w
Headlines
Home » ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು : ದಂಪತಿ ಸಾವು

ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು : ದಂಪತಿ ಸಾವು

GridArt 20241124 202328977.jpg

ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು : ದಂಪತಿ ಸಾವು

ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ನೀರು ತುಂಬಿದ ಹಳ್ಳಕ್ಕೆ ಬಿದ್ದ ಪರಿಣಾಮ ದಂಪತಿ ಸಾವನ್ನತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಐನಾಪೂರ ರಸ್ತೆಯಲ್ಲಿ ಸಂಭವಿಸಿದೆ.

ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಕುಪಿರೆ ಗ್ರಾಮದ ಆದರ್ಶ ಯುವರಾಜ ಪಾಂಡವ (27) ಈತನು ಫೋರ್ಡ್ ಕಾರ ಅನ್ನು ತೆಗೆದುಕೊಂಡು, ಮಂಗಸೂಳಿ- ಐನಾಪೂರ ರಸ್ತೆಯಲ್ಲಿ ಪ್ರಯಾಣಿಸುವಾಗ ರಸ್ತೆ ತಿರುವಿನಲ್ಲಿ ಕಾರಿನ ನಿಯಂತ್ರಣ ತಪ್ಪಿ ಪಕ್ಕದ ಹಳ್ಳಕ್ಕೆ ಮುಗುಚಿ ಬಿದ್ದಿದೆ.

ಸ್ಥಳದಲ್ಲಿಯೇ ಆದರ್ಶ(25) ಮತ್ತು ಆತನ ಪತ್ನಿ ಶಿವಾನಿ ಆದರ್ಶ ಪಾಂಡವ (20) ಮೃತಪಟ್ಟಿದ್ದಾರೆ.

ಕಾರಿನಲ್ಲಿ ಒಟ್ಟು ಮಕ್ಕಳು ಸೇರಿ ಏಳು ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು ರೂಪಾಲಿ ಗಾಡೇಕ‌ರ್, ಕುನಾಲ್ ಗಾಡೇಕರ, ರಾಜವೀರ ಪಾಂಡವ, ಅನವಿ ಪಾಂಡವ, ಪೂಜಾ ಬಾಮನೆ ಇವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.