Ripponpete | ವಿದ್ಯಾರ್ಥಿಗಳಿಗೆ ಮಾನವೀಯ ಗುಣಗಳೇ ಶಾಶ್ವತ – ಮಳಲಿ ಶ್ರೀಗಳು

ವಿದ್ಯಾರ್ಥಿಗಳಿಗೆ ಮಾನವೀಯ ಗುಣಗಳೇ ಶಾಶ್ವತ – ಮಳಲಿ ಶ್ರೀಗಳು

ರಿಪ್ಪನ್‌ಪೇಟೆ;-ಸುದ್ದಿಗಾಗಿ ಬದುಕುವುದು ಬೇಡ ಶುದ್ದವಾಗಿ ಬದುಕಿರಿ ಎಂದು ಮಳಲಿ ಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.

ರಿಪ್ಪನ್‌ಪೇಟೆಯ ಶ್ರೀ ಶಾರದ ರಾಮಕೃಷ್ಣ ವಿದ್ಯಾಲಯದವರು ಏರ್ಪಡಿಸಲಾದ ಪ್ರತಿಭಾ ಪುರಸ್ಕಾರ ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿ ನಿಂದಿಸುವವರಿಗೆಲ್ಲ ಉತ್ತರಿಸುತ್ತ ಕುಳಿತರೆ  ನೀವು ಅದೇ ಕೆಲಸ ಮಾಡುತ್ತಿರಬೇಕು.ನಿಂದಕರನ್ನು ಹಿಂದೆ ಬಿಡಿ ನೀವು ಮುಂದೆ ನಡೆಯಿರಿಎಂದು ತಿಳಿಹೇಳಿದರು.


ಜಗತ್ತಿನ ಯಾವ ವಿಶ್ವವಿದ್ಯಾಲಯ ಕಲಿಸದ ಪಾಠವನ್ನು ಹಸಿವು ಬಡತನ ಸೋಲು ನಮಗೆ ಕಲಿಸುತ್ತದೆ.ಅದ್ದರಿಂದ ತಿಳಿದು ಬದುಕು ಬಡತನ ಸಿರಿತನ ಇವೆರಡು ಶಾಶ್ವತವಲ್ಲ ನಿನ್ನಲ್ಲಿರುವಂತಹ ಮಾನವೀಯ ಗುಣಗಳೇ ಶಾಶ್ವತ ಎಂದರು .ವಿದ್ಯಾರ್ಥಿ ಜೀವನವು ಅಮೂಲ್ಯವಾದದ್ದು ಹಾಗಾಗಿ ಶುದ್ದವಾದ ವಿದ್ಯೆಯನ್ನು ಗಳಿಸಿ ಗುರು ಹಿರಿಯರಿಗೆ ಮಾತಾಪಿತೃಗಳಿಗೆ ಗೌರವ ಪೂರ್ವವಕ ಜೀವನ ಸಾಗಿಸುವುದೇ  ನಿಜವಾದ ಜೀವನ ಎಂದರು.


ತೀರ್ಥಹಳ್ಳಿ ಕ್ಷೇತ್ರದ ಶಾಸಕ ಮಾಜಿ ಸಚಿವ ಆರಗ ಜ್ಞಾನೇಂದ್ರ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಕ್ರೀಡಾ ಮತ್ತು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಕ್ರೀಡಾ ಸಾಧನೆ ಮಾಡಿದ ಪ್ರತಿಭಾನ್ವಿತರನ್ನು ಗೌರವಿಸಿ ವಿದ್ಯಾರ್ಥಿಗಲು ತಮ್ಮ ವಿದ್ಯಾರ್ಥಿ ದಸೆಯಲ್ಲಿ ಮಾಡುವ ಸಾಧನೆಗಳು ಎಂದಿಗೂ ಶಾಶ್ವತವಾಗಿ ಉಳಿಯುವುರೊಂದಿಗೆ ಮುಂದೆ ಬರುವ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಮೂಲಕ ಆವರಲ್ಲಿ ಕ್ರೀಡೆಯೊಂದಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಉತ್ತಮ ವೇದಿಕೆಯಾಗಲಿ ಎಂದ ಅವರು ತಮ್ಮ ವ್ಯಾಸಂಗದೊಂದಿಗೆ ಸುಸಂಸ್ಕೃತ ಶಿಕ್ಷಣವನ್ನು ಪಡೆದು ಉತ್ತಮರಾಗಿ ಎಂದು ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು.

ಶಾರದಾ ರಾಮಕೃಷ್ಣ ಶಾಲೆಯ ಸಂಸ್ಥಾಪಕ ಅಧ್ಯಕ್ಷ ದೇವರಾಜ್ ಆಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ, ನರಸಿಂಹ, ಇನ್ನಿತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಕ್ರೀಡೆ ಮತ್ತು ಪ್ರತಿಭಾ ಕಾರಂಜಿಯಲ್ಲಿ ಸಾಧನೆ ಮಾಡಿರುವ ಮಕ್ಕಳ ಪೋಷಕವರ್ಗವನ್ನು ಸನ್ಮಾನಿಸಿ ಗೌರವಿಸಲಾಯಿತು.

