ಹೊಸನಗರ : ತಾಲೂಕಿನ ಬಿದನೂರು ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಹಝ್ರತ್ ಶೇಖುಲ್ ಮಾಷುಂಷಾ ವಲಿಯುಲ್ಲಾ ದರ್ಗಾದ 2022-23 ರ ಉರೂಸ್ ಸಮಾರಂಭದ ದಿನಾಂಕ ನಿಗದಿಯಾಗಿದೆ.
ಇಂದು ದರ್ಗಾ ಸಮಿತಿ ಅಧ್ಯಕ್ಷರಾದ ಜೆ ಮಹಮ್ಮದ್ ಸಾಬ್ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ಮೇ 13,14,15,16 ರ ನಾಲ್ಕು ದಿನ ಉರೂಸ್ ಕಾರ್ಯಕ್ರಮ ನಡೆಸಲು, ಉರೂಸ್ ಸಮಾರಂಭಕ್ಕೆ ಮಂತ್ರಿಗಳು ಹಾಗೂ ಶಾಸಕರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ.
ಉರೂಸ್ ಸಮಾರಂಭವನ್ನು ಸರ್ಕಾರ ಸುತ್ತೋಲೆಯಂತೆ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಸಭೆಯಲ್ಲಿ ವಿನಾಯಕ ಉಡುಪ ,ಆರ್ ಎ ಚಾಬುಸಾಬ್ ರಿಪ್ಪನ್ ಪೇಟೆ, ಜಿ ರಹೆಮಾನ್ , ನಿಟ್ಟೂರು ಅಬ್ದುಲ್ಲಾ,ಇಸೂಬ್ ಸಾಬ್,ಕಚ್ಚಿಗೆಬೈಲ್ ಸಾಧಿಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಉರೂಸ್ ಹಿನ್ನೆಲೆ:
ಹಿರಿಯ ಸ್ವಾತಂತ್ರ ಹೋರಾಟಗಾರ ಎನ್. ವೆಂಕಟರಮಣ ಉಡುಪರಿಗೆ 46 ವರ್ಷದ ಹಿಂದೆ ಅವರ ಕನಸ್ಸಿನಲ್ಲಿ ಬಂದ ಹಝ್ರತ್ ಅವರು ಜನವಸತಿ ಇರದ ನಿರ್ಜನ ಪ್ರದೇಶವೊಂದರಲ್ಲಿ ನೆಲೆನಿಂತಿದ್ದು ವರ್ಷಂಪ್ರತಿ ಉರೂಸ್ ಆಚರಿಸಲು ಸೂಚನೆ ನೀಡಿದ್ದರು. ಆನಂತರ ಸಿ.ವೆಂಕಟರಮಣ ಉಡುಪರ ನೇತೃತ್ವದಲ್ಲಿ ಉರೂಸ್ ನಡೆಯುತ್ತಾ ಬಂದಿದೆ. ಅವರ ಕಾಲಾ ನಂತರ ಅವರ ಮಗ ವಿನಾಯಕ ಉಡುಪರ ನೇತೃತ್ವದಲ್ಲಿ ಮುಂದುವರಿದಿದೆ. ಹಿಂದೂ-ಮುಸ್ಲಿಮ್ ಭಾವೈಕ್ಯತಾ ತಾಣವಾಗಿ ನಗರ ದರ್ಗಾ ಮಹತ್ವ ಪಡೆದಿದೆ. ವರ್ಷಂ ಪ್ರತಿ ನಡೆಯುವ ಉತ್ಸವದಲ್ಲಿ ಮುಸ್ಲಿಮ್ ಸಮುದಾಯ ಮಾತ್ರವಲ್ಲದೆ ಬಹುತೇಕ ಹಿಂದೂಗಳು ಈ ದರ್ಗಾಕ್ಕೆ ಬರುತ್ತಿರುವುದು ಇಲ್ಲಿಯ ವಿಶೇಷವಾಗಿದೆ.