Headlines

ಶಿಮೂಲ್ – ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ

ಶಿಮೂಲ್ – ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟದ (Shimul) ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಸೋಮವಾರ ನಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ ಒಲಿದಿದೆ. ಶಿಮೂಲ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧವಾಗಿ ಅಯ್ಕೆಯಾಗಿದೆ. ಅಧ್ಯಕ್ಷರಾಗಿ ವಿದ್ಯಾಧರ ಹಾಗೂ ಉಪಾಧ್ಯಕ್ಷರಾಗಿ ಚೇತನ್ ಎಸ್ ನಾಡಿಗರ್ ಅವಿರೋಧ ಆಯ್ಕೆಯಾಗಿದ್ದಾರೆ. ಹೊಸನಗರದಿಂದ ಶಿಮೂಲ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ವಿದ್ಯಾಧರ್ ಮತ್ತು ದಾವಣಗೆರೆ ವಿಭಾಗದಿಂದ ಚೇತನ್ ಎಸ್ ನಾಡಿಗರ್…

Read More

ಬಿಎಸ್​ವೈ ಜನ್ಮದಿನದಂದೇ ಡೈರಿ ಬಾಂಬ್ ಸಿಡಿಸಿದ್ರಾ ಪುತ್ರಿ ಅರುಣಾದೇವಿ – ಖುರ್ಚಿ ಅಲ್ಲಾಡಿಸಲು ಎಂತೆಂತಹ ಕೃತ್ಯಗಳು ನಡೆಸಿದ್ದಾರೆನ್ನುವುದನ್ನು ಜೈಲಿನಲ್ಲಿದ್ದಾಗ ಡೈರಿ ಬರೆದಿದ್ದಾರೆ..!!!|BSY

ಖುರ್ಚಿ ಅಲ್ಲಾಡಿಸಲು ಎಂತಹ ಕೃತ್ಯಗಳು, ಜೈಲಿನಲ್ಲಿದ್ದಾಗ ಡೈರಿ ಬರೆದಿದ್ದಾರೆ:  ಶಿವಮೊಗ್ಗ: ಮಾಜಿ ಸಿಎಂ ಯಡಿಯೂರಪ್ಪನವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 80ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆ ಈಗಾಗಲೇ ಶಿವಮೊಗ್ಗದಲ್ಲಿ ಮನೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯಡಿಯೂರಪ್ಪನವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇನ್ನು ವಿಶೇಷ ಅಂದ್ರೆ ಪ್ರಧಾನಿ ನರೇಂದ್ರ ಮೋದಿ ಬರ್ತ್​ಡೇ ದಿನವೇ ಶಿವಮೊಗ್ಗ ಏರ್​ಪೋರ್ಟ್​ ಲೋಕಾರ್ಪಣೆ ಮಾಡುವ ಮೂಲಕ ಯಡಿಯೂರಪ್ಪನವರಿಗೆ ಗಿಫ್ಟ್​ ನೀಡಲಿದ್ದಾರೆ.  ಅಲ್ಲದೇ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆನ್ನುವುದು ಯಡಿಯೂರಪ್ಪನವರ ಕನಸು ಸಹ ಆಗಿತ್ತು. ಇದೀಗ…

Read More

ಪ್ರೀತಿ ಮತ್ತು ಕ್ಷಮೆಯಿಂದ ಜಗತ್ತನ್ನೇ ಗೆಲ್ಲಬಹುದು – ಧರ್ಮಗುರು ರೋಷನ್ ಪಿಂಟೋ|church

ಪ್ರೀತಿ ಮತ್ತು ಕ್ಷಮೆಯಿಂದ ಜಗತ್ತನ್ನೇ ಗೆಲ್ಲಬಹುದು – ಧರ್ಮಗುರು ರೋಷನ್ ಪಿಂಟೋ ರಿಪ್ಪನ್‌ಪೇಟೆ : ಪ್ರೀತಿ ಮತ್ತು ಕ್ಷಮೆಯಿಂದ ಜಗತ್ತನ್ನೇ ಗೆಲ್ಲಬಹುದು ಎಂದು ತೋರಿಸಿಕೊಟ್ಟ ಪ್ರಭು ಏಸು ಸ್ವಾಮಿಯವರ ಶುಭ ಸಂದೇಶ ಇಂದಿಗೂ ಪ್ರಸ್ತುತ ಎಂದು ಶಿವಮೊಗ್ಗ ಮಲ್ಟಿಪಲ್ ಸೋಷಿಯಲ್ ಸರ್ವಿಸ್ ನಿರ್ದೇಶಕರಾದ ಧರ್ಮಗುರು ರೋಷನ್ ಪಿಂಟೋ ಹೇಳಿದರು. ಪಟ್ಟಣದ ಗುಡ್ ಶೆಪರ್ಡ್ ಚರ್ಚ್ ನ ವಾರ್ಷಿಕ ಹಬ್ಬದ ಅಂಗವಾಗಿ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶುಭ ಸಂದೇಶವನ್ನು ನೀಡಿದ ಅವರು ಸಮಾಜದಲ್ಲಿನ ಪ್ರತಿಯೊಬ್ಬರು ಪ್ರೀತಿಯನ್ನು…

