ಜಿಲ್ಲಾ ಸುದ್ದಿ:
ಆಯನೂರು – ರಿಪ್ಪನ್ಪೇಟೆ ನಾಲ್ಕು ದಿನ ರಸ್ತೆ ಸಂಚಾರ ತಾತ್ಕಾಲಿಕ ಬಂದ್: ಬದಲಿ ಮಾರ್ಗ ಇಲ್ಲಿದೆ ನೋಡಿ !
ಆಯನೂರು – ರಿಪ್ಪನ್ಪೇಟೆ ನಾಲ್ಕು ದಿನ ರಸ್ತೆ ಸಂಚಾರ ತಾತ್ಕಾಲಿಕ ಬಂದ್: ಬದಲಿ ಮಾರ್ಗ ಇಲ್ಲಿದೆ ನೋಡಿ ! ಶಿವಮೊಗ್ಗ – ರಿಪ್ಪನ್ಪೇಟೆ ರೈಲ್ವೆ ಮಾರ್ಗದಲ್ಲಿ ನಡೆಯುತ್ತಿರುವ ಪರೀಕ್ಷಾ ಕಾರ್ಯಗಳ ಹಿನ್ನೆಲೆ ಅ.23 ರಿಂದ 26ರವರೆಗೆ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಸಂಚಾರ ನಿಷೇಧ ಅವಧಿ ▪ ಅ.23 ಬೆಳಿಗ್ಗೆ 7 ಗಂಟೆಯಿಂದ – ಅ.24 ಸಂಜೆ 6 ಗಂಟೆಯವರೆಗೆಅರಸಾಳು ರೈಲ್ವೆ ಗೇಟ್ ಹತ್ತಿರ ಮಾರ್ಗ ಪರಿಶೀಲನೆ…
ರಿಪ್ಪನ್ಪೇಟೆ | ಹಿರೇಸಾನಿಯಲ್ಲಿ ಅ.23 ರಂದು ಥಲಸ್ಸೆಮಿಯಾ ಮಕ್ಕಳಿಗಾಗಿ ರಕ್ತದಾನ ಶಿಬಿರ
ಹಿರೇಸಾನಿಯಲ್ಲಿ ಅ.23 ರಂದು ಥಲಸ್ಸೆಮಿಯಾ ಮಕ್ಕಳಿಗಾಗಿ ರಕ್ತದಾನ ಶಿಬಿರ ಶಿವಮೊಗ್ಗ: ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಮಕ್ಕಳು ಥಲಸ್ಸೆಮಿಯಾ ರೋಗದಿಂದ ಹುಟ್ಟಿಕೊಳ್ಳುತ್ತಿದ್ದಾರೆ. ತಲಸ್ಸೇಮಿಯಾ ರಕ್ತಕಣಗಳ ಸರಿಯಾದ ಉತ್ಪತ್ತಿ ತಡೆಯುವ ರೋಗವಾಗಿದೆ, ಇದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಸರಿಯಾಗಿ ಉತ್ಪತ್ತಿಯಾಗುವುದಿಲ್ಲ. ಈ ಹಿನ್ನೆಲೆಯಲ್ಲೇ, ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಸಾನಿ ಗ್ರಾಮದಲ್ಲಿ ಮಲ್ನಾಡ್ ಗ್ರೂಪ್ಸ್ ಹಾಗೂ ಮೆಗ್ಗಾನ್ ಆಸ್ಪತ್ರೆ ರಕ್ತನಿಧಿ ವಿಭಾಗದ ಸಹಯೋಗದಲ್ಲಿ 23 ಅಕ್ಟೋಬರ್ 2025 ರಂದು ಸಾರ್ವಜನಿಕ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರವು ಸರ್ಕಾರಿ…
ರಿಪ್ಪನ್ಪೇಟೆಯಲ್ಲಿ ನಿವೃತ್ತ ಯೋಧ ಗಿರೀಶ್ ಗೆ ಗೌರವ ಸಮರ್ಪಣೆ
ರಿಪ್ಪನ್ಪೇಟೆಯಲ್ಲಿ ನಿವೃತ್ತ ಯೋಧ ಗಿರೀಶ್ ಗೆ ಗೌರವ ಸಮರ್ಪಣೆ ರಿಪ್ಪನ್ ಪೇಟೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಪಿ. ರಮೇಶ್ ಅವರ ಮಾಲೀಕತ್ವದ ಸಾಗರ ರಸ್ತೆಯಲ್ಲಿರುವ ಪಿ.ವಿ. ಸ್ಟೋರ್ನಲ್ಲಿ ಭಾರತೀಯ ಸೇನೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ಗಿರೀಶ್ ಅವರಿಗೆ ಗೌರವ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಯೋಧರಿಗೆ ಶಾಲು ಹೊದಿಸಿ, ಫಲತಾಂಬೂಲ ಮತ್ತು ನೆನಪಿನ ಕಾಣಿಕೆ ನೀಡಿ ಅವರ ಸೇವಾಭಾವವನ್ನು ಸ್ಮರಿಸಲಾಯಿತು. ನಂತರ ಸಿಹಿ ತಿನ್ನಿಸಿ ನಿವೃತ್ತಿ ಜೀವನವು ಸುಖಮಯವಾಗಿ ಮತ್ತು…
RIPPONPETE | ಬೈರಾಪುರದಲ್ಲಿ ಪಂಚಲೋಹ ದೇವರ ಮೂರ್ತಿಗಳ ಕಳವು ,ಗ್ರಾಮಸ್ಥರಲ್ಲಿ ಆತಂಕ, ನೋನಿ ಸಂಪ್ರದಾಯಕ್ಕೆ ಧಕ್ಕೆ!!
