ರಿಪ್ಪನ್ ಪೇಟೆ : ಪಟ್ಟಣದ ಗುಡ್ ಶೆಫರ್ಡ್ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಡಗರ ಹಾಗೂ ಸಂಭ್ರಮದಿಂದ ವಿನೂತನವಾಗಿ ಆಚರಿಸಲಾಯಿತು.
ಮಕ್ಕಳಿಂದ ಮಕ್ಕಳಿಗಾಗಿ ಆಯೋಜನಗೊಂಡ ಈ ಕಾರ್ಯಕ್ರಮವು ಶಿಕ್ಷಕರ ಹಾಗೂ ಪೋಷಕರ ವರ್ಗದವರ ಮನಸೂರೆಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆ. ಕಾರ್ಯಕ್ರಮದ ಪ್ರಾಸ್ತವಿಕ ನುಡಿ, ಕಾರ್ಯಕ್ರಮದ ಮುಖ್ಯ ಅತಿಥಿಗಳು, ಕಾರ್ಯಕ್ರಮದಲ್ಲಿನ ಪ್ರಾರ್ಥನೆ ನಿರೂಪಣೆ, ಸ್ವಾಗತ,ಎಲ್ಲಾವನ್ನು ಮಕ್ಕಳೇ ನೆರವೇರಿಸಿದರು.
ಮಕ್ಕಳಿಂದ ವಿವಿಧ ಛದ್ಮವೇಷ, ಏಕಪಾತ್ರಾಭಿನಯ, ಹಾಡು, ಡಾನ್ಸ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ವಿದ್ಯಾರ್ಥಿಗಳಿಂದ ದೀಪ ಬೆಳಗಿಸುವುದರ ಮೂಲಕ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಾಯಿತು
ಅಧ್ಯಕ್ಷತೆಯನ್ನು ಆರಾಧ್ಯ ಎಸ್. ಎಂ.ವಹಿಸಿದ್ದರು.ಮುಖ್ಯ ಅತಿಥಿಗಳಾಗಿ
ಶಾಜಿಯ ,ನಿಶೆಲ್ ಡಿ ಮೇಲ್ಲೋ,ಅನೀಸ್ ,ಪ್ರತಾಪ್,ಶೈಬಾ
ನಿತಿನ್,ಶಯೋನ್ ಭಾಗವಹಿಸಿದ್ದರು.
ವಿವಿದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂಧರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ನಿರೂಪಣೆ ಧಾತ್ರಿ ಡಿ.ಭಗತ್ ನೆರವೇರಿಸಿದರು.
ಸ್ವಾಗತ ಮೊಹಮ್ಮದ್ ಅದ್ನಾನ್ ,ವಂದನಾರ್ಪಣೆ ಶಫಾ ನೆರವೇರಿಸಿದರು.