಇರುವ ಮೂಲ ದೇವರ ಬೆಳ್ಳಿಯ ಹೊದಿಕೆಯನ್ನು ಹೊರ ಎಸೆದಿದ್ದಾರೆ.
ಅಲ್ಲದೇ ದೇವಾಲಯದಲ್ಲಿರುವ ಹುಂಡಿ ಹಾಗೂ ಪೂಜಾ ಸಾಮಾಗ್ರಿಗಳನ್ನು ಚೆಲ್ಲಾಪಿಲ್ಲಿ ಗೊಳಿಸಿದ್ದಾರೆ.
ದೇವರ ಬೆಳ್ಳಿ ಮುಖವಾಡವನ್ನು ಗರ್ಭಗುಡಿಯಿಂದ ದೇವಸ್ಥಾನದ ಹೊರಗಡೆ ವರಂಡದಲ್ಲಿ ಎಸೆದಿದ್ದು, ಕಳ್ಳತನ ಮಾಡುವ ಉದ್ದೇಶ ಇರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನದ ಕೆಳಭಾಗದಲ್ಲಿರುವ ತ್ರಿಶೂಲ ಭೈರವೇಶ್ವರ ದೇವಸ್ಥಾನಕ್ಕೂ ದುಷ್ಕರ್ಮಿಗಳು ನುಗ್ಗಿದ್ದಾರೆ.
ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.