ಉತ್ತಮ ಜೀವನ ರೂಪಿಸಿಕೊಳ್ಳಲು  ಶಾಲೆಯಲ್ಲಿ  ಸಾಕಷ್ಟು ಅವಕಾಶಗಳಿವೆ


ಮಕ್ಕಳು ಶಾಲೆಯಲ್ಲಿ ಉತ್ತಮವಾದ ಜೀವನ ರೂಪಿಸಿಕೊಳ್ಳಲು ಅವಕಾಶವಿರುತ್ತದೆ.ಈ ಸಂದರ್ಭವನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ  ಪ್ರಗತಿ ಹೊಂದಲು ಪ್ರಯತ್ನ ಮಾಡಬೇಕು ಎಂದು ಕೋಣಂದೂರು ಬೃಹನ್ಮಠದ ಷ.ಬ್ರ.ಶ್ರೀಪತಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಜಿ ಹೇಳಿದರು.

ರಿಪ್ಪನ್‌ಪೇಟೆಯ ಶ್ರೀ ಶಾರದ ರಾಮಕೃಷ್ಣ ವಿದ್ಯಾಲಯದ 2023-24 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಮತ್ತು ಶ್ರೀಮಾತೆ ಶಾರದಾದೇವಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶಿರ್ವಚನ ನೀಡಿ  ಪ್ರತಿಯೊಬ್ಬ ವಿದ್ಯಾರ್ಥಿಯು ಒಳ್ಳೆಯ ಗುಣಬೆಳಸಿಕೊಂಡು ಉತ್ತಮವಾದ ಸಾಧನೆ ಮಾಡುವ ಮೂಲಕ  ಊರಿನ ರಾಜ್ಯದ ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು.ಮಕ್ಕಳು ಈ ದೇಶದ ಭವಿಷ್ಯ ಅವರು ಸರಿಯಾದ ಪಥದಲ್ಲಿ ನಡೆದಿದ್ದೇ ಅದರಲ್ಲಿ ನಮ್ಮ ದೇಶ ಸುಂದರ ಹಾಗೂ ಸದೃಢವಾಗಲು ಸಾಧ್ಯವೆಂದರು.

ಸಾಗರ ರಾಮಕೃಷ್ಣ ಆಶ್ರಮದ ಶ್ರೀಗಳು ಸಾನಿಧ್ಯ ವಹಿಸಿ ಅಶೀರ್ವಚನ ನೀಡಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಮೂಲಕ ಅವರ ಅಸಕ್ತಿಗೆ ಅನುಗುಣವಾಗಿ ಪ್ರೋತ್ಸಾಹಿಸುವ ಕಾರ್ಯ ಶಿಕ್ಷಕರದಾಗಬೇಕು ಎಂದರು.ಶಾರಧಾ ರಾಮಕೃಷ್ಣ ವಿದ್ಯಾಲಯದ  ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಾದಲ್ಲಿ ಭಾಗವಹಿಸುವ ಮೂಲಕ ಶಾಲೆಯ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದಾರೆ ಅಲ್ಲದೆ ಈ ಶಾಲೆಯಲ್ಲಿ ವ್ಯಾಸಂಗ ಮಾಡುವ ಮೂಲಕ ಇಂದು ಉನ್ನತ ಶಿಕ್ಷಣದ ಎಂ.ಬಿ.ಬಿ.ಎಸ್.ಹಾಗೂ ಇಂಜಿನಿಯರಿAಗ್ ಇನ್ನಿತರ ಶಿಕ್ಷಣ ಕ್ಷೇತ್ರದ ಆದ್ವಿತೀಯ ಸಾಧನೆ ಗೈದಿರುವ ವಿದ್ಯಾರ್ಥಿಗಳ ಸಾಧನೆಗೆ ಶ್ರೀಗಳು ಪ್ರಶಂಸೆ ವ್ಯಕ್ತಪಡಿಸಿದರು.

ಶಾರದಾ ರಾಮಕೃಷ್ಣ ಶಾಲೆಯ ಸಂಸ್ಥಾಪಕ ಅಧ್ಯಕ್ಷ ದೇವರಾಜ್ ಆಧ್ಯಕ್ಷತೆ ವಹಿಸಿದ್ದರು.

ಶಾರದಾ ರಾಮಕೃಷ್ಣ ಶಾಲೆಯ  ಮುಖ್ಯೋಪಾದ್ಯಾಯನಿ ಸರಿತಾ ದೇವರಾಜ್ ಮತ್ತು ರವಿ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *