ಮಾರನಗದ್ದೆ-ಹೆಂಡೆಗದ್ದೆ ಸಂಪರ್ಕಿಸುವ ಶಂಕರಹಳ್ಳ ಕಾಲುಸಂಕಕ್ಕೆ ಶಾಸಕರಿಂದ ಶಂಕುಸ್ಥಾಪನೆ
ರಿಪ್ಪನ್‌ಪೇಟೆ;-ಸಮೀಪದ ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾರನಗದ್ದೆ-ಹೆಂಡೆಗದ್ದೆ ಸಂಪರ್ಕಿಸುವ ಶಂಕರಹಳ್ಳ ಕಾಲುಸಂಕ ನಿರ್ಮಾಣಕ್ಕೆ ಸರ್ಕಾರದಿಂದ ೧೭ ಲಕ್ಷ ರೂ ಅನುದಾನಬಿಡುಗಡೆಯಾಗಿದ್ದು ಈ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೀಡಿದರು.
ಮುಳುಗಡೆ ರೈತರೆ ಹೆಚ್ಚು ವಾಸಿಸುತ್ತಿರುವ ಈ ಗ್ರಾಮಗಳಿಗೆ ಸರಿಯಾದ ಸಂಪರ್ಕ ರಸ್ತೆ ಇಲ್ಲದೆ ಮಳೆಗಾಲದಲ್ಲಿ ಹಳ್ಳ ದಾಟಿಕೊಂಡು ಬರುವುದು ಕಷ್ಟಕರವಾಗಿತು ಶಾಲಾ ಕಾಲೇಜ್ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ದೂರದ ಬೆಳ್ಳೂರು ರಿಪ್ಪನ್‌ಪೇಟೆ ಆರಸಾಳು ಶಿವಮೊಗ್ಗ ಹೋಗಿಬರಲು ಈ ಹಳ್ಳದಲ್ಲಿ ಇಳಿದು ಹತ್ತಿ ಬರಬೇಕಾದ ಅನಿರ್ವಾತೆ ಇದ್ದು ಬಹುವರ್ಷದ ಬೇಡಿಕೆಯಂತೆ ನಾನು ಶಾಸಕನಾದ ಮೇಲೆ ಸರ್ಕಾರದಿಂದ ೧೭ ಲಕ್ಷ ರೂ ವೆಚ್ಚದಲ್ಲಿ ಕಾಲಸಂಕ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿ ಆ ಕಾಮಗಾರಿ ಸುಸಜ್ಜಿತವಾಗಿ ಶೀಘ್ರದಲ್ಲಿ ಪೂರ್ಣಗೊಳಿಸಿ ಓಡಾಡಕ್ಕೆ ಅನುಕೂಲಕಲ್ಪಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿಹಾಲೇಶ್,ಎಪಿಎಂ.ಸಿ.ಮಾಜಿ ಆಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು,ಬೆಳ್ಳೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹೆಚ್.ಎಂ.ಯೋಗೀಶ್, ಅವಡೆ ಶಿವಪ್ಪ,ಶ್ರೀಧರ, ಡಿ.ಈ.ಮಧುಸೂಧನ್,ಸಣ್ಣಕ್ಕಿ ಮಂಜು, ಉಂಡುಗೋಡು
ನಾಗಪ್ಪ,ಕಟ್ಟೆನಾಗಪ್ಪ,ಆಶೀಫ್,ರವೀಂದ್ರಕೆರೆಹಳ್ಳಿ,ಲೋಕೋಪಯೋಗಿ ಇಲಾಖೆಯ ಆಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಅಕ್ರಮ ಮದ್ಯ ತಡೆಗೆ ಮಹಿಳೆಯರಿಂದ ಶಾಸಕರಿಗೆ ಮನವಿ
ರಿಪ್ಪನ್‌ಪೇಟೆ : ಬೆಳ್ಳೂರು-ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಹಲವು ಗ್ರಾಮಗಳಲ್ಲಿ ಆನಧಿಕೃತವಾಗಿ ಮಧ್ಯಮಾರಾಟ ಮಾಡುತ್ತಿದ್ದಾರೆ.ಇದನ್ನು ತಕ್ಷಣ ತಡೆಹಿಡಿಯುವ ಮೂಲಕ ಗ್ರಾಮದಲ್ಲಿ ಮಧ್ಯಮಾರಾಟ ಮಾಡದಂತೆ ಕ್ರಮ ಕೈಗೊಳ್ಳುವಂತೆ ಹಾರೋಹಿತ್ತಲು ಮತ್ತಲಿಜಡ್ಡು ಗುಬ್ಬಿಗಾ ಗುಳಿಗುಳಿಶಂಕರ ಸ್ವಸಹಾಯ ಸಂಘದ ಮಹಿಳೆಯವರು ಶಾಸಕ ಗೋಪಾಲಕೃಷ್ಣ ಬೇಳೂರಿಗೆ ಮನವಿ ಮೂಲಕ ಆಗ್ರಹಿಸಿದರು.
ಮಹಿಳೆಯರ ಮನವಿ ಸ್ವೀಕರಿಸಿ ತಕ್ಷಣ ಸ್ಥಳದಲ್ಲಿದ್ದ ಪಿಎಸ್‌ಐ ಪ್ರವೀಣ್ ಎಸ್.ಪಿ.ಯವರಿಗೆ ಇಂದಿನಿಂದಲೇ ಯಾವಯಾವ ದಿನಸಿ ಅಂಗಡಿಗಳಲ್ಲಿ ಆಕ್ರಮ ಮಧ್ಯಮಾರಾಟ ಮಾರಾಟಮಾಡಲಾಗುತ್ತಿದ್ದೆ ಎಂಬುದನ್ನು ಅಬಕಾರಿ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಪತ್ತೆ ಮಾಡಿ ಕ್ರಮ ಕೈಗೊಳ್ಳುವುದರೊಂದಿಗೆ ಮಧ್ಯಮಾರಾಟವನ್ನು ತಡೆಹಿಡಿಯಲು ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿಹಾಲೇಶ್,ಎಪಿಎಂ.ಸಿ.ಮಾಜಿ ಆಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು,ಬೆಳ್ಳೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹೆಚ್.ಎಂ.ಯೋಗೀಶ್, ಅವಡೆ ಶಿವಪ್ಪ,ಶ್ರೀಧರ, ಡಿ.ಈ.ಮಧುಸೂಧನ್,ಸಣ್ಣಕ್ಕಿ ಮಂಜು, ಉಂಡುಗೋಡು ನಾಗಪ್ಪ,ಕಟ್ಟೆನಾಗಪ್ಪ,ಆಶೀಫ್, ರವೀಂದ್ರಕೆರೆಹಳ್ಳಿ,ಲೋಕೋಪಯೋಗಿ ಇಲಾಖೆಯ ಆಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.