Read More

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ ತೀರ್ಥಹಳ್ಳಿ ತಾಲ್ಲೂಕಿನ ತೂದೂರು ಸರ್ಕಾರಿ ಶಾಲೆಯ ಹಿಂಭಾಗದ ತುಂಗಾನದಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದೆ. ಶವ ಪೂರ್ಣ ಪ್ರಮಾಣದಲ್ಲಿ ಕೊಳೆತಿದ್ದು ಮುಖ, ದೇಹವನ್ನು ಗುರುತಿಸಲು ಸಾಧ್ಯವಾಗದ ಹಂತಕ್ಕೆ ತಲುಪಿದೆ. ನದಿಗೆ ಬಿದ್ದು ಅನೇಕ ದಿನಗಳು ಕಳೆದಿರುವ ಅನುಮಾನ ವ್ಯಕ್ತವಾಗುತ್ತಿದೆ. ನದಿ ಹರಿಯುತ್ತಿದ್ದ ಸಂದರ್ಭದಲ್ಲಿ ತೇಲಿ ಬಂದಿರುವ ಶಂಕೆ ಕೂಡ ಇದೆ. ಸ್ಥಳೀಯರು ಗುರುತು ಸಿಗದ ದೇಹವನ್ನು ವೀಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ಮಾಡಿದ್ದಾರೆ. ಮಾಳೂರು ಪೊಲೀಸ್‌…

Read More

Hosanagara | ಸರ್ಕಾರಿ ಶಾಲೆ ಉಳಿಸಿ, ಬೆಳೆಸಲು ವಿದ್ಯಾವಂತ ಯುವಸಮೂಹ ಮುನ್ನಲೆಗೆ ಬರುವುದು ಅತ್ಯಗತ್ಯ – ವಲಯ ಅರಣ್ಯಾಧಿಕಾರಿ ರಾಘವೇಂದ್ರ

ಸರ್ಕಾರಿ ಶಾಲೆ ಉಳಿಸಿ, ಬೆಳೆಸಲು ವಿದ್ಯಾವಂತ ಯುವಸಮೂಹ ಮುನ್ನಲೆಗೆ ಬರುವುದು ಅತ್ಯಗತ್ಯ – ವಲಯ ಅರಣ್ಯಾಧಿಕಾರಿ ರಾಘವೇಂದ್ರ  ಪ್ರಸ್ತುತ ಕಾಲದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ವಿದ್ಯಾವಂತ ಯುವಕರು ಮುನ್ನಲೆಗೆ ಬರಬೇಕು ಎಂದು ಹೊಸನಗರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ರವರು ಹೇಳಿದರು. ಹೊಸನಗರ ತಾಲೂಕಿನ ಮಾರುತಿಪುರ ಗ್ರಾಪಂ ವ್ಯಾಪ್ತಿಯ ಹೊವಿನಕೋಣೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ “ಕನ್ನಡ ಶಾಲೆಯ ಅಭಿಮಾನ, ಸುಣ್ಣ ಬಣ್ಣದ ಅಭಿಯಾನ”  ಕಾರ್ಯಕ್ರಮಕ್ಕೆ ಬಣ್ಣ ಹೊಡೆಯುವ ಮೂಲಕ ಚಾಲನೆ…

Read More

ಹೈಕಮಾಂಡ್ ಬುಲಾವ್ ಹಿನ್ನಲೆ ಗೃಹ ಸಚಿವ ಆರಗ ಜ್ಞಾನೇಂದ್ರ ದಿಡೀರ್ ದೆಹಲಿಗೆ : ಕೈ ತಪ್ಪುತ್ತಾ ಗೃಹ ಸಚಿವ ಸ್ಥಾನ ??????

ರಾಜ್ಯ ರಾಜಕಾರಣ ದೆಹಲಿ ಅಂಗಳಕ್ಕೆ ಶಿಫ್ಟ್ ಆಗಿದೆ. ಮಹತ್ವದ ಬೆಳವಣಿಗೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ದೆಹಲಿಗೆ ತೆರಳಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇವತ್ತು ದಿಢೀರ್ ದೆಹಲಿಗೆ ತೆರಳಿದ್ದಾರೆ. ಸಂಜೆ ವೇಳೆಗೆ ಅವರು ದೆಹಲಿಗೆ ವಿಮಾನ  ಹತ್ತಿದ್ದಾರೆ. ಹೈಕಮಾಂಡ್ ಬುಲಾವ್ ಮೇರೆಗೆ ಆರಗ ಜ್ಞಾನೇಂದ್ರ ಅವರು ದೆಹಲಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಸಂಪುಟ ಪುನರ್ ರಚನೆಯ ವೇಳೆ ಗೃಹ ಸಚಿವರ ಕುರ್ಚಿ ಅಲುಗಾಡುವ…

