ತೀರ್ಥಹಳ್ಳಿಯ ನೂತನ ಡಿವೈಎಸ್ ಪಿ ಆಗಿ ಅರವಿಂದ್ ಕಲಗುಜ್ಜಿ
ಶಿವಮೊಹ್ಗ: ಡಿವೈಎಸ್ಪಿ ಗಜಾನನ ವಾಮನ ಸುತಾರ ವರ್ಗಾವಣೆಯಿಂದ ಖಾಲಿ ಇದ್ದ ತೀರ್ಥಹಳ್ಳಿ ಡಿವೈಎಸ್ ಪಿ ಸ್ಥಾನಕ್ಕೆ ಕಾರ್ಕಳದಲ್ಲಿ ಡಿವೈಎಸ್’ಪಿ ಯಾಗಿ ಕಾರ್ಯ ನಿರ್ವಹಿಸುತಿದ್ದ ಅರವಿಂದ್ ಕಲಗುಜ್ಜಿ ರವರನ್ನು ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ.
ತೀರ್ಥಹಳ್ಳಿಯಲ್ಲಿ ಈ ಹಿಂದೆ ಇದ್ದ ಡಿವೈಎಸ್ ಪಿ ಗಜಾನನ ವಾಮನ ಸುತಾರ ಅವರನ್ನು ತೀರ್ಥಹಳ್ಳಿಯಿಂದ ಬಾಗಲಕೋಟೆಗೆ ವರ್ಗಾವಣೆ ಮಾಡಿ ಸರ್ಕಾರ ಅದೇಶಿಸಿತ್ತು. ಸುಮಾರು ಮೂರು ತಿಂಗಳ ನಂತರ ನೂತನ ಡಿವೈಎಸ್’ಪಿ ಯನ್ನು ನೇಮಕಗೊಳಿಸಿ ಆದೇಶಿಸಲಾಗಿದೆ.
ಕಾರ್ಕಳದಲ್ಲಿ ಡಿವೈಎಸ್’ಪಿ ಯಾಗಿದ್ದ ಅರವಿಂದ್ ಕಲಗುಜ್ಜಿ ಅವರನ್ನು ತೀರ್ಥಹಳ್ಳಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದ್ದು ಶೀಘ್ರದಲ್ಲಿಯೇ ಚಾರ್ಜ್ ಸ್ವೀಕರಿಸಲಿದ್ದಾರೆ