ಅಪಘಾತಪಡಿಸಿದ್ದನ್ನು ಪ್ರಶ್ನಿಸಿದ್ದಕ್ಕೆ NDRF ಸಿಬ್ಬಂದಿಗಳಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ.! – ಅಷ್ಟಕ್ಕೂ ಅಲ್ಲಿ ನಡೆದಿದ್ದೇನು..!!??
ಹೊಸನಗರ: ಡಿಸೇಲ್ ಹಾಕಿಸುತ್ತಿದ್ದ ಪಿಕಪ್ ವಾಹನಕ್ಕೆ ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ತಂಡ (NDRF ) ದ ವಾಹನ ಡಿಕ್ಕಿ ಹೊಡೆದಿದ್ದಲ್ಲದೆ, , ಅಪಘಾತದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಅದರ ಸಿಬ್ಬಂದಿಗಳು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಮೂಗಿನಲ್ಲಿ ರಕ್ತ ಬರುವ ಹಾಗೇ NDRF ಸಿಬ್ಬಂದಿಗಳು ಹಲ್ಲೆ ಮಾಡಿದ್ದಾರೆ ಎಂದು ವ್ಯಕ್ತಿ ಆರೋಪಿಸಿದ್ದಾರೆ. ಹೊಸನಗರ ಪೆಟ್ರೋಲ್ ಬಂಕ್ ನಲ್ಲಿ ಘಟನೆ ನಡೆದಿದೆ. ಕುಮಾರ್ ಎನ್ನುವ ವ್ಯಕ್ತಿ ಮೇಲೆ ಹಲ್ಲೆ ನಡೆದಿದೆ.
ನಡೆದಿದ್ದೇನು..!!?
ಮಹಾರಾಷ್ಟ್ರದಿಂದ ಹೊಸನಗರ ಅಗ್ನಿಶಾಮಕ ಸಿಬ್ಬಂದಿಗಳಿಗೆ ತರಬೇತಿ ನೀಡಲು NDRF ಟೀಂ ಬಂದಿತ್ತು. ಹೊಸನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ಡಿಸೇಲ್ ಹಾಕಿಸಲು ನಿಂತಿದ್ದ ಪಿಕಪ್ ವಾಹನಕ್ಕೆ NDRF ವಾಹನ ಡಿಕ್ಕಿಯಾಗಿದೆ. ಈ ಸಂಧರ್ಭದಲ್ಲಿ ಯಾಕೆ ಡಿಕ್ಕಿ ಮಾಡಿದ್ದೀರಾ ಎಂದು ಪಿಕಪ್ ಡ್ರೈವರ್ ಪ್ರಶ್ನಿಸಿದ್ದಾನೆ ಈ NDRF ಸಿಬ್ಬಂದಿಯೊಬ್ಬ ಅವಾಚ್ಯ ಪದಬಳಕೆ ಮಾಡಿದ್ದಾನೆ ಇದೇ ಸಂಧರ್ಭದಲ್ಲಿ ಪಕ್ಕದಲ್ಲಿ ನಿಂತಿದ್ದ ಕುಮಾರ್ ಎಂಬಾತ ನೀವೆ ಅವನ ವಾಹನಕ್ಕೆ ಡಿಕ್ಕಿ ಹೊಡೆದು ಯಾಕೆ ಆತನಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತೀರಾ ಎಂದು ಪ್ರಶ್ನಿಸಿದ್ದಾನೆ.ಈ ಸಂಧರ್ಭದಲ್ಲಿ ರೊಚ್ಚಿಗೆದ್ದ NDRF ವಾಹನದಲ್ಲಿದ್ದವರು ಕೆಳಗೆ ಇಳಿದು ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕುಮಾರ್ ದೂರು ನೀಡಿದ್ದಾನೆ
ಪ್ರಶ್ನೆ ಮಾಡಿದಕ್ಕೆ ನೀನ್ ಯಾರು ಪ್ರಶ್ನೆ ಮಾಡಲು ಎಂದು ಅವಾಚ್ಚ ಶಬ್ದಗಳಿಂದ ನಿಂದಿಸಿ ಸಿಬ್ಬಂದಿಗಳು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಕುಮಾರ್ ನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.