Headlines

ರಾಗಿಗುಡ್ಡದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ!!! 30 ಕ್ಕೂ ಹೆಚ್ಚು ಮಂದಿ ವಶಕ್ಕೆ! ಘಟನೆ ಬಗ್ಗೆ ಎಸ್​ಪಿ ಮತ್ತು ಶಾಸಕರು ಹೇಳಿದ್ದೇನು?

ರಾಗಿಗುಡ್ಡದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ!!! 30 ಕ್ಕೂ ಹೆಚ್ಚು ಮಂದಿ ವಶಕ್ಕೆ! ಘಟನೆ ಬಗ್ಗೆ ಎಸ್​ಪಿ ಮತ್ತು ಶಾಸಕರು ಹೇಳಿದ್ದೇನು?

ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ನಿನ್ನೆ ಪೊಲೀಸರ ಮೇಲೆಯೇ ನಡೆದ ಕಲ್ಲೂ ತೂರಾಟ  ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಇದುವರೆಗೂ 30 ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗಕ್ಕೆ ಹಿರಿಯ ಅಧಿಕಾರಿ ಮುರುಗನ್ ಆಗಮಿಸಿದ್ದಾರೆ ಎನ್ನಲಾಗಿದ್ದು, ಎಡಿಜಿಪಿ ಹಿತೇಂದ್ರ ಕೂಡ ಇವತ್ತು ಆಗಮಿಸುವ ಸಾದ್ಯತೆ ಇದೆ. 

 ನಿನ್ನೆ ರಾಗಿಗುಡ್ಡದಲ್ಲಿ ನಡೆದ ಗಲಾಟೆ ಸಂಬಂಧ ಪೊಲೀಸರು ವಿಡಿಯೋಗಳನ್ನು ಪರಿಶೀಲಿಸುತ್ತಿದ್ದಾರೆ. ಮೆರವಣಿಗೆಯಲ್ಲಿ ಪಾಲ್ಗೊಂಡವರ ಪೈಕಿ ಯಾರೆಲ್ಲಾ ಗಲಾಟೆ ಮಾಡಿದ್ದಾರೆ. ಸಿಸಿಟಿವಿಯಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳು ಯಾರ್ಯಾರು ಎಂದು ಹುಡುಕಾಡುತ್ತಿದ್ದಾರೆ. ಫೋಟೋ ಹಾಗೂ ವಿಡಿಯೋಗಳನ್ನು ಪಡೆದುಕೊಂಡು ಪೊಲೀಸರು ತಡರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿದ್ದಾರೆ. 

ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ನಿನ್ನೆ ಸಂಜೆ ನಡೆದ ಘಟನೆ ಹಾಗೂ ಕಲ್ಲೂ ತೂರಾಟದ ಬಗ್ಗೆ ನಿನ್ನೆ ರಾತ್ರಿಯೇ ಪ್ರತಿಕ್ರಿಯಿಸಿದ್ದಾರೆ. ಈದ್ ಮಿಲಾದ್ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿದೆ, ಇದರಿಂದ ಕೆಲ ವಾಹನ, ಮನೆ ಜಖಂಗೊಂಡಿದೆ,  ಪೊಲೀಸ್ ಸೇರಿದಂತೆ ಕೆಲವರ ಮೇಲೆ ಕಲ್ಲು ಬಿದ್ದಿದೆ ಎಂದು ತಿಳಿಸಿದ ಅವರು, ಆನಂತರ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಅಲ್ಲದೆ , ಸ್ಥಳೀಯ ಪೊಲೀಸ್ ಮಾಹಿತಿ ಮತ್ತು ವಿಡಿಯೊ ಹಾಗೂ ಮಾಹಿತಿ ಆಧರಿಸಿ ಕಿಡಿಗೇಡಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿರುವ ಅವರು,  2 ಆರ್ ಎ ಎಫ್ ತುಕಡಿ, 20 ಕೆಎಸ್ಆರ್ಪಿ, 500 ಗೃಹ ರಕ್ಷಕದಳ  ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. 

ಕಲ್ಲು ಏಟು ಬಿದ್ದಿರುವ ಪೊಲೀಸ್ ಸಿಬ್ಬಂದಿಯಿಂದಲೂ ದೂರು ಪಡೆದು ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿರುವ ಎಸ್​ಪಿ ಮಿಥುನ್ ಕುಮಾರ್, ಶಾಂತಿನಗರ-ರಾಗಿಗುಡ್ಡ ಹೊರತುಪಡಿಸಿ ಉಳಿದೆಡೆ ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ನಡೆದಿದೆ ತಿಳಿಸಿದ್ದಾರೆ. ವದಂತಿಗಳಿಗೆ ಯಾರೂ ಕಿವಿಗೊಡಬಾರದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ತಿಳಿಸಿದ್ದಾರೆ. 

ಶಾಸಕ ಚನ್ನಬಸಪ್ಪ ಹೇಳಿದ್ದೇನು..???

ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಸ್ಥಳೀಯ ಶಾಸಕ ಎಸ್.ಎನ್.ಚನ್ನಬಸಪ್ಪ, ಈದ್ ಮಿಲಾದ್ ಮೆರವಣಿಗೆ ಹೋಗುತ್ತಿದ್ದ ವೇಳೆ ಹಿಂಭಾಗದಿಂದ ಬಂದಂತಹ ಅನ್ಯಗುಂಪೊಂದು ಕಲ್ಲು ತೂರಾಟ ನಡೆಸಿದ್ದು, ಉದ್ವಿಗ್ನತೆಗೆ ಕಾರಣವಾಗಿದೆ. ಘಟನೆಯಲ್ಲಿ ಎಸ್ಪಿ ಗನ್‌ಮ್ಯಾನ್ ಹಾಗೂ ಓರ್ವ ಪೊಲೀಸ್ ಅಧಿಕಾರಿಗೆ ಪೆಟ್ಟಾಗಿದೆ ಎಂಬ ಮಾಹಿತಿ ಇದೆ ಎಂದು ಹೇಳಿದ್ದಾರೆ.

ಹಬ್ಬ ಶಾಂತಿಯುತವಾಗಿ ನಡೆದಿದೆ. ಆದ್ರೆ ಘಟನೆ ನಡೆದಂತಹ ಸಂದರ್ಭದಲ್ಲಿ ಉತ್ತರ ಪ್ರದೇಶದಿಂದ ಬಂದ ವಾಹನಗಳು ಕಂಡುಬಂದಿವೆ. ಅವು ಏಕೆ ಬಂದಿದ್ದವು ಅನ್ನೋ ಬಗ್ಗೆ ಅನುಮಾನ ಹುಟ್ಟಿಕೊಂಡಿದೆ. ಈ ರೀತಿಯ ವಾಹನಗಳನ್ನ ಹೊರಗೆ ಹೋಗದ ರೀತಿ ನೋಡಿಕೊಳ್ಳಬೇಕು. ಕಲ್ಲು ತೂರಾಟ ಯಾರು ಮಾಡಿದ್ರು? ಏಕೆ ಮಾಡಿದ್ರು ಅನ್ನೋದು ಗೊತ್ತಾಗಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಗಣೇಶ ವಿಸರ್ಜನೆ ಮೆರವಣಿಗೆ ಹಾಗೂ ಈದ್ ಮಿಲಾದ್ ಹಬ್ಬದ ಮೆರವಣಿಗೆ ಚೆನ್ನಾಗಿ ಆಗಿದೆ. ಇನ್ನೇನು ಮುಕ್ತಾಯ ಹಂತದ ಸಂರ್ಭದಲ್ಲಿ ಈ ರೀತಿ ಘಟನೆ ಸಂಭವಿಸಿದೆ. ಈ ಘಟನೆಯಿಂದ ಅನೇಕ ಮನೆಗಳು ಹಾಗೂ ವಾಹನಗಳು ಜಖಂ ಆಗಿವೆ. ಭಯದ ವಾತಾವರಣ ಸೃಸ್ಟಿಯಾಗಿದೆ. ಟಿಪ್ಪುವಿನ ಕಾರಣ ಬಲಿಷ್ಠವಾಗಿ ನಿಂತುಕೊಂಡು ಬಿಡ್ತು ಅನಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಇಲಾಖೆ ಸಕಲ ಬಂದೋಬಸ್ತ್ ಮಾಡಿದೆ. ಹೊರನಿಂದ ಬಂದವರೇ ಈ ಕೃತ್ಯ ಎಸಗಿದ್ದಾರೆ. ಇಂದರಿಂದ ನಾಗರಿಕರು ಭಯಪಡುವ ಅವಶ್ಯಕತೆಯಿಲ್ಲ. ನಿಮಗೇನಾದರೂ ತೊಂದರೆಯಾಗಿದ್ದರೆ ನಮ್ಮ ಗಮನಕ್ಕೆ ತನ್ನಿ. ನಾವು ನಿಮ್ಮ ಜೊತೆಗಿದ್ದೇವೆ ಎಂದು ಅಭಯ ನೀಡಿದ್ದಾರೆ.

Leave a Reply

Your email address will not be published. Required fields are marked *