w
Headlines
Home » Ripponpete | ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ – ಆರೋಪಿಯ ಬಂಧನ

Ripponpete | ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ – ಆರೋಪಿಯ ಬಂಧನ

Ripponpete | ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ – ಆರೋಪಿಯ ಬಂಧನ

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹರತಾಳು ಗ್ರಾಮದ ವ್ಯಕ್ತಿಯೊಬ್ಬ ಪಕ್ಕದ ಮನೆಯ ಮಹಿಳೆಯೊಬ್ಬಳೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.

 ಹರತಾಳು ಗ್ರಾಮದ ರಾಘವೇಂದ್ರ ಬಂಧಿತ ಆರೋಪಿಯಾಗಿದ್ದಾನೆ.

ಘಟನೆಯ ಹಿನ್ನಲೆ :

ಹರತಾಳು ಗ್ರಾಮದ ಮಹಿಳೆಯೊಬ್ಬರು ಪ್ರತಿ ನಿತ್ಯ ಕೂಲಿ ಕೆಲಸಕ್ಕೆ ಹೋಗುವಾಗ ಅವರ ಪಕ್ಕದ ಮನೆಯ ರಾಘವೇಂದ್ರ ಎಂಬಾತ ಕಾಡಿನ ಹತ್ತಿರ ಬಂದು ನೀನು ನನಗೆ ಇಷ್ಟ ಆಗಿದ್ದೀಯಾ ನೀನು ನನಗೆ ಬೇಕು’ ಎಂದು ಹಿಂಸೆ ಮಾಡುತ್ತಿದ್ದನು. ಮಹಿಳೆಯು ನನಗೆ ಗಂಡ ಮತ್ತು ಎರಡು ಜನ ಮಕ್ಕಳಿದ್ದಾರೆ ನೀನು ಹೀಗೆಲ್ಲ ನಮಗೆ ತೊಂದರೆ ಕೊಡಬೇಡ ಹಲವು ಬಾರಿ ಬುದ್ದಿವಾದ ಹೇಳಿ ನಿನಗೆ ಹೆಂಡತಿ ಮಕ್ಕಳು ಇದ್ದಾರೆ ಅಲ್ಲಿಗೆ ಹೋಗಿ ನೀನು ಅವರೊಂದಿಗೆ ಚೆನ್ನಾಗಿರು ಎಂದು ಬುದ್ದಿವಾದ ಹೇಳಿದ್ದರು. ಆ ನಂತರದಲ್ಲಿ ಮಹಿಳೆಯ ಪತಿಗೆ ವಿಚಾರ ತಿಳಿದು ಆರೋಪಿಗೆ ಬುದ್ದಿವಾದ ಹೇಳಿ ಕಳುಹಿಸಿದ್ದರು.

ಆದರೆ ದಿನಾಂಕ: 27/12/2023 ರಂದು ಬೆಳಿಗ್ಗೆ ಮಹಿಳೆ ಎಂದಿನಂತೆ ಕೆಲಸಕ್ಕೆ ಬೆಳಿಗ್ಗೆ 9-00 ಗಂಟೆಗೆ ಮನೆಯಿಂದ ಹೊರಟಿದ್ದು, ಮನೆಯ ಎದುರಿನ ಮಠದ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಠದ ಕಾಡಿನ ದಾರಿಯಲ್ಲಿ ಪಕ್ಕದ ಮನೆಯ ರಾಘವೇಂದ್ರ ಹೊಂಚು ಹಾಕಿ ಕುಳಿತು ಒಮ್ಮಲೆ ಅಡ್ಡ ಬಂದು ಮಹಿಳೆಯನ್ನು ಮುಂದೆ ಹೋಗದಂತೆ ತಡೆದು ನೀನು ನನಗೆ ಬೇಕು ನೀನು ಇಲ್ಲಿಂದ ಹೋಗಲು ಬಿಡುವುದಿಲ್ಲ ಎಂದು ಹೇಳುತ್ತಾ ಮಹಿಳೆಯ ಕೈ ಹಿಡಿದು ಎಳೆದಾಡಿದ್ದು ಕೈ ಮೇಲೆ ಹೊಡೆದಿದ್ದಾರೆ.ಈ ಸಂಧರ್ಭದಲ್ಲಿ ಮಹಿಳೆ ಅವನಿಂದ ತಪ್ಪಿಸಿಕೊಂಡು ಕಾಲು ದಾರಿಯಲ್ಲಿ ಮುಂದೆ ಹೋದಾಗ ಅವಾಚ್ಯವಾಗಿ‌ ನಿಂದಿಸಿ ನೀನು ನನ್ನ ಜೊತೆ ಬರಲಿಲ್ಲವೆಂದರೆ ನಿನ್ನ ಗಂಡನಿಗೆ ಹೊಡೆದು ಸಾಯಿಸುತ್ತೇನೆ. ನಿನ್ನ ಮಕ್ಕಳಿಗೆ ತೊಂದರೆ ನೀಡುತ್ತೇನೆ ಎಂದೆಲ್ಲ ಬೆದರಿಕೆ ಹಾಕಿದ್ದಾನೆ.

ಘಟನೆ ಬಗ್ಗೆ ಮಹಿಳೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಆರೋಪಿಯನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.