RIPPONPETE | ಬೈರಾಪುರದಲ್ಲಿ ಪಂಚಲೋಹ ದೇವರ ಮೂರ್ತಿಗಳ ಕಳವು ,ಗ್ರಾಮಸ್ಥರಲ್ಲಿ ಆತಂಕ, ನೋನಿ ಸಂಪ್ರದಾಯಕ್ಕೆ ಧಕ್ಕೆ!! ರಿಪ್ಪನ್ಪೇಟೆ : ಬೆನವಳ್ಳಿ ಗ್ರಾಮದ ವ್ಯಾಪ್ತಿಯ ಮುಡುಬ ಬೈರಾಪುರ ಭಾಗದಲ್ಲಿ ಭೂಮಿಗಡಿಯಲ್ಲಿ ಪರಂಪರೆಯಾಗಿ ಪ್ರತಿಷ್ಠಾಪಿಸಲಾಗಿದ್ದ ಪಂಚಲೋಹದ ದೇವರ ಮೂರ್ತಿಗಳು ಕಳವಾಗಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಪ್ರತಿವರ್ಷ ದೀಪಾವಳಿ ಹಬ್ಬದ ನೋನಿ ಆಚರಣೆಯ ಅಂಗವಾಗಿ ಗ್ರಾಮಸ್ಥರು ಬನಕ್ಕೆ ತೆರಳಿ ಕಳೆದ ವರ್ಷ ಮಡಿಕೆಯಲ್ಲಿ ಇಟ್ಟು ಭೂಮಿಗೆ ಮುಚ್ಚಿ ಇರಿಸಿದ್ದ ಮೂರ್ತಿಗಳನ್ನು ಹೊರತೆಗೆದು ಪೂಜೆ ಸಲ್ಲಿಸುವುದು ಪರಂಪರೆಯಾಗಿತ್ತು , ಇದೇ ಪ್ರಕಾರ …
RIPPONPETE | 22 ವರ್ಷ ರಾಷ್ಟ್ರ ಸೇವೆ ಸಲ್ಲಿಸಿ ತವರಿಗೆ ಹಿಂದಿರುಗಿದ ಹೆಮ್ಮೆಯ ಯೋಧನಿಗೆ ಅದ್ದೂರಿ ಸ್ವಾಗತ
RIPPONPETE | 22 ವರ್ಷದ ರಾಷ್ಟ್ರ ಸೇವೆ ಸಲ್ಲಿಸಿ ತವರಿಗೆ ಹಿಂದಿರುಗಿದ ಹೆಮ್ಮೆಯ ಯೋಧನಿಗೆ ಅದ್ದೂರಿ ಸ್ವಾಗತ ರಿಪ್ಪನ್ಪೇಟೆ: ದೇಶರಕ್ಷಣೆಯ ಕರ್ತವ್ಯವನ್ನು 22 ದೀರ್ಘ ವರ್ಷಗಳ ಕಾಲ ನಿರಂತರವಾಗಿ ನಿಭಾಯಿಸಿ ಗೌರವಪೂರ್ವಕ ನಿವೃತ್ತರಾಗಿರುವ ಗಿರೀಶ್ ಅವರು ತಮ್ಮ ಹೆಮ್ಮೆಯ ನಾಡಿಗೆ ಭಾನುವಾರ ಸಂಜೆ ಆಗಮಿಸಿದ್ದು ಗ್ರಾಮಸ್ಥರು ಅದ್ಭುತವಾದ ಗೌರವ ಸಮರ್ಪಣೆಯ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡರು. ಮೆಸ್ಕಾಂನ ನಿವೃತ್ತ ಉದ್ಯೋಗಿ ಮೋಹನ್ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರನಾದ ಗಿರೀಶ್, 2003ರಲ್ಲಿ ಭಾರತೀಯ ಸೇನೆಗೆ ಸೇರಿದ್ದು ದೇಶದ ವಿವಿಧ ಗಡಿಭಾಗಗಳಲ್ಲಿ…
ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡಿದರೆ ತಮ್ಮ ಕಛೇರಿ ಮುಂದೆ ಧರಣಿ ನಡೆಸಲಾಗುವುದು ; ಹರತಾಳು ಹಾಲಪ್ಪ ಎಚ್ಚರಿಕೆ
ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡಿದರೆ ತಮ್ಮ ಕಛೇರಿ ಮುಂದೆ ಧರಣಿ ನಡೆಸಲಾಗುವುದು ; ಹರತಾಳು ಹಾಲಪ್ಪ ಎಚ್ಚರಿಕೆ ಹೊಸನಗರ ; ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪನೆಗೊಂಡ ಬಳಿಕ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ವಿಷಯದಲ್ಲಿ ಸಂಪೂರ್ಣ ವೈಫಲ್ಯ ಕಂಡುಬಂದಿದೆ. ಅದು ಅಲ್ಲದೇ ಹೊಸನಗರ ತಾಲ್ಲೂಕಿನ ಅಧಿಕಾರಿಗಳು ಶಾಸಕರ ಮತ್ತು ಅವರ ಹಿಂಬಾಲಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು ಬಡವರಿಗೆ, ರೈತರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಹಿಂಸೆ ನೀಡುತ್ತಿದ್ದಾರೆ. ಇನ್ಮುಂದೆ ಶಾಸಕರ ಹಾಗೂ ಅವರ ಹಿಂಬಾಲಕರ ಆಟ ನಡೆಯುವುದಿಲ್ಲ…
ಸೇವಾಭಾವದಿಂದ ಮೂಡಿ ಬಂದ ‘ನಿಜವಾದ ಹಿಂದುತ್ವ’ಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಮಾದರಿ – ನಾಗೇಂದ್ರ ಜೋಗಿ
ಸೇವಾಭಾವದಿಂದ ಮೂಡಿ ಬಂದ ‘ನಿಜವಾದ ಹಿಂದುತ್ವ’ಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಮಾದರಿ – ನಾಗೇಂದ್ರ ಜೋಗಿ ನಿಟ್ಟೂರು ಭಾಗದಲ್ಲಿ ಅಭಿವೃದ್ಧಿ ಚುರುಕು – ಶಾಸಕರ ಪ್ರಯತ್ನಕ್ಕೆ ಗ್ರಾಮಸ್ಥರಿಂದ ಕೃತಜ್ಞತೆ ದೇವಸ್ಥಾನಗಳ ಅಭಿವೃದ್ದಿಗೆ ಕ್ಷೇತ್ರದಾದ್ಯಂತ ನಾಲ್ಕು ಕೋಟಿಗೂ ಹೆಚ್ಚು ಅನುದಾನ ಸಾಗರ–ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಹಿಂದುತ್ವವನ್ನು ಕೇವಲ ರಾಜಕೀಯ ಘೋಷಣೆ ಅಥವಾ ಪ್ರಚಾರದ ರೂಪದಲ್ಲಿ ಆಚರಿಸುವವರಲ್ಲ, ಬದಲಾಗಿ ಅದನ್ನು ಹೃದಯಪೂರ್ವಕವಾಗಿ ಜೀವನದಲ್ಲಿ ಅಳವಡಿಸಿಕೊಂಡಿರುವ ಉದಾಹರಣೆಯಾಗಿದ್ದಾರೆ ಎಂದು ಕೆಡಿಪಿ ಸದಸ್ಯ ಹಾಗೂ ನಿಟ್ಟೂರು ಬ್ಲಾಕ್…
ಆತ್ಮ ನಿರ್ಭರ ಯೋಜನೆಯಡಿ ಸ್ವದೇಶಿ ವಸ್ತುಗಳ ಬಳಕೆಗೆ ಆದ್ಯತೆ ನೀಡಿ – ಹರತಾಳು ಹಾಲಪ್ಪ
ಆತ್ಮ ನಿರ್ಭರ ಯೋಜನೆಯಡಿ ಸ್ವದೇಶಿ ವಸ್ತುಗಳ ಬಳಕೆಗೆ ಆದ್ಯತೆ ನೀಡಿ – ಹರತಾಳು ಹಾಲಪ್ಪ ರಿಪ್ಪನ್ಪೇಟೆ ; ಕೇಂದ್ರ ಸರ್ಕಾರ ಮೋದಿಜಿಯವರ ಪರಿಕಲ್ಪನೆಯಂತೆ ಆತ್ಮನಿರ್ಭರ ಯೋಜನೆಯಡಿ ಪ್ರತಿಯೊಬ್ಬ ಭಾರತೀಯರು ಸ್ವದೇಶಿ ವಸ್ತುಗಳನ್ನು ಬಳಕೆ ಮಾಡಿದಲ್ಲಿ ದೇಶ ಪ್ರಗತಿ ಪಥದತ್ತ ಸಾಗಲು ಸಾಧ್ಯವಾಗುವುದು.