Read More

ರಿಪ್ಪನ್ ಪೇಟೆ : ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಶಾಸಕ ಹರತಾಳು ಹಾಲಪ್ಪ

ರಿಪ್ಪನ್ ಪೇಟೆ : ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ರವರು ಗುರುವಾರ ಕೆರೆಹಳ್ಳಿ ಹೋಬಳಿಯಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಗಳ ಪಟ್ಟಿ : 10:00 AM:- ರಿಪ್ಪನಪೇಟೆ ಗ್ರಾ.ಪಂ, ಕುಕ್ಕಳಲೆ ರಸ್ತೆಯಿಂದ ನಿಂಗಪ್ಪ ಪುರುಷೋತ್ತಮ ಮನೆಯವರೆಗಿನ ಎಸ್.ಸಿ ಕಾಲೋನಿ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ. (20 ಲಕ್ಷ) 10:30 AM:- ತಮ್ಮಡಿಕೊಪ್ಪ ಧನಂಜಯ್ ಇವರ ಮನೆ ಭೇಟಿ. 11:00…

Read More

ಮೇ 13 ರಿಂದ ಬಿದನೂರಿನ ಇತಿಹಾಸ ಪ್ರಸಿದ್ದ ಮಾಷುಂಷಾ ವಲಿಯುಲ್ಲಾ ದರ್ಗಾದ ಉರೂಸ್ ಸಮಾರಂಭ :

ಹೊಸನಗರ : ತಾಲೂಕಿನ ಬಿದನೂರು ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಹಝ್ರತ್ ಶೇಖುಲ್ ಮಾಷುಂಷಾ ವಲಿಯುಲ್ಲಾ ದರ್ಗಾದ 2022-23 ರ ಉರೂಸ್‌ ಸಮಾರಂಭದ ದಿನಾಂಕ ನಿಗದಿಯಾಗಿದೆ. ಇಂದು ದರ್ಗಾ ಸಮಿತಿ ಅಧ್ಯಕ್ಷರಾದ ಜೆ ಮಹಮ್ಮದ್ ಸಾಬ್ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ಮೇ 13,14,15,16 ರ ನಾಲ್ಕು ದಿನ ಉರೂಸ್ ಕಾರ್ಯಕ್ರಮ ನಡೆಸಲು, ಉರೂಸ್ ಸಮಾರಂಭಕ್ಕೆ ಮಂತ್ರಿಗಳು ಹಾಗೂ ಶಾಸಕರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಉರೂಸ್ ಸಮಾರಂಭವನ್ನು ಸರ್ಕಾರ ಸುತ್ತೋಲೆಯಂತೆ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ವಿನಾಯಕ ಉಡುಪ…

Read More

Sagara | ಲಕ್ಷಾಂತರ ರೂ ಮೌಲ್ಯದ ಅಕ್ರಮ ಮದ್ಯ ವಶ, ಪ್ರಕರಣ ದಾಖಲು

Sagara | ಲಕ್ಷಾಂತರ ರೂ ಮೌಲ್ಯದ ಅಕ್ರಮ ಮದ್ಯ ವಶ, ಪ್ರಕರಣ ದಾಖಲು ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಮಾ. 28 ರ ರಾತ್ರಿ ಸಾಗರ ಮಾರ್ಗವಾಗಿ ಬರುತ್ತಿದ್ದ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ಅಂದಾಜು ರೂ. 2,23,046 ಮೌಲ್ಯದ ಪರವಾನಗಿ ಇಲ್ಲದ ಒಟ್ಟು 51.84 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಹಾಗೂ ಅಬಕಾರಿ ಉಪ ಅಧೀಕ್ಷಕರು, ಸಾಗರ ಉಪ ವಿಭಾಗರವರ…

Read More

ಕುಟುಂಬದೊಂದಿಗೆ ಆಗಮಿಸಿ ಮತ ಚಲಾಯಿಸಿದ ಆರಗ ಜ್ಞಾನೇಂದ್ರ|election

ತೀರ್ಥಹಳ್ಳಿ:  ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಗುಡ್ಡೆಕೊಪ್ಪದ ಸರ್ಕಾರಿ ಶಾಲೆಗೆ ಆಗಮಿಸಿ ಕುಟುಂಬದ ಜೊತೆ ಬಂದು ಮತ ಚಲಾಯಿಸಿದರು. ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಒಂದೇ ಪಕ್ಷದಿಂದ ದಾಖಲೆಯ ಹತ್ತನೇ ಬಾರಿಗೆ ಸ್ಪರ್ಧಿಸುತ್ತಿರುವ,  ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಇಂದು ತಮ್ಮ ಕುಟುಂಬದ ಸದಸ್ಯರೊಂದಿಗೆ, ಮತ ಗಟ್ಟೆಗೆ ಆಗಮಿಸಿ, ಮತದಾನ ಮಾಡಿದರು. ಹಾಗೂ ಪ್ರತಿಯೊಬ್ಬರು ಕೂಡ ತಪ್ಪದೆ ಮತ ಚಲಾಯಿಸಿ ಎಂದು ಮನವಿ ಮಾಡಿದರು.

Read More