ಮಹಾತ್ಮ ಗಾಂಧಿಜೀಯವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಘೋಷಣೆಯಡಿ ಅವರು ಧರಿಸುತ್ತಿದ್ದ ಬಟ್ಟೆಯನ್ನು ಸಹ ತ್ಯಜಿಸಿ ಚರಕದಿಂದ ಉತ್ಪಾದಿಸಿದ ನೂಲಿನಿಂದ ತಯಾರಾದ ಖಾದಿ ಬಟ್ಟೆಗಳನ್ನು ಬಳಸುವುದರೊಂದಿಗೆ ದೇಶಿಯ ಸಂಸ್ಕೃತಿಯನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕು ಎಂದು ಮಾಜಿ ಸಚಿವ…
ರಿಪ್ಪನ್ಪೇಟೆ – 33 ವರ್ಷದ ಮಹಿಳೆ ಕ್ಯಾನ್ಸರ್ಗೆ ಬಲಿ | “ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸೋತ ಗೀತಾ”
ರಿಪ್ಪನ್ಪೇಟೆ – 33 ವರ್ಷದ ಮಹಿಳೆ ಕ್ಯಾನ್ಸರ್ಗೆ ಬಲಿ | “ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸೋತ ಗೀತಾ” ರಿಪ್ಪನ್ಪೇಟೆ – ಮಹಾಮಾರಿ ಕ್ಯಾನ್ಸರ್ ಗೆ ಇನ್ನೂ ಬಾಳಿ ಬದುಕಬೇಕಾಗಿದ್ದ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಪಟ್ಟಣದ ವ್ಯಾಪ್ತಿಯಲ್ಲಿ ನಡೆದಿದೆ. ಗವಟೂರು ಗ್ರಾಮದ 33 ವರ್ಷದ ಗೀತಾ ಎಂಬ ಯುವತಿ ಮಹಾಮಾರಿ ಕ್ಯಾನ್ಸರ್ನಿಂದ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ. ಪತಿ ಅನಿಲ್ ಕುಮಾರ್ ಅವರನ್ನು ಅಗಲಿದ ಗೀತಾ ಕಳೆದ ಕೆಲವು ತಿಂಗಳಿನಿಂದ ದುಸ್ತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಮೂಲತಃ ಆರೋಗ್ಯವಂತಳಾಗಿದ್ದ…
ಹೊಸನಗರ ತಾಲೂಕ್ ನೂತನ ತಹಶೀಲ್ದಾರ್ ಆಗಿ ಭರತ್ ರಾಜ್ ನೇಮಕ
ಹೊಸನಗರ ತಾಲೂಕ್ ನೂತನ ತಹಶೀಲ್ದಾರ್ ಆಗಿ ಭರತ್ ರಾಜ್ ನೇಮಕ ಹೊಸನಗರ: ಹೊಸನಗರ ತಾಲೂಕಿನ ನೂತನ ತಹಶೀಲ್ದಾರ್ ಆಗಿ ಭರತ್ ರಾಜ್ ಅವರನ್ನು ನೇಮಕ ಮಾಡಲಾಗಿದೆ. ಹಾಲಿ ಪ್ರಭಾರ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರನ್ನು ಸಾಗರ ತಾಲೂಕು ತಹಶೀಲ್ದಾರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಭರತ್ ರಾಜ್ ಅವರು ಪೂರ್ವದಲ್ಲಿ ಗದಗ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಉತ್ತಮ ಆಡಳಿತ ಕೌಶಲ್ಯ ಮತ್ತು ಕಾರ್ಯನಿಷ್ಠೆಗಾಗಿ ಪರಿಚಿತರಾದ ಅವರು, ಇದೀಗ ಹೊಸನಗರ ತಾಲೂಕಿನಲ್ಲಿ ತಮ್